ಶುಕ್ರವಾರ, ಜುಲೈ 23, 2021

ಗುರುವಂದನೆ (ಕವಿತೆ) - ಶ್ರೀ ಅಕ್ರಂಪಾಷ ಕೆ ಎನ್, ಚಿಂತಾಮಣಿ.

ಗುರುವಂದನೆ

ಶಿಕ್ಷಕರು ನಾವು ಶಿಕ್ಷಕರು 
ಸಮಾಜದ ನಿರ್ಮಾಪಕರು 
ಕಲ್ಲನ್ನು ಕೆತ್ತಿ ಮೂರ್ತಿಗಳ ನಿರ್ಮಿಸುವವರು
ಮಕ್ಕಳ ಪಾಲಿನ ದೇವರು !!

ಅಕ್ಷರ ಜ್ಞಾನವ ನೀಡುವವರು 
ದೇಶವ ಕಟ್ಟಲು ಶ್ರಮಿಸುವವರು 
ಸನ್ಮಾರ್ಗವನ್ನು ತೋರಿಸುವವರು 
ಜ್ಞಾನ ಜ್ಯೋತಿಯ ಬೆಳಗಿಸುವವರು !!

ಬಾಲಕಾರ್ಮಿಕರಾಗಲು ಬಿಡದೆ
ಜ್ಞಾನ ದಾಹವ ನೀಗಿಸುವವರು
ಅನಕ್ಷರತೆಯ ಹೊಡೆದೋಡಿಸಲು
ಹಗಲಿರುಳೆನ್ನದೆ ದುಡಿಯುವವರು!!
ಭಾವಿ ಪ್ರಜೆಗಳ ನಿರ್ಮಿಸುವವರು 
ಮಕ್ಕಳ ಬದುಕಿನ ಕಿರಣಗಳು
ಪ್ರತಿಫಲ ಬಯಸದೆ ಸೇವೆಯ ಗೈಯುತ
ಮಕ್ಕಳ ಏಳ್ಗೆಗೆ ಶ್ರಮಿಸುವವರು!!

ಪ್ರೀತಿ ಮಮತೆಯಿಂದ ಅಕ್ಷರ ಕಲಿಸುತ
ಮಾನವೀಯತೆಯ ಬಿತ್ತುವವರು 
ಭೇದಭಾವವ ಎಂದು ಮಾಡದೆ
ನಿಸ್ವಾರ್ಥ ಸೇವೆಯ ಗೈಯುವವರು!!

ಮಕ್ಕಳಿಗೆ ಸನ್ನಡತೆಯ ಕಲಿಸುತ್ತ
ಅವರ ಬದುಕಿಗೆ ದಾರಿ ತೋರುವವರು 
ಮಳೆಯೆ ಬರಲಿ ,ಚಳಿಯೇ ಇರಲಿ 
ಕಾಯಕವನ್ನು ಎಂದೂ ಬಿಡದವರು!!
 *ಕೆ ಎನ್ ಅಕ್ರಂಪಾಷ* 
ರಾಜ್ಯ ಪ್ರಶಸ್ತಿ ಪುರಸ್ಕೃತ ಯುವ ಸಾಹಿತಿ 
ಹಾಗೂ ಶಿಕ್ಷಕರು ಚಿಂತಾಮಣಿ
ಚಿಕ್ಕಬಳ್ಳಾಪುರ ಜಿಲ್ಲೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...