ಗಂಗೆಯ ಪಾಪ ವಿಮೋಚನೆ
ಅದೊಂದು ಪುಟ್ಟ ಹಳ್ಳಿ. ಆಕೆಗೆ ತನ್ನ ಪೋಷಕರು ಯಾರು ಎಂದು ಗೊತ್ತಿರಲಿಲ್ಲ.ಆದರೂ ಅಲ್ಲಿ ನೆರೆದಿದ್ದ ಜನರು ಆಕೆಯನ್ನು ಪುಟ್ಟಿ ಎಂದು ಆಕೆಯನ್ನು ಕರೆಯುತ್ತಾ ಇದ್ದರು..
ನನಗೆ ಸಾವು ಬಂದಿದ್ದಾರೆ ಒಳ್ಳೆಯದು ಎಂದು ಹೇಳುತ್ತಾ ಇದ್ದಿತು ಅಲ್ಲಿ ಇದ್ದ ಒಂದುಅಜ್ಜಿ.ಆಕೆ ಅಲ್ಲೇ ಇದ್ದ ಅಜ್ಜಿಯ ಮನೆಗೆ ಹೋಗೋಣ ಎಂದು ನಿರ್ಧಾರ ಮಾಡಿಕೊಂಡು ಹೋದಾಗ ಏನೋ ಒಂದು ರೀತಿಯಾದ ಬದಲಾವಣೆ ಕಂಡು ಬಂದಿತು, ಆಕೆ ಆ ಅಜ್ಜಿಯ ಕರವನ್ನು ಮುಟ್ಟಿದಾಗ ಅಜ್ಜಿಗೆ ತನ್ನ ಗಂಡ, ಮಗ, ಮಗಳು, ಮೊಮ್ಮಗ, ಮೊಮ್ಮಗಳು ಎಲ್ಲರ ಜೊತೆಯಲ್ಲಿ ಬೆರೆದ ಕ್ಷಣ ಎಲ್ಲವೂ ನೆನಪು ಆಗ ತೊಡಗಿತ್ತು...
ಆಕೆ ತನ್ನ ಪತಿಯವರ ಜೊತೆಯಲ್ಲಿ ಅಂದು ದೇವಸ್ಥಾನಕ್ಕೆ ಹೋದಾಗ ಅಲ್ಲಿ ಒಬ್ಬರು ಗುರುಗಳು ಇಲ್ಲಿ ಬನ್ನಿ ಎಂದಾಗ ಅವರು ಹೋಗುವಾಗ ಅಲ್ಲಿ ಒಂದು ಕಲ್ಲು ಕಾಲಿಗೆ ತಗುಲಿದಾಗ ಆಕೆ ಆ ಕಾಲನ್ನು ಅಲ್ಲೇ ಇದ್ದ ನೀರಿಗೆ ಹಾಕಿದಾಗ ಆ ಕಲ್ಲು ಮನದಲ್ಲೇ ನಿನಗೆ ಎನಿಸಿದಾಗ ಮುಕ್ತಿ ದೊರಕುವುದಿಲ್ಲ ಒಂದು ಹುಡುಗಿಯಿಂದ ಸಿಗುತ್ತದೆ ಎಂದು ನುಡಿದದ್ದು ಅಲ್ಲಿ ಇದ್ದ ಗುರುಗಳಿಗೆ ತಿಳಿಯಿತು..
ಅವರು ಈ ವಿಚಾರ ಅವರಿಗೆ ತಿಳಿಸದೇ ನೀವುಗಳು ಒಳ್ಳೆಯ ಜೀವನ ನಡೆಸಿ, ನಿಮ್ಮ ಕುಟುಂಬವನ್ನು ಜನರು ಕೊಂಡಾಡುತ್ತಾರೆ ಎಂದು ಹೇಳಿ ಅವರಿಗೆ ಒಂದು ಸೇಬು ಹಣ್ಣು ಕೊಟ್ಟರು ಇದನ್ನು ನೀನು ಒಬ್ಬಳೇ ತಿನ್ನಬೇಕು ಬೇರೆಯವರಿಗೆ ಕೊಡಬೇಡ ಎಂದಾಗ ಆಕೆ ಅಗತ್ಯವಾಗಿ ಎಂದು...
ಅವರಿಗೆ ನಮಸ್ಕಾರ ಮಾಡಿ, ಮನೆಗೆ ಬಂದು ನಮ್ಮ ಮನೆಯ ಆರಾಧ್ಯ ದೈವವಾದ ನರಹರಿ ದೇವರಿಗೆ ನಮಸ್ಕಾರ ಮಾಡಿ ಆಕೆ ಅವರು ಕೊಟ್ಟ ಸೇಬು ಹಣ್ಣು ತಿನ್ನುವಾಗ ಕಾಲ ಸರಿದಿತ್ತು..
ಹೀಗೆ ಆಕೆಯು ಗರ್ಭಿಣಿಯಾಗಿ ಮಕ್ಕಳು, ಮೊಮ್ಮಕ್ಕಳ ಜೊತೆಯಲ್ಲಿ ಇರುವಾಗ ಆಕಸ್ಮಿಕವಾಗಿ ಆಕೆಯ ಪತಿಯವರು ಮರಣ ಹೊಂದಿದರು, ಆಕೆಯ ಮಕ್ಕಳು, ಮೊಮ್ಮಕ್ಕಳು ಆಕೆಯನ್ನು ಒಬ್ಬಂಟಿಯಾಗಿ ಮಾಡಿದ ಘಟನೆಯನ್ನು ಎನಿಸಿದಾಗ ಆ ಅಜ್ಜಿ ಒಮ್ಮೆ ಜೋರಾಗಿ ರೀ ಎಂದಾಗ ಅಜ್ಜಿ ಏನು ಆಯಿತು? ಎಂದು ಆ ಹುಡುಗಿ ಪ್ರಶ್ನೆ ಮಾಡಿದಾಗ...
ನೀನು ಯಾರು ಹೇಳು ಎಂದಾಗ ಆ ಪುಟ್ಟಿ ಆ ಅಜ್ಜಿಯನ್ನು ನೀರಿಗೆ ಅಂದು ಕಲ್ಲು ಹಾಕಿದ ಸ್ಥಳಕ್ಕೆ ಕರೆದುಕೊಂಡು ಹೋದಾಗ ಅಜ್ಜಿ ನಾನು ಇಲ್ಲಿಗೆ ಮೊದಲೇ ಇಲ್ಲಿಗೆ ಬಂದಿದ್ದೇನು ಎಂದಾಗ ಆ ಅಜ್ಜಿಯನ್ನು ಅಲ್ಲೇ ಮರದ ಕೆಳಗಡೆ ಕುಳ್ಳಿರಿಸಿ ತಾನು ಆ ಕಲ್ಲನ್ನು ತೆಗೆದುಕೊಂಡು ಬಂದಾಗ...
ಕಲ್ಲು ನೀನು ಯಾಕೆ ನನ್ನ ಯಾಕೆ ಕರೆದುಕೊಂಡು ಬಂದೆ ಎಂದಾಗ ಆಕೆ ಈಕೆಗೆ ಮುಕ್ತಿ ಕೊಡುವ ಎಂದಾಗ ಅಂದುಕೊಂಡ ಹಾಗೆ ನಿನ್ನ ಕೈಯಲ್ಲಿ ಆಗಲಿ ಎಂದು ಆ ಕಲ್ಲನ್ನು ಅವರ ಕೈಯಲ್ಲಿ ಕೊಟ್ಟು ನಾವು ಇಬ್ಬರು ನಿಮಗೆ ಮುಕ್ತಿ ಕೊಡುತ್ತೇನೆ ಎಂದಾಗ...
ಅಜ್ಜಿ ಇದು ಯಾವ ಕಲ್ಲು ಎಂದು ಪ್ರಶ್ನೆ ಮಾಡಿದಾಗ ಅಂದು ನೀವು ಕಾಲಿಗೆ ತಾಗಿತು ಎಂದು ಎಸೆದ ಕಲ್ಲು ಎಂದಾಗ ಅಜ್ಜಿಯ ಕಣ್ಣಿನಲ್ಲಿ ನೀರು ಬಂದಿತು ಅಂದು ನಾನು ಮಾಡಿದ ತಪ್ಪು ಕ್ಷಮಿಸಿ ಎಂದು ಆ ಕಲ್ಲನ್ನು ಕಣ್ಣಿಗೆ ಮುಟ್ಟಿಸಿಕೊಂಡಾಗ ಅಲ್ಲೇ ಇದ್ದ ಸರೋವರದ ನೀರನ್ನು ಅವರಿಗೆ ಅಭಿಷೇಕ ಮಾಡಿದಾಗ ಆ ಅಜ್ಜಿಯ ಪ್ರಾಣ ಪಕ್ಷಿ ಹಾರಿತು. ಆ ಅಜ್ಜಿಯ ಹೆಸರು ಗಂಗಾ ಎಂದು.
- ವೈಷ್ಣವಿ ಪುರಾಣಿಕ್. ಉಡುಪಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ