ಮಂಗಳವಾರ, ಜುಲೈ 13, 2021

ಕನ್ನಡಾಂಬೆಗೆ ಅಭಿಮಾನದಾಭರಣ (ಕವಿತೆ) - ಶ್ರೀ ವೀರಂತರೆಡ್ಡಿ ಜಂಪಾ.

ಕನ್ನಡಾಂಬೆಗೆ ಆಭರಣ ಅಭಿಮಾನದಾಭರಣ
ಭ್ರಷ್ಟಾಚಾರ ಮುಕ್ತ ನಾಡು ನಮ್ಮದಾಗಲೆಂದು ಶಪಥ ಮಾಡಿ ನಾಡನ್ನು ಉನ್ನತಕ್ಕೇರಿಸಲು ಲಂಚವೆಂಬ ಪೆಡಂಭೂತವ ಕೊಲ್ಲೋಣ
ಕನ್ನಡಾಂಬೆಗದೇ ಆಭರಣ ಅಭಿಮಾನದಾಭರಣ..

ಸರಕಾರಿ ಸಂಬಳ ಪಡೆವ ಪ್ರತಿಯೊಬ್ಬರು ಪ್ರತಿಜ್ಞೆಗೈಯಿರಿ ನಿಯತ್ತೇ ನಮಗೆಂದೆಂದೂ ಜೀವಾಳ ಅದೇ ಕನ್ನಡಾಂಬೆಗೆ ಆಭರಣ ಅಭಿಮಾನದಾಭರಣ..

ನಾಡಿನ ಗಡಿ ಗುಡಿ ನುಡಿ ಕಾಯ್ವ ಯೋಧನಾಗಬೇಕಿಲ್ಲ
ಯೋಧನಲ್ಲಿ ಗೌರವ ಇಡಿ
ಅದೇ ಕನ್ನಡಾಂಬೆಗೆ ತೊಡಿಸುವ ಆಭರಣ ಅಭಿಮಾನದಾಭರಣ..

ಮನಸ್ಸು ನಿರ್ಮಲವಾಗಿಡಿ
ವಿಕಾರ ಮನಸ್ಸುಗಳ ಸ್ವಚ್ಚತೆಗೆ ಗಮನ ಕೊಡಿ ಮನಸ್ಸುಗಳು ಸ್ವಚ್ಚವಿದ್ದರದೇ ಕನ್ನಡಾಂಬೆಗೆ ಆಭರಣ ಅಭಿಮಾನದಾಭರಣ..

ಮೋಸ,ವಂಚನೆ, ಕಪಟತನ ತೊರೆದು ನಿಯತ್ತಿನಿಂದ ದುಡಿದು ಸಮಾಜಕ್ಕೆ ಮಾದರಿಯಾದರದೇ
ಕನ್ನಡಾಂಬೆಗೆ ಬಹುದೊಡ್ಡ ಆಭರಣ ಅಭಿಮಾನದಾಭರಣ..

ಅನ್ಯಾಯ, ಅತ್ಯಾಚಾರಗಳು ತೊಲಗಿ
ಕಲ್ಮಶ ಮನಸ್ಸುಗಳು ಹಿಡಿತದಲ್ಲಿರಲಿ ಪ್ರತಿ ಹೆಣ್ಣನ್ನು ಗೌರವಿಸಿ ರಕ್ಷಣೆ ಕೊಡುವದದೇ
ಕನ್ನಡಾಂಬೆಗೆ ಆಭರಣ ಅಭಿಮಾನದಾಭರಣ..

ಅತ್ಯಾಚಾರದ ಹೊಗೆ ಹಾಕುತಾ ಕ್ರೌರ್ಯದ ಪಾಪಿಗಳು ನಗೆ ಬೀರುತ್ತಿವೆ.ಕಾಮುಕ ವ್ಯಾಘ್ರಗಳಿಗೆ ಬಿಗಿಯಬೇಕು ಕುತ್ತಿಗೆಗೆ ಕುಣಿಕೆ ತಲ್ಲಣಿಸುವಂತೆ..
ಅದೇ ನಾವು ತೊಡಿಸುವ ಆಭರಣ ಕನ್ನಡಾಂಬೆಗೆ ಅಭಿಮಾನದಾಭರಣ..

ವಿಷಕ್ರಿಮಿಗಳು ವ್ಯಕ್ತಿತ್ವಕ್ಕೆ ಮಸಿ ಬಳೆಯುವ ಮಲೀನ ಮನದವರು ಹುಸಿ ನುಡಿದು ಹಸಿದ ಮನ ತೃಪ್ತಿಗೊಳಿಸಿಕೊಳ್ಳುವರು ಅಮಾಯಕರ ಖುಷಿ ಕಸಿದುಕೊಳ್ಳುವ ಕೀಚಕರಿಗೆ ತಕ್ಕ ಪಾಠ ಕಲಿಸಿದರದುವೇ  ಕನ್ನಡಾಂಬೆಗೆ ತೊಡಿಸುವ ಆಭರಣ ಅಭಿಮಾನದಾಭರಣ..
*ವೀರಂತರೆಡ್ಡಿ ಜಂಪಾ* 
*ವೀರಂತರೆಡ್ಡಿ ಜಂಪಾ* 
                 *ಶಿಕ್ಷಕರು*

*ಗೌರವ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಹುಮನಾಬಾದ.ಜಿ.ಬೀದರ*


(ನಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...