ಗುರುವಾರ, ಜುಲೈ 15, 2021

ಜಾಲಿ ಮರದ ಜೋಕಾಲಿ (ಕವಿತೆ) - ಶ್ರೀ ಜಿ ಟಿ ಆರ್ ದುರ್ಗ, ಬಂಗಾರಪೇಟೆ.

ಜಾಲಿ ಮರದ ಜೋಕಾಲಿ

ಜಾಲಿ ಮರದ ನೆರಳೆಲ್ಲಿ ಜಾಲಿಯಾಗಿ ಸುತ್ತಬೇಕು
ಜೋಗಿ ಬರುವ ಜಾಲಿ ಮರದ ಬಾಗಿಲಲ್ಲಿ! ನಿಂತುಕೊಂಡು ನನ್ನ ನಿನ್ನ ಗೆಳೆತನಕ್ಕೆ ಚುಚ್ಚದಿರಲಿ

ಜಾಲಿ ಮರ ಮುಳ್ಳೆಂದು ಕೊಡ್ಲಿಯಿಂದ ಕಡಿಯಬೇಡ
ಕೋಪ ಬಂದ ಮನಸ್ಸಿಂದ ದೂಡಬೇಡ! ನನ್ನ ಗೆಳೆಯ
ಸಾಯತನಕ ನಿನ್ನ ಜೊತೆಯಲ್ಲಿ ಬದುಕಿ ಬಾಳುವೆ

ಜಾಲಿ ಮರವು ಮುಳ್ಳಾದ್ರು ನನ್ನ ಹೊಲಕ್ಕೆ ಕಾವಲಾಗಿ
ಮನೆಯ ಬಾಗಿಲ ಹೊಸಿಲ ಮುಟ್ಟಾಗುವೆ! ನನ್ನ ಗೆಳತಿ
ಜಾಲಿ ಮರದಿಂದ ಯಾವುದು ದೋಷವಿಲ್ಲ

ಕಲ್ಲು ಹೃದಯವಿದ್ದರು ಬೆಲ್ಲದಂಗೆ ರುಚಿ ಇರಲಿ
ಕಣ್ಣ ನೋಟ ಕೆಟ್ಟದಾದ್ರು ಮನಸ್ಸು ಹಾಲಂತಿರಲಿ!
ಗೆಳತಿ ಕರುಣೆಯಂತ ಕಡಲು ನಿನ್ನದಾಗಲಿ

ಹೇಳೊರೆಲ್ಲ ಹೇಳ್ಲಿ ಬಿಡಿ ಕೋಪವೆಂದು ಮಾಡಬೇಡ
ನೇರಳೆ ಹಣ್ಣಿಗೆಂದು ಸಾವಿರ ಜನರ ಕಣ್ಣು! ನನ್ನಗೆಳತಿ
ಜಾಲಿಮರಕ್ಕೆ ದುಷ್ಟರ ಕಣ್ಣು ಬೀಳದಿಲ್ಲವೆ

ಅತ್ತೆ ಮಾವರ ಸುಖವನ್ನು ಸುತ್ತ ತಿರುಗಿ ನೋಡಬೇಕು
ಮುತ್ತಿನಂತ ಮೂರು ಮಕ್ಕಳು ಹೆತ್ತು ಕೊಡಬೇಕು!ನನ್ನ ಗೆಳೆಯ ಜಾಲಿ ಮರದ ಮಂಚದ ಮೇಲೆ ಮಲಗಬೇಕು

- ಜಿ ಟಿ ಆರ್ ದುರ್ಗ
ಬಂಗಾರಪೇಟೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...