॥ಕರುಣೆ ಇಲ್ಲದ ಕಾರಣ||
ಕರುಣೆ ಇಲ್ಲದ ಕರೋನಾ ।
ಕಾಡಿತ್ತಮ್ಮ ನಮ್ಮನ್ನ ।
ಕಿಲಕಿಲ ನಗುವ ಕಿತ್ತುಕೊಂಡು ।
ಶಾಲೆಗೆ ಬರಬ್ಯಾಡಂತು ನಮ್ಮನ್ನ ।
ಗಡಬಡ ಶಾಲೆಗೆ ಬರ್ತಿದ್ವಿ ।
ಗಾಡಿಯಾಟ ಆಡ್ತಿದ್ವಿ ।
ಗಿಳಿಗಳ ಗುಂಪಿನಂಗ ।
ಕೂಡಿ ಊಟ ಮಾಡ್ತಿದ್ವಿ ।
ಶಾಲೆಗೆ ಹೋಗಂಗಿಲ್ಲ ।
ನಮ್ ಟೀಚರ್ನ ನೋಡಂಗಿಲ್ಲ ।
ಗೆಳೆಯರ ಜೊತೆ ಆಡಂಗಿಲ್ಲ ।
ಕೂಡಿ ಮಾತಾಡುವಂಗಿಲ್ಲ ।
ಕೈತೊಳೆ ಕೈತೊಳೆ ಅಂತಾರೆ ।
ಮೂಗು ಮುಟ್ಕೊಬ್ಯಾಡ ಅಂತಾರೆ।
ಮುಖ ತೊಳ್ಕೋ ಅಂತಾರೆ ।
ಮುಖವಾಡ ಹಾಕ್ಕೋ ಅಂತಾರೆ ।
ಆನ್ಲೈನ್ ಪಾಠ ಹೇಳ್ತಾರೆ ।
ಮೊಬೈಲ್ ಕೊಟ್ಟು ಕೂಡುಸ್ತಾರೆ ।
ಅಪ್ಪ ಅಮ್ಮ ಇರ್ತಾರೆ ।
ನಮ್ ಟೀಚರ್ ಮಾತ್ರ ಇರಲ್ಲ ।
ಆನ್ಲೈನ್ ಪಾಠ ಸಾಕ್ ನಮಗೆ ।
ಟೀಚರ್ ಪಾಠ ಬೇಕು ನಮಗೆ ।
ಶಾಲೆಗೆ ಬರ್ತೀವಿ ನಾವೆಲ್ಲ ।
ಕೂಡಿ ಪಾಠ ಕೇಳ್ತೀವಿ ನಾವೆಲ್ಲ ।
ಕರುಣೆಯಿಲ್ಲದ ಕರೋನಾ ।
ನೀ ಬಿಟ್ಟು ಹೋಗೋ ನಮ್ಮನ್ನ ।
ಗೆಳೆಯ ಗೆಳತಿಯರೆಲ್ಲ ಕೂಡಿ ।
ಆಟ ಆಡ್ತೀವಿ ನಾವಿನ್ನ।
- ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ ಶಿಕ್ಷಕಿ ಇಲಕಲ್ಲ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕವಿತೆ ಇಂದಿನ ನೈಜ ಚಿತ್ರಣವನ್ನು ಹೊಂದಿದೆ
ಪ್ರತ್ಯುತ್ತರಅಳಿಸಿ