ಮಂಗಳವಾರ, ಜುಲೈ 13, 2021

ಕಂದ (ಕವಿತೆ) - ಶ್ರೀ ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ ಮಂಡ್ಯ.

ಕಂದ

*ಎದೆ ಉಣಿಸಿದ ಅಮ್ಮನ ಮಡಿಲಿನ ಕೂಸೆ*
*ಕಾವೇರಿಯ ನೀರ ಕುಡಿದು ಪುಷ್ಟಿಯಾಗಿರುವೆ ಇಂದು,,*
*ರೈತರ ಶ್ರಮಿಕರ ಶ್ರಮದ ಫಲವೇ ಕ್ಷೀರದ ಹೊಳೆಯು*
*ಉಳಿಸಿ ಬೆಳೆಸುವ ಭವಿಷ್ಯದ ಉದ್ಧಾರಕ ನೀನಾಗು*
*ಶೋಧನೆ ಸಂಶೋಧನೆ ಸಾಧನೆಯ ಹಾದಿಯಲಿ ಎಂದು,,//೧//*

*ನಿನ್ನ ಹೃದಯದ ಬನದಲಿ ಅರಳಿರಲಿ ಅರವಿಂದ*
*ಸೇವೆ ಗುರಿಯೊಂದೇ ನಿನಗಿರಲಿ ಕಂದ*
*ನಾಡಿನಾದ್ಯಂತ ಪಸರಿಸಲಿ ಕನ್ನಡದ ಶ್ರೀಗಂಧ*
*ಈ ಬುವಿಯ ಬೆಳಗಲು ನೀನಾಗು ನಂದ*
*ಉಸಿರು ನೀಡಿದ ತಾಯಿಯ ಮಮತೆಯ ಈಬಂಧ,,//೨//*

*ಮನದಲಿರಲಿ ಅರಿಸಿಣ ಕುಂಕುಮ ಮೈಮೆ ಆನಂದ*
*ಕೇಸರಿ ಬಿಳಿ ಹಸಿರು ಅಶೋಕಚಕ್ರ ಅಂದ*
*ಬರೀ ಮಾತಿನಲ್ಲಿ ಆಡಿದರೆ ಸಾಲದು ಕಂದ*
*ಮೈಗೂಡಿಸಿಕೊಳ್ಳಬೇಕು ರಕ್ತದಲ್ಲಿ ಈ ನೆಲದ ಬಂಧ*
*ಕುಡಿದ ನಾಡಿನ ನದಿಗಳ ನೀರ ಅನುಬಂಧ,,//೩//*

*ನೀಯಾಗಿರು ನಾಡಿಗೆ ಸದಾ ಅಭಿಜ್ಞಾ ಅಭಿರಾಮ*
*ನಿನಗಿರಲಿ ಜೈ ಭುವನೇಶ್ವರಿಯ ಉದ್ಗಮ-ಓಮ*
*ಎದೆ ಉಣಿಸಿದ ತಾಯಿಯ ವಾತ್ಸಲ್ಯದ ಕಂದ*
*ಕನ್ನಡಮ್ಮನ ಕಂದ ನಾಡಿಗೆ ನೀಯಾಗಿರು ಚಂದ*
*ನೀ ಸದಾ ಕನ್ನಡಮ್ಮನ ಪುಟ್ಟ ಕಂದ,,//೪//*

*ಮಾತೃ ಉಣಿಸಿದಳು ಅಮೃತ ಹಾಲಾ*
*ಕುಡಿದು ಅನ್ಯರಿಗೆ ಹಂಚಬೇಡಿ ಹಾಲಾಹಲ*
*ಮುಗ್ಧ ಮನಗಳಲಿ ತಂದೊಡ್ಡಬೇಡಿ ಕೋಲಾಹಲ*
*ಈ ನಾಡ ವೀರ ಯೋಧರ ವನಿತೆಯರ*
*ಪುಣ್ಯ ಯೋಗಿಗಳ ತ್ಯಾಗದ ಕಂದಮ್ಮ ನೀನು,,//೫//*✍️
- ಶ್ರೀ ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ
ಅಂಚೆ ಜೀವ ವಿಮೆ ಮಂಡ್ಯ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...