*ಯೋಗದಿಂದ ರೋಗ ದೂರ* : ಶ್ರೀ ಸಿ.ಎಸ್.ಉಳ್ಳಾಗಡ್ಡಿ ಶಿಕ್ಷಕರು ಹಾಗೂ ಗೌರವ ಸಲಹೆಗಾರರು.
🏃🏃♀️🧎🧎♀️🏃🏃♀️🧎♀️🧎♂️
ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆ ಕೊಲ್ಹಾರ ಘಟಕದ ವತಿಯಿಂದ ಹಮ್ಮಿಕೊಂಡಿದ್ದ *ಜೂನ್ 21 ವಿಶ್ವ ಯೋಗ ದಿನ* ಪ್ರಯುಕ್ತ ಕವನ ರಚನಾ ಸ್ಪರ್ಧಾ ಕಾರ್ಯಕ್ರಮವನ್ನು ಸಾಯಂಕಾಲ 6 ಗಂಟೆಯಿಂದ 9 ಗಂಟೆಯವರೆಗೆ ನಡೆಸಲಾಯಿತು.
ರಾಜ್ಯದಾದ್ಯಂತ ಸುಮಾರು 65 ಕ್ಕೂ ಹೆಚ್ಚು ಕವಿ ಸಹೃದಯರು ಭಾಗವಹಿಸಿದ್ದು ತುಂಬಾ ಹೆಮ್ಮೆಯ ವಿಷಯ.ಕಾರ್ಯಕ್ರಮಕ್ಕೆ *ಶ್ರೀಮತಿ ಎಸ್.ಎಮ್.ಕೋರಿ. ಅಧ್ಯಕ್ಷರು ಸಿದ್ಧೇಶ್ವರ ಸಾಹಿತ್ಯ ವೇದಿಕೆ ಕೊಲ್ಹಾರ* ಪ್ರಾರ್ಥನಾಗೀತೆಯನ್ನು ಹಾಡುವುದರ ಮೂಲಕ ಚಾಲನೆ ನೀಡಿದರು. *ಶ್ರೀ ಸಿ.ಎಸ್.ಉಳ್ಳಾಗಡ್ಡಿ ಗೌರವ ಸಲಹೆಗಾರರು ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆ ಕೊಲ್ಹಾರ* ಇವರು ವಿಶ್ವ ಯೋಗ ದಿನದ ಕುರಿತು ಮಾತನಾಡಿ *ಯೋಗದಿಂದ ರೋಗ ದೂರ* ಎಂದು ಮನಮುಟ್ಟುವಂತೆ ತಿಳಿಸಿದರು. *ಶ್ರೀ ಕಾಶೀನಾಥ ಅವಟಿ ತಾಲೂಕಾ ಯೋಗ ಪ್ರಭಾರಿಗಳು ಪತಂಜಲಿ ಯೋಗ ಸಮಿತಿ ಬಸವನ ಬಾಗೇವಾಡಿ* ಇವರು ನಮ್ಮ ದೈನಂದಿನ ಬದುಕಿಗೆ ಯೋಗದ ಮಹತ್ವ ತಿಳಿಸುತ್ತ ಕೆಲವು ಆಸನಗಳನ್ನು ಮಾಡಿ ತೋರಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಮೆರಗು ತಂದುಕೊಟ್ಟರು. ಹಾಗೂ *ಮಲ್ಲಿಕಾರ್ಜುನ ಪಾಟೀಲ ಸಾ|| ಇಂಡಿ ಆತ್ಮೀಯ ಸದಸ್ಯರು ಸಿದ್ಧೇಶ್ವರ ಸಾಹಿತ್ಯ ವೇದಿಕೆ* ಇವರು ಯೋಗದ ಅರಿವು ಎಲ್ಲರಿಗೂ ಅತೀ ಅಗತ್ಯವೆಂದು ಕೆಲವು ಯೋಗದ ಸಂಗ್ರಹಗಳನ್ನು ಒದಗಿಸಿದರು.
*ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಗಿರಿಜಾ ಮಾಲಿಪಾಟೀಲ. ಪ್ರಧಾನ ಕಾರ್ಯದರ್ಶಿಗಳು ನಾನಾಗೌಡ ಮಾಲಿಪಾಟೀಲ ಜಿಲ್ಲಾ ಅಧ್ಯಕ್ಷರಾದ ರಾಹುಲ ಮರಳಿ* ಹಾಗೂ ಎಲ್ಲ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶೋಭೆ ತಂದರು.ಕಾರ್ಯಕ್ರಮದ ನಿರೂಪಣೆಯನ್ನು *ಶ್ರೀಮತಿ ಎಸ್.ಎಮ್.ಕೋರಿ ನಡೆಸಿಕೊಟ್ಟ ರು. ಶ್ರೀ ರಾಜೇಂದ್ರ ನಾವಿ* ಉಪಾಧ್ಯಕ್ಷರು ಸಿದ್ಧೇಶ್ವರ ಸಾಹಿತ್ಯ ವೇದಿಕೆ ಕೊಲ್ಹಾರ ಘಟಕ ಸರ್ವರಿಗೂ ವಂದನೆಗಳನ್ನು ತಿಳಿಸಿದರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ