ಗುರುವಾರ, ಜುಲೈ 15, 2021

ಕರುಣೆ ಇಲ್ಲದ ಕರೋನಾ (ಮಕ್ಕಳ ಗೀತೆ) - ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ.


     ॥ಕರುಣೆ ಇಲ್ಲದ ಕಾರಣ||

ಕರುಣೆ ಇಲ್ಲದ ಕರೋನಾ ।   
ಕಾಡಿತ್ತಮ್ಮ  ನಮ್ಮನ್ನ  ।    
ಕಿಲಕಿಲ ನಗುವ ಕಿತ್ತುಕೊಂಡು ।
ಶಾಲೆಗೆ ಬರಬ್ಯಾಡಂತು ನಮ್ಮನ್ನ  ।

 ಗಡಬಡ ಶಾಲೆಗೆ ಬರ್ತಿದ್ವಿ ।
ಗಾಡಿಯಾಟ ಆಡ್ತಿದ್ವಿ । 
ಗಿಳಿಗಳ ಗುಂಪಿನಂಗ । 
ಕೂಡಿ ಊಟ ಮಾಡ್ತಿದ್ವಿ ।

 ಶಾಲೆಗೆ ಹೋಗಂಗಿಲ್ಲ  ।
ನಮ್ ಟೀಚರ್ನ ನೋಡಂಗಿಲ್ಲ ।
ಗೆಳೆಯರ ಜೊತೆ ಆಡಂಗಿಲ್ಲ ।
ಕೂಡಿ ಮಾತಾಡುವಂಗಿಲ್ಲ ।

ಕೈತೊಳೆ ಕೈತೊಳೆ ಅಂತಾರೆ ।
ಮೂಗು ಮುಟ್ಕೊಬ್ಯಾಡ  ಅಂತಾರೆ।
ಮುಖ ತೊಳ್ಕೋ ಅಂತಾರೆ ।
ಮುಖವಾಡ ಹಾಕ್ಕೋ ಅಂತಾರೆ ।

ಆನ್ಲೈನ್ ಪಾಠ ಹೇಳ್ತಾರೆ ।
ಮೊಬೈಲ್ ಕೊಟ್ಟು ಕೂಡುಸ್ತಾರೆ ।
ಅಪ್ಪ ಅಮ್ಮ ಇರ್ತಾರೆ । 
ನಮ್ ಟೀಚರ್ ಮಾತ್ರ ಇರಲ್ಲ ।

ಆನ್ಲೈನ್ ಪಾಠ ಸಾಕ್  ನಮಗೆ ।
ಟೀಚರ್ ಪಾಠ ಬೇಕು ನಮಗೆ ।
ಶಾಲೆಗೆ ಬರ್ತೀವಿ ನಾವೆಲ್ಲ । 
ಕೂಡಿ ಪಾಠ ಕೇಳ್ತೀವಿ ನಾವೆಲ್ಲ ।

ಕರುಣೆಯಿಲ್ಲದ ಕರೋನಾ ।
ನೀ ಬಿಟ್ಟು ಹೋಗೋ ನಮ್ಮನ್ನ ।
ಗೆಳೆಯ ಗೆಳತಿಯರೆಲ್ಲ ಕೂಡಿ ।
ಆಟ ಆಡ್ತೀವಿ ನಾವಿನ್ನ।
    
    - ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ ಶಿಕ್ಷಕಿ ಇಲಕಲ್ಲ.




(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...