ದಿನಾಂಕ 25.7.2021 ರಂದು ಸಂಜೆ ವಿಚಾರಮಂಟಪ ಸಾಹಿತ್ಯ ವೇದಿಕೆ, ದೇಹಾಂಗದಾನ ಸಾಹಿತ್ಯ ಪರಿಷತ್ತು ಹಾಗೂ ಶಾರದ ಮಹಿಳಾ ಸೇವಾ ಸಮಾಜ ಇವರ ಜಂಟಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನದ ಮಹತ್ವ ಎಂಬ ವಿಷಯದ ಮೇಲಿನ ಉಪನ್ಯಾಸ ಕವಿಗೋಷ್ಠಿ ಹಾಗೂ ಕವನ ವಾಚನ ಸ್ಪರ್ಧೆ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಕಾರ್ಯಕ್ರಮವನ್ನು ಶ್ರೀಮತಿ ಚಿನ್ಮಯಿ ಪಾಟೀಲ ಅವರ ಸುಶ್ರಾವ್ಯ ಸಂಗೀತದೊಂದಿಗೆ ಪ್ರಾರಂಭಿಸಿಲಾಯಿತು. ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಶ್ರೀಮತಿ ಸವಿತಾ ಕುಸುಗಲ್ ಅವರು ನೆರವೇರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಮತಿ ಗಿರಿಜಾ ಮಾಲಿ ಪಾಟೀಲ್ ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಕರ್ನಾಟಕ ಇವರು ಮತ್ತು ಶ್ರೀ ಅಂಜನ್ ಕುಮಾರ್ ಪಿ ಆರ್ ಅಧ್ಯಕ್ಷರು ವಿಚಾರ ಮಂಟಪ ಸಾಹಿತ್ಯ ವೇದಿಕೆ ಕರ್ನಾಟಕ ಇವರು ಹಾಗೂ ಶ್ರೀ ವೀರೇಶ ಆರ್ ಬಿ ಸಂಸ್ಥಾಪಕರು ಜ್ಞಾನ ತೃಷೆ ಕನ್ನಡ ವೇದಿಕೆ ಇವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ತೀರ್ಪುಗಾರ ಸ್ಥಾನವನ್ನು ವೆಂಕಟೇಶ್ ಶ್ರೀ ಇವರು ವಹಿಸಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ರಕ್ತದಾನದ ಮಹತ್ವದ ಬಗ್ಗೆ ಶ್ರೀಮತಿ ಕಲ್ಪನ ಡಿ ಎನ್ ಪ್ರಧಾನ ನಿರ್ವಾಹಕಿ , ದೇಹಾಂಗದಾನ ಸಾಹಿತ್ಯ ಪರಿಷತ್ತು ಕರ್ನಾಟಕ ಬಳಗ ಇವರು ಉಪನ್ಯಾಸ ವನ್ನು ನೀಡಿದರು.
ಶ್ರೀಮತಿ ಕಲ್ಪನಾ ಡಿ ಎನ್ ಅವರು ಮಾತನಾಡುತ್ತಾ ರಕ್ತದಾನದ ಮಹತ್ವ , ರಕ್ತ ದಾನ ಮಾಡುವುದರಿಂದ ರಕ್ತ ಪಡೆದವರಿಗೆ ಮರುಜೀವ ಸಿಕ್ಕರೆ , ರಕ್ತದಾನ ಮಾಡಿದವರಿಗೂ ಸಹಾ ಅದರಿಂದ ಸಾಕಷ್ಟು ಪ್ರಯೋಜನಗಳು ಇವೆ ಎಂಬುದನ್ನು ವಿವರಿಸಿದರು ಹಾಗೂ ಎಲ್ಲರೂ ರಕ್ತದಾನ ನೇತ್ರದಾನ ಹಾಗೂ ದೇಹಾಂಗಗಳ ದಾನಕ್ಕೆ ಸಂಕಲ್ಪ ಮಾಡಬೇಕೆಂದು ಕರೆಕೊಟ್ಟರು. ಇತ್ತೀಚೆಗೆ ನಮ್ಮನ್ನು ಅಗಲಿದ ಸಂಚಾರಿ ವಿಜಯ್ ಅವರ ದೇಹಾಂಗಗಳ ದಾನದ ವಿಷಯವನ್ನು ಪ್ರಸ್ತಾಪಿಸಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಉಪನ್ಯಾಸದ ನಂತರ ಕವಿಗೋಷ್ಠಿಯಲ್ಲಿ ನಾಡಿನ ವಿವಿಧ ಮೂಲೆಗಳಿಂದ ಸುಮಾರು ೪೦ ಜನ ಕವಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕವಿತೆ ವಾಚನ ಮಾಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕವಿಗಳ ವಿವರ ಮುಂದಿನಂತಿದೆ.
1) ಸುರೇಶ್ ಗೋವಿಂದರೆಡ್ಡಿ
2) ಕಮಲಮ್ಮ
3) ಆಶಾ ಆಡೂರ್
4)ಶುಭ ವೆರ್ಣೇಕರ್
5) ಪ್ರೇಮ ಎಸ್. ಕೆ
6) ಸುವರ್ಣ ಮಯ್ಯರ
7) ಸೌಮ್ಯ ಆರ್ ಶೆಟ್ಟಿ
8) ಎಚ್. ಹೇಮಾವತಿ ಚಂದ್ರಶೇಖರಯ್ಯ
9) ಕಮಲಾಕ್ಷಿ ಕೌಜಲಗಿ
10) ಶೀಲಾ ಕಾಮಶೆಟ್ಟಿ
11) ಶಿವನಗೌಡ ಪೊಲೀಸ್ ಪಾಟೀಲ
12) ವೀಣಾ ಕಾರಂತ್
13)ಡಾ.ಇಂಚರ ನಾರಾಯಣಸ್ವಾಮಿ
14)ಪ್ರೊ.ಬಿ. ವೈ .ಅಡವಿ
15)ಅರ್ಜುನ .ಬಿ .ನಾಕಮಾನ
16)ಸುನಿತಾ ಎಸ್ ಪಾಟೀಲ
17) ಸಿ.ಪಿ ರಾಧಾ
18) ಪಾರ್ವತಿ ಹಮ್ಮಿಗಿ
19) ಗೀತಾ ವಿಜಯ್ ಕುಮಾರ್
20) ರಾಜೇಶ್ವರಿ ಹೆಗಡೆ
21) ಮಂಜುನಾಥ್ ಟಿ.ಜಿ
22) ಮಂಜುಳಾ ಚಿಕ್ಕಣ್ಣ
23) ಕುಸುಮ್
ಸಾಲಿಯಾನ್
24) ಕಾಳಿಹುಂಡಿ ಶಿವಕುಮಾರ್
25) ಸವಿತಾ ಕುಲಕರ್ಣಿ
26)ಸುರೇಖಾ ಎಸ್ ಬಿರಾದಾರ್
27)ಮಧುಮಾಲತಿ ರುದ್ರೇಶ್, ಬೇಲೂರು.
28)ಡಾ ಅರ್ಚನ ಎನ್ ಪಾಟೀಲ್, ಹಾವೇರಿ.
29)ಪೂಜಾ ನಾರಾಯಣ ನಾಯಕ, ಕುಮಟಾ
30)ಮಂಜುಶ್ರೀ ಹೆಚ್, ಬಳ್ಳಾರಿ
31)ಭರತ್ ಕೆ ಆರ್, ಹಾಸನ.
32)ಗೌತಂ ಗೌಡ, ರಾಮನಗರ.
33)ಮಹಬೂಬಿ ಚಿತ್ರದುರ್ಗ
34)ಮೇಘನಾ ಶಿವಾನಂದ್, ಸಿದ್ಧಾಪುರ
35)ಸೋಮನಾಥ ಸಾಲಿಮಠ, ಬಳ್ಳಾರಿ.
36)ಲಕ್ಷ್ಮೀ ತನಯೆರೋಜಾ, ವಿಜಯಪುರ.
37)ವಾಣಿ ಎಂ ಎಸ್ ಯಲ್ಲಾಪುರ.
38) ಮಂದಾರ, ಬೆಂಗಳೂರು.
39) ವೈಷ್ಣವಿ ಪುರಾಣಿಕ್ ಉಡುಪಿ.
40) ಸಂದ್ಯಾ ನಾಗರಾಜ್.
ಕವಿಗಳ ಕವನ ವಾಚನದ ನಂತರದಲ್ಲಿ ಮಾತನಾಡಿದ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಇವರು ಮನುಷ್ಯನು ಜೀವಂತಿರುವಾಗ ಬಹಳಷ್ಟು ಒಳ್ಳೆಯ ಕೆಲಸಗಳನ್ನು ಮಾಡಬಹುದು ಆದರೆ ಸತ್ತ ಮೇಲೂ ಸಹಾ ಒಳ್ಳೆಯ ಕೆಲಸ ಮಾಡುವುದು ಬಹಳ ಮುಖ್ಯ ಅದಕ್ಕೆ ದೇಹಾಂಗದಾನ ಮಾಡುವುದು ಒಂದು ಮುಖ್ಯವಾದ ಉಪಾಯ ಇದರಿಂದ ನಮ್ಮ ದೇಹ ಮಣ್ಣಾಗುವ ಬದಲು ೮-೧೦ ಜನರ ಬಾಳನ್ನು ಬೆಳಗಿಸುವ ಕಾರ್ಯ ಮಾಡುತ್ತದೆ. ಈ ನಿಟ್ಟಿನಲ್ಲಿ ಇಂದಿನ ಕಾರ್ಯಕ್ರಮ ಬಹಳ ಚೆನ್ನಾಗಿ ಮೂಡಿಬಂದಿದ್ದು ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಹದಾಗಿದೆ. ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೇ, ತಾವು ಸಹಾ ದೇಹದಾನಕ್ಕೆ ಇಂದೇ ಸಂಕಲ್ಪ ಮಾಡುವುದಾಗಿ ಹೇಳಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ವೆಂಕಟೇಶ್ ಶ್ರೀ ಇವರು ಮಾತನಾಡುತ್ತಾ ಕವನದ ಉದ್ದೇಶ ಶೀರ್ಷಿಕೆಯನ್ನು ಪದೇ ಪದೇ ಪುನರುಚ್ಚರಿಸುವುದಲ್ಲ ಬದಲಾಗಿ ಶೀರ್ಷಿಕೆಯ ಮಹತ್ವವನ್ನು ವಿವರಿಸುವ ಕಡೆಗೆ ಕವಿತೆಯನ್ನು ಕೊಂಡೊಯ್ಯುವುದು ಆ ಕೆಲಸ ವನ್ನು ಇಲ್ಲಿನ ಹಲವು ಕವಿಗಳು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮವು ೩ ಘಂಟೆಗಳ ಕಾಲ ಸುದೀರ್ಘವಾಗಿ ಯಾವುದೇ ಅಡೆ ತಡೆ ಇಲ್ಲದೇ ಸುಸೂತ್ರವಾಗಿ , ಯಶಸ್ವಿಯಾಗಿ ನಡೆಯಿತು, ವಿಚಾರ ಮಂಟಪ ಸಾಹಿತ್ಯ ವೇದಿಕೆ ಗೌರವ ಅಧ್ಯಕ್ಷರು ಹಾಗೂ ಈ ಕಾರ್ಯಕ್ರಮದ ಆಯೋಜಕರು ಆದ ಶ್ರೀ ವರುಣ್ ರಾಜ್ ಜೀ, ವಿಚಾರ ಮಂಟಪ ಸಾಹಿತ್ಯ ವೇದಿಕೆಯ ರಾಜ್ಯ ಅಧ್ಯಕ್ಷರಾದ ಶ್ರೀ ಅಂಜನ್ ಕುಮಾರ್ ಪಿ ಆರ್ , ಹಾಗೂ ಎಲ್ಲಾ ರಾಜ್ಯ ಹಾಗೂ ಜಿಲ್ಲಾ ಘಟಕಗಳ ಪಧಾದಿಕಾರಿಗಳು, ದೇಹಾಂಗದಾನ ಸಾಹಿತ್ಯ ಪರಿಷತ್ತು ಹಾಗೂ ಶಾರದಾ ಮಹಿಳಾ ಸಮಾಜದ ಎಲ್ಲಾ ಪಧಾದಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ತುಂಬಾ ಅರ್ಥಪೂರ್ಣವಾದ ಕಾರ್ಯಕ್ರಮ... ಇದರಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗಿಯಾಗಿ ಸಹಕರಿಸಿದ ಎಲ್ಲರನ್ನೂ ಹೃತ್ಪೂರ್ವಕ ವಾಗಿ ಅಭಿನಂದಿಸುತ್ತೇನೆ
ಪ್ರತ್ಯುತ್ತರಅಳಿಸಿಕಾರ್ಯಕ್ರಮದ ವರದಿ ಅತ್ಯುತ್ತಮವಾಗಿ ಮೂಡಿ ಬಂದಿದೆ
ಪ್ರತ್ಯುತ್ತರಅಳಿಸಿಇಂತಹ ಜಾಗೃತಿ ಮೂಡಿಸುವ ಕಾರ್ಯಕ್ರಮ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಗಲಿ ಎಂಬ ಶುಭಹಾರೈಕೆಗಳು 🙏🙏🙏💐💐💐