ಶುಕ್ರವಾರ, ಜುಲೈ 23, 2021

ಜೀವ ಹಾಗೂ ದೇಹದ ಸಂಬಂಧ (ಕವಿತೆ) - ದಾನೇಶ್ವರಿ ಬಸವರಾಜ ಶಿಗ್ಗಾಂವಿ.

ಜೀವ ಹಾಗೂ ದೇಹದ ಸಂಬಂಧ

ಜೀವಕ್ಕೂದೇಹಕ್ಕೂಬಿಡಿಸಲಾದ ಬಂಧನದ ನಂಟಿದೆ
ದೇಹ ತೊರೆದು ಜೀವ
ನಡೆದಾಗ ಕೂಗುತಿದೆ ದೇಹ
ಕೂಗಿ ಕರೆಯುತ್ತಿದೆ ಓ ಜೀವವೇ
ನನ್ನಗಲ ಬೇಡ ನೀನು

ಜೀವ ನುಡಿಯುತ್ತಿದೆ ನೊಂದು
ಆಸೆ, ಬಯಕೆ, ವ್ಯಾಮೋಹ,
ತುಂಬಿದ ನಿನ್ನಲ್ಲಿ ಎನಗೆ
ಇರುವ ಆಸೆ ನನ್ನಲ್ಲಿ ಇಲ್ಲ
ಕೂಗಿ ಕರೆ ಬೇಡ ನನ್ನ
ನಿನ್ನ ಪಾಲು ಇನ್ನೇನು ಇಲ್ಲ

ದೇಹ ಮತ್ತೆ ಕೂಗುತ್ತಿದೆ ಜೀವವ
 ನಿನ್ನಯೋಚನೆಯಮೋಹದಲ್ಲಿ
ನಾನು ತಪ್ಪೆಸಗಿದ, ನೀನೆ ನನ್ನ ಬಳಿ ಇರುವುದಿಲ್ಲ ಎಂದಮೇಲೆ ಬದುಕಿನ ನನ್ನೆಲ್ಲ ಹೋರಾಟವೇ 
ವ್ಯರ್ಥದ ಸಂತೆ

ಜೀವ ನುಡಿಯುತ್ತಿದೆ ನಾನು ಹೋದರೆ ಏನಾಯಿತು, ನೀನು ಚಿಂತಿಸಬೇಡ ನೀನು ಮಾಡಿದ ದಾನ-ಧರ್ಮ ಪಾಪ ಪುಣ್ಯದ ಫಲವು ನಿನ್ನ ಬಗ್ಗೆ ಸದಾ ನುಡಿಯುತ್ತದೆ ಚಿಂತಿಸಬೇಡ ನಾ ಹೊರಡುವೆನು ಇನ್ನ

ದಾನೇಶ್ವರಿ ಬಸವರಾಜ ಶಿಗ್ಗಾoವಿ
ಜಲ್ಲಾಪುರ ಗ್ರಾಮ
ಸವಣೂರು ತಾಲೂಕು
ಹಾವೇರಿ ಜಿಲ್ಲಾ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...