ಗಾನಸುಧೆ(ಕವಿತೆ)
ಮುರುಳಿ ನಿನ್ನ ಗಾನ ಸುಧೆಯಲ್ಲಿ
ಎಂಥ ಮಾಧುರ್ಯವಡಗಿಹುದೋ,
ಎನ್ನ ಮನ ಸೂರೆಯಾಗಿಹುದು
ನಿನ್ನ ಕೊಳಲೊಳಗಿನ ನಾದಕೆ,
ನಿನ್ನ ಬಣ್ಣ ಎಂಥ ಚೆನ್ನ ,ಮರುಳಾಗಿಹಳು
ಈ ಕೋಮಲೆ,ನಿನಾಡುವ ನುಡಿಯೊಳು
ಅಡಗಿಹಳು ಈ ಶ್ಯಾಮಲೆ,
ನನ್ನತನವ ಅರ್ಪಿಸುತಾ
ಭವಾಂತರಗಳನೇ ಮೀರೀಸುವಳು
ಮಾಧವನ ಮೀರೆ!
ನವಿಲ ಕಣ್ಣ ಹೊತ್ತ ನಿನ್ನ
ಮುಂಗುರುಳ ಕಂಡು
ಬೆರಗಾದಳು ಈ ಲಲನೆ!
-ವಿಜಯಲಕ್ಷ್ಮಿ ಡೋಣಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ