ಶುಕ್ರವಾರ, ಜುಲೈ 16, 2021

ಸಹಕಾರ ಸಹಬಾಳ್ವೆಯ ವ್ಯಕ್ತಿತ್ವದ ಶ್ರೀಯುತ ನಾನಾ ಗೌಡ ಮಾಲಿ ಪಾಟೀಲರು (ಲೇಖನ) -ಶ್ರೀ ಬಾಗಳಿ ಮಹೇಶ್.

ಸಹಕಾರ ಸಹಬಾಳ್ವೆಯ ವ್ಯಕ್ತಿತ್ವದ ಶ್ರೀಯುತ ನಾನಾ ಗೌಡ ಮಾಲಿ ಪಾಟೀಲರು
ಎಲ್ಲೋ ಹುಟ್ಟಿ,  ಎಲ್ಲೋ ಬೆಳೆದು, ಎಲ್ಲೋ ಕಾಯಕ ವೃತ್ತಿಯನ್ನು ಆರಂಭಿಸುವ ಈ ಜೀವನದಲ್ಲಿ ಏನೆಲ್ಲಾ ತಿರುವುಗಳು ಬರುತ್ತದೆ ಎಂದು ಹೇಳಲಾಗದು. ಈ ತಿರುವಿನ ಜೀವನದಲ್ಲಿ ಅನೇಕ ಸ್ನೇಹಿತರ , ಸಾಧಕರ, ಒಡನಾಟ ದೊರೆಯುತ್ತದೆ. ಕಾಯಕಕ್ಕೆ ಪ್ರೋತ್ಸಾಹ ನೀಡುವ, ಸಾಧನೆಗೆ ಬೆನ್ನೆಲುಬಾಗಿ ಮುನ್ನಡೆಯಲು  ಕಾರಣ ಕರ್ತರಾದ ಮಾರ್ಗದರ್ಶಕರ   ಆಶ್ರಯ ದೊರೆಯುತ್ತದೆ.  ಇಂತಹ ಪರಿಚಯಾತ್ಮಕ ಅಪರೂಪದ  ಹಾಗು ಸದಾ ಎಲ್ಲರಿಗೂ ಒಳಿತನ್ನೇ ಬಯಸುವ, ಸಮಾಜದ ಒಳಿತಿಗೆ , ಜನರ ಕಷ್ಟಗಳಿಗೆ ದುಡಿಯುತ್ತಿರುವ ಜನಾನುರಾಗಿ ವ್ಯಕ್ತಿತ್ವದ ವ್ಯಕ್ತಿಯೇ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಕರ್ನಾಟಕ ರಾಜ್ಯ ಘಟಕದ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ನಾನಾ ಗೌಡ ಮಾಲಿ ಪಾಟೀಲ ರವರು.
ಇವರು ಮಹಾದೇವಪ್ಪ ಸಾಹುಕಾರ, ಮಹದೇವಮ್ಮ  ಕಂಚಲಗಾಂವಿ ದಂಪತಿಗಳ ಮಗನಾಗಿ ಸಾಮಾನ್ಯ ಕುಟುಂಬದಲ್ಲಿ ಜುಲೈ 17 ರಂದು ಜನಿಸಿದರು.  ಸಾಮಾನ್ಯ ಕುಟುಂಬದಿಂದ  ಬಂದರು ತಮ್ಮ ಕಾಯಕ ನಿಷ್ಠೆ,  ಸಹಕಾರ ಮನೋಭಾವ,  ಕಷ್ಟಗಳಿಗೆ ಸ್ಪಂದಿಸುವ ಗುಣ, ಇವರ ಅತ್ಯಮೂಲ್ಯವಾದ ಹೃದಯ ಶ್ರೀ ಮಂತಿಕೆಯ ಆಸ್ತಿಯಾಗಿ ಜನಾನುರಾಗಿ ವ್ಯಕ್ತಿಯಾಗಲು ಕಾರಣೀಯವಾಗಿದೆ.  
ಅಜಿಂ ಪ್ರೇಮ್ ಜಿ ಫೌಂಡೇಶನ್ ನ ಸಂಪನ್ಮೂಲ ವ್ಯಕ್ತಿಗಳಾಗಿ ಅನೇಕ ಪ್ರತಿಭೆಗಳಿಗೆ ಮಾರ್ಗದರ್ಶಕರಾಗಿದ್ದಾರೆ, ಸುಮಾರು ಏಳು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ನೀಡುವ ಜ್ಞಾನಿಗಳಾಗಿದ್ದಾರೆ. ಅಲ್ಲದೆ ಅನೇಕ ಲೇಖನವನ್ನು ಬರೆದು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ.  

ಉತ್ತಮ ಸಂಘಟಕರು ಹೌದು. ಇಂತಹ ಬಹುಮುಖ ಪ್ರತಿಭೆ , ಮಿತ ಭಾಷಿ,    ಕಾಯಕದ ಮೂಲಕ ಮಾತನಾಡುವ ಶ್ರೀಯುತ ನಾನಾ ಗೌಡ ಮಾಲಿ ಪಾಟೀಲ ಅವರ ಜನುಮ ದಿನ ಇಂದು .
ಇವರಿಗೆ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಎಲ್ಲಾ ಜಿಲ್ಲಾ ಘಟಕಗಳ ಪರವಾಗಿ,  ನನ್ನ ವೈಯಕ್ತಿಕವಾಗಿ ಜನುಮ ದಿನದ ಶುಭಾಶಯಗಳನ್ನು ಕೊರುತ್ತಾ , ನನ್ನೊಡೆಯ ಮಹಾದೇವ ಸಮಾಜದ ಒಳಿತಿಗೆ, ಹಿಂದಳಿದವರ ಏಳಿಗೆಗೆ, ಸಾಹಿತ್ಯ ಕ್ಷೇತ್ರಕ್ಕೆ ಮತ್ತಷ್ಟು ಸೇವೆ ಮಾಡುವ ಶಕ್ತಿಯನ್ನು ನೀಡಿ ,ಆರೋಗ್ಯ ಆಯಸ್ಸು,  ಸಂಪತ್ತು, ಕೀರ್ತಿಯನ್ನು ನೀಡಲಿ ಎಂದು ಬೇಡುತ್ತೇನೆ.

- ಬಾಗಳಿ ಮಹೇಶ್ 
ರಾಜ್ಯ ಪತ್ರಿಕೆ ಕಾರ್ಯದರ್ಶಿ ಹಾಗೂ ಜಿಲ್ಲಾ  ಪ್ರಧಾನ ಕಾರ್ಯದರ್ಶಿ 
ಮೈಸೂರು.


(ಮಾನ್ಯ ನಾನಾ ಗೌಡ ಮಾಲಿ ಪಾಟೀಲರಿಗೆ ವಿಚಾರ ಮಂಟಪ ಸಾಹಿತ್ಯ ವೇದಿಕೆ ಹಾಗೂ ವಿಚಾರ ಮಂಟಪ ಸಾಹಿತ್ಯ ಬಳಗ ಸಮಸ್ತ ಪಧಾದಿಕಾರಿಗಳು ಹಾಗೂ ಸದಸ್ಯರ ಪರವಾಗಿ  'ಹುಟ್ಟು ಹಬ್ಬದ ಶುಭಾಶಯಗಳು')




(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...