*ಏಕಾಂಗಿ ಬದುಕು*
ಮಾವ ನನಗೆ ಮದುವೆ ಬೇಡ. ನನಗೆ ತನ್ನ ಚಂದ್ರಾ ನೆನಪೇ ಸಾಕು. ಹಾಗಲ್ಲಪ್ಪಾ ನಿನಗಿನ್ನೂ ಚಿಕ್ಕ ವಯಸ್ಸಿದೆ. xfಎಷ್ಟು ದಿನಾಂತ ಹೀಗೆ ಕೈಯ್ಯಿ ಬಾಯಿ ಸುಟ್ಕೋತೀಯಾ? ಮನೆಗೆ ಬಂದಾಗ ನಿನ್ನದೂ ಅಂತ ಒಂದು ಜೀವ ಇದ್ದರೆ ನೆಮ್ಮದಿ. ಬೇಡ ಮಾವ ನಾನು ಈಗಲೇ ನೆಮ್ಮದಿಯಾಗಿ ಇದ್ದೇನೆ.ಆಫೀಸಿಗೆ ಹೋಕ್ಕಂಡು. ಕಥೆ ಪಥೆ ಓದ್ಕಂಡು. ನನ್ಜೊತೆ ಬೇಜಾರು ಕಳಿಯೋಕೆ ನನ್ನ ಬ್ರೌನೀ.
ಬ್ರೌನಿಯೇನು ಹೆಂಡ್ತೀನಾ ನಿನಗೆ? ಹುಚ್ಚನ್ತಂದು. ನೋಡು. ಹುಡುಗಿಗೆ ಈಗ ಮೂವತ್ತು ವರ್ಷ. ಆರು ತಿಂಗಳಿಗೇ ಗಂಡ ಸತ್ತಾನ. ಹತ್ತು ವರ್ಷದ ಒಂದು ಹೆಣ್ಣು ಮಗಳು ಇದ್ದಾಳೆ ಆ ಹುಡ್ಗಿ ಜವಾಬ್ದಾರಿ ಗಂಡನ ಅವ್ರಜ್ಜನ್ಮನೇಯವರ್ದು. ಅವ್ರು ಮದುವೆ ಮಾಡೋದು ಬೇಡ ಅಂತಾರೆ. ಆದ್ರೆ ಹೆಣ್ಮಗ ಪಾಪ.
ಆಕೀನ ನೋಡಿದ್ರೆ ನೀನೂ ಅಯ್ಯೋ ಅಂತೀಯ.
ಧ್ರಢನಿರ್ದಾರದ ಅನಂತನ ಮನಸ್ಸೀಗ ಡೋಲಾಯಮಾನವಾಯಿತು.
ಹಾಗೆ ಇದ್ದರೆ ಇಬ್ಬರೂ ಸಮಾನ ದು:ಖಿಗಳು. ಆ ಹೆಣ್ಣು ಮಗು ನನ್ನ ಅಪ್ಪಾಂತ ಒಪ್ಕಂಡ್ರೆ ಚಿಂತೆ ಇರಲ್ಲ.ಒಪ್ಕಳ್ದಿದ್ರೆ? ಕಾಲಾನಂತರ ಎಲ್ಲಾ ಸರಹೋಗಬಹುದು. ಪಾಪ
ಅವಳು ನನ್ನ ಮಗಳಾದ ಮೇಲೆ ಅಜ್ಜಿ ಯ ಮನೆಯವರಿಗೇಕೆ ಅವಳ ಜವಾಬ್ದಾರಿ?
ಒಂದು ಶುಭ ದಿನ ಅವನು ಅನುಷಾಳನ್ನು ಭೇಟಿ ಆದ.ಅಕೆ ಅವನನ್ನು ಮದುವೆ ಆಗಲು ಒಪ್ಪಿದಳು. ಮಗಳ ಮುಖವೇಕೋ
ಸ್ವಲ್ಪ ಧುಮುಗುಡುತ್ತಿತ್ತು. ಆಕೆ ಮುಖ ತಿರುವಿದಳು.ಇನ್ನೂ ಚಿಕ್ಕೋಳು. ನಿಮ್ಮ ಪ್ರೀತಿ ಕೊಟ್ಟಷ್ಟೂ ಅವಳು ಬದಲಾಗುತ್ತಾಳೆ ಅಂದಳು ಅನುಷಾ
ಒಂದು ಶುಭದಿನ ಅನುಷಾ ಮಗಳೊಡನೆ ಮನೆಗೆ ಕಾಲಿಟ್ಟಳು.
ಇದು ಅವನ ಬದುಕಿನ ಮೊದಲನೇ ತಿರುವು!
ಆದರೆ ಏಕೋ ಅನಂತನಿಗೆ ಮಗಳು ಹೇಮಾಳ ಮನಸ್ಸು ಗೆಲ್ಲಲಾಗಲೇ ಇಲ್ಲ. ತನ್ನ ಪ್ರೀತಿಯನ್ನೆಲ್ಲಾ ಧಾರೆ ಎರೆದರೂ ಏನು ಉಡುಗೊರೆ ತಂದರೂ ಅವನು ತಂದಿದ್ದನ್ನು ಏನೂ ಸ್ವೀಕರಿಸುತ್ತಿದ್ದಿಲ್ಲ. ಮತ್ತು ಅಪ್ಪ ಎಂದು ಕರೆಯಲೇ ಇಲ್ಲ.
ಅನೂಷಳ ಗಂಡನ ಮನೆಯಿಂದ ಅವಳಿಗೊಂದು ಮನೆ ಬಂದಿತ್ತು. ಅವರು ಆ ಮನೆಗೆ ಹೋದರು. ಅನಂತನ ಮನೆಯನ್ನು ಬಾಡಿಗೆ ಕೊಟ್ಟು ಹೋದರು. ಅನೂಷಾಗೆ ಹಳೆಯ ಗಂಡನ ಪಿಂಚಣಿ ಮತ್ತು ತೌರಿನವರು ಉಡುಗೊರೆಯಾಗಿ ಕೊಟ್ಟಿದ್ದ ಎರಡು ಮಳಿಗೆಯ ಬಾಡಿಗಯು ಬರುತ್ತಿತ್ತು.
ಎರಡು ವರ್ಷಗಳ ತನಕ ಸ್ವಲ್ಪ ಸುಮ್ಮನಿದ್ದ ಹೇಮ ರಜೆ ಬಂದಾಗ ತಂದೆಯ ಮನೆಗೆ ಹೋಗುವ ರೂಡಿ ಇಟ್ಟುಕೊಂಡಿದ್ದು ಅವಳ ಅಜ್ಜ ಅಜ್ಜಿಯರ ಕುಮ್ಮಕ್ಕಿನಿಂದ ಅನಂತನ ಬಗ್ಗೆ ಇನ್ನೂ ದ್ವೇಷ ಬೆಳೆಸಿಕೊಂಡಳು.
ಎಲ್ಲಯವರೆಗೆ ಎಂದರೆ ಅವಳು ಮನೆ ಬಿಟ್ಟು ಹಾಸ್ಟೆಲು ಸೇರಿ ರಜಾದಿನಗಳಲ್ಲಿ ತಂದೆಯ ಮನೆಗೆ ಹೋಗಿ ಅನಂತನ ಮೇಲಿನ ದ್ವೇಷ ಇನ್ನಷ್ಟು ಬೆಳೆಯುವಂತಾಯಿತು.
ಹೀಗೆ ಸುಮಾರು ಏಳೆಂಟು ವರ್ಷಗಳು ಕಳೆದ ಮೇಲೆ ಅನೂಷಾಗೂ ತಾನು ಮದುವೆ ಮಾಡಿಕೊಂಡು ತಪ್ಪು ಮಾಡಿದೆ ಅನ್ನಿಸಿತ್ತು. ಯಾಕೆಂದರೆ ಅವಳಿಗೆ
ಮಗಳಿಂದ ಅಂಥಾ ಕಟು ಮಾತುಗಳ
ಸುರಿಮಳೆ ಆಗುತ್ತಿತ್ತು.ಅನುಷಾಳ ಉದಾಸೀನದಿಂದ ಅನಂತ ದಿಕ್ಕುಗಾಣದಾದ.
ಈಗ ಐ ಏ ಎಸ್ ಮಾಡಿಕೊಂಡ ಹೇಮಾಗೆ ಒಳ್ಳೇ ಕೆಲಸ ಸಿಕ್ಕಿತು. ಹಾಗೆಯೇ ಅವಳಿಗೆ ಪ್ರತಿಷ್ಟಿತ ಕುಟುಂಬದ
ಒಂದು ಸಂಬಂಧ ಕೂಡಿ ಬಂತು.
ಈಗ ಹೇಮಳ ಕರಾರು ಏನೆಂದರೆ
ತಾನು ತನ್ನ ಗಂಡ ಈ ಮನೆಗೆ ಬರಬೇಕೆಂದರೆ ಅನಂತ ಮನೆ ಬಿಟ್ಟು ತಾಯಿಯ ಸಂಬಂಧ ಕಡಿದುಕೊಂಡು ಹೊರಗೆ ಹೋಗಬೇಕು. ಇಲ್ಲವಾದರೆ ತಾಯಿ ತನ್ನನ್ನು ತೊರೆಯಬೇಕು.
ಮಾತ್ರಹ್ರದಯ ಮಗಳ ಕಡೆ ಹೊರಳಿತು. ಅನಂತನಿಗೆ
ತನ್ನ ಸಂಬಂಧ ತೊರೆದು ಮನೆ ಬಿಟ್ಟು
ಹೋಗುವಂತೆ ಹೇಳಿದಳು ಅನುಷಾ.
ಈಗ ಅನಂತನ ಬದುಕಲ್ಲಿ ಮತ್ತೆ ಹಳೆಯ ತಿರುವು. ಸಂಸಾರಿಯಾಗಿದ್ದ ಅವನೀಗ ಏಕಾಂಗಿ. ಅದೇ ಮುದಿ ಬ್ರೌನಿ ಮತ್ತೆ ಅದೇ ಅಡುಗೆ ಮತ್ತೆ ಮೊದಲಿನ ಜೀವನ!
- ಕಮಲಮ್ಮ
ನಂ.೫೭೦/ ೨೫
ಸರ್ ಎಂ ವಿ ಕಾಲೇಜ್ ರಸ್ತೆ
ಶಿವಕುಮಾರಸ್ವಾಮಿ ನಗರ
ದಾವಣಗೆರೆ ೫೭೭೦೦೫
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448241450 ಸಂಪಾದಕರು ವಿ ಮ ಸಾ ಪತ್ರಿಕೆ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ