ಗಜಲ್
ಬಣ್ಣದ ಲೋಕದಲಿ ಬಣ್ಣವ ಹಚ್ಚಿಕೊಂಡವನು ನಟನಲ್ಲವೆ ಸಾಕಿ
ಬಣ್ಣ ಬಣ್ಣದ ಮಾತಿನಲಿ ಚೆಂದದಾಟ ಆಡುವವನು ನಟನಲ್ಲವೆ ಸಾಕಿ
ಅರ್ಥವಿಲ್ಲದ ದ್ವೇಷವನು ಹುಟ್ಟಿಸಿ ಹುಸಿ ಖುಶಿಯಲಿ ಬಾಳುವನು
ಸ್ವಾರ್ಥದ ಬಿರುಕನು ಮಾಡಿ ಲಾಭವ ಹುಡುಕುವವನು ನಟನಲ್ಲವೆ ಸಾಕಿ
ತಿಳಿ ಹಾಲ ಕಾಯಿಸಿ ಹುಳಿ ಮೊಸರ ಹಿಂಡಿ ಸಂತಸವ ಪಡುವನು
ಸಂಬಂಧಗಳ ಹಿರಿತನಕೆ ಬಿರುಕಿನ ಬೇಲಿಯ ಹಾಕುವವನು ನಟನಲ್ಲವೆ ಸಾಕಿ
ಇಲ್ಲ ಸಲ್ಲದ ದ್ವೇಷವ ಮಾಡಿ ಯುದ್ಧವನು ಕರೆದು ತಂದಿಟ್ಟು ಜಾರುವನು
ಲಂಪಟನು ಇವನು ನಸುಗುನ್ನಿ ಕಾಯಿ ಸಂಪನ್ನನಾಗೆ ಇರುವನಿವನು ನಟನಲ್ಲವೆ ಸಾಕಿ
ತಾನು ಮಾಡಿದ್ದನ್ನು ತಾನೇ ಉಣ್ಣಬೇಕೆಂಬುದನು ತಿಳಿಯನೇನಿವನು
ತಾನು ಶಕುನಿಯೇ ಇವನು..! ಕೃಷ್ಣನಂತೆ ಕಾಯುವೆ ಎನುತಲಿರುವನು ನಟನಲ್ಲವೆ ಸಾಕಿ
- ಶ್ರೀ ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ.
ಮನುಷ್ಯನ ಎರಡು ಮುಖಗಳ ನಟನೆಯನ್ನು ತನ್ನ ಸ್ವಾರ್ಥಕ್ಕೆ ಹೇಗೆ ಬದಲಿಸುತ್ತಾನೇ ಎಂಬ ವರ್ಣನೆ ತುಂಬಾ ಅಧ್ಬುತ ಗುರುಗಳೇ
ಪ್ರತ್ಯುತ್ತರಅಳಿಸಿ