ನಗುಮೊಗದೊಡವೆ...
ಜಾಣೆ ನೀ ನಗುವೆಯಾ
ನೋವು ನಲಿವುಗಳ ನಡುವೆ
ಕೋಪವಾ ಬಿಡುವೆಯಾ
ನಗುವೆ ಮೊಗದ ಒಡವೆ
ಪ್ರೇಮಬಳ್ಳಿಯ ಹೃದಯಕ್ಕಬ್ಬಿಸಿ
ಭಾವನೆಗಳ ಚಿಲುಮೆ ಚಿಮ್ಮಿಸಿ
ತಿರುಗಿ ನೋಡು ಒಮ್ಮೆ ನೀನು
ಬೆರೆತ ಬಾಳು ಹಾಲು ಜೇನು
ಮುಗಿಲ ಬೆಳದಿಂಗಳ ಚಂದ್ರಮೆ
ರಸಕಾವ್ಯದ ಮಧುರ ಉಪಮೆ
ನಡೆದು ಬಾ ಒಡನೆ ನುಡಿದು
ಹಾಡುವಾ ಕುಣಿದು ನಲಿದು
✍🏻 ಮಾರುತಿ ಹೆಚ್ ಬಿ
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ