ಮಂಗಳವಾರ, ಜುಲೈ 6, 2021

ಸಂಭಂಧಗಳ ಮೌಲ್ಯ ಕ್ಷೀಣವಾಗಲು ಕಾರಣಗಳು ಮತ್ತು ಸುಧಾರಣಾ ಕ್ರಮಗಳು (ಲೇಖನ) - ಪುರುಷೋತ್ತಮ ಪೆಮ್ನಳ್ಳಿ.

 ಸಂಭಂಧಗಳ ಮೌಲ್ಯ ಕ್ಷೀಣವಾಗಲು ಕಾರಣಗಳು ಮತ್ತು ಸುಧಾರಣಾ ಕ್ರಮಗಳು.

ಮಾನವ ಸಮಾಜ ಜೀವಿಯಾಗಿದ್ದು ತನ್ನ ಸುತ್ತಮುತ್ತಲಿನ  ಜನರೊಡನೆ ಉತ್ತಮ ಮಾನವೀಯ‌ ಮೌಲ್ಯಯುತ ಸಂಬಂಧಗಳನ್ನು ಉಳಿಸಿಕೊಳ್ಳಬೇಕಾದ ಅವಶ್ಯಕತೆಯನ್ನು ಸಕಲರು ಮನಗಾಣಬೇಕಿದೆ...

ಸಂಬಂಧ ಎಂಬ ಪದವು ವ್ಯಕ್ತಿಗಳ ನಡುವಿನ ಆತ್ಮೀಯತೆಯನ್ನು ಬೆಸೆಯುವ ಹಾಗೂ ಪರಸ್ಪರ ಅರ್ಥಮಾಡಿಕೊಳ್ಳುವ ವಿಶಾಲ ಮನೋಭಾವದ ಮೇಲೆ ನೆಲೆಗೊಂಡಿರುತ್ತದೆ.

ಭುವಿಯು ಮಾನವನಿಗೆ ಲಭಿಸಿದ ವರದಾನ ಎಲ್ಲರನ್ನು ಹೊಂದಾಣಿಕೆ ಮಾಡಿಕೊಳ್ಳುವ ಜೀವನ ಮೌಲ್ಯಗಳು ಕಲಿತಾಗ ಜೀವನಕ್ಕೆ ಬೆಲೆ ಸಿಗುತ್ತದೆ ಅಹಂಕಾರದ ಕೂಪದಲಿ ಸಿಲುಕಿ ಮೌಲ್ಯಗಳ ಕಳಚಿಕೊಂಡಾಗ ಆಕಸ್ಮಿಕವಾಗಿ ತಿಳಿದೋ ತಿಳಿಯದೋ ಎಲ್ಲವನ್ನು ಕಳೆದುಕೊಳ್ಳುತ್ತೇವೆ.

ಪ್ರಸ್ತುತ ದಿನಗಳಲ್ಲಿ ಸಂಬಂಧಗಳ ಮೌಲ್ಯಗಳು ಕ್ಷೀಣವಾಗುತ್ತಿರುವ  ವಿಚಾರಗಳನ್ನ ಕಾರಣಗಳ ಸಹಿತ ತಿಳಿಯಬೇಕಿದೆ 
    
ಕಾರಣಗಳು.
---------------------
🍀*ಆರ್ಥಿಕತೆಯ ಕಡೆ ಮನುಜನು ಹೆಚ್ಚಿನ‌ ಗಮನ ಹರಿಸುತ್ತಿದ್ದು ಸ್ನೇಹ ಸಂಬಂಧಗಳ ಬೆಲೆಯನ್ನು ಮರೆಯುತ್ತಿರುವುದು.

🍀*ತಾಂತ್ರಿಕತೆಯ ಸೋಗಿನಲಿ ಬೀಗಿ ತಾಂತ್ರಿಕತೆಯ ಜೀವನ ಶೈಲಿಯಲಿ ತೊಡಗಿಕೊಂಡಿರುವುದು.

🍀*ಅಸೂಯೆಯನ್ನು  ಮನದಾಳದಿ ಮೂಡಿಸಿಕೊಂಡು ನಾಟಕೀಯ ಜೀವನ ನಡೆಸುತ್ತಿರುವುದು.

*🍀ಬಾಲ್ಯದಿಂದಲೂ ಮಾನವೀಯ ಸಂಬಂಧಗಳ ಕುರಿತಾದ ಅರಿವನ್ನು ಮೂಡಿಸದೆ ಕೇವಲ ಉದ್ಯೋಗಕ್ಕಾಗಿ  ಶಿಕ್ಷಣ ಚಟುವಟಿಕೆಯಲಿ ತೊಡಗಿರುವುದು.

*🍀 ಯಾಂತ್ರಿಕ ಜೀವನ ನಡತೆಯಲಿ ತನ್ನದೆಂಬ ವಿಚಾರಗಳಿಗೆ   ಗಮನ ಸೀಮಿತಗೊಳಿಸಿರುವುದು.

🍀ಹಿರಿಯರೊಂದಿಗೆ ಅಂದರೆ ಅಜ್ಜಿ ತಾತರೊಂದಿಗೆ ಬೆರೆತು ಕಲಿಯಬೇಕಾದ ವಿಚಾರಗಳನ್ನು ಕಲಿಯಲು ಮುಕ್ತ ಅವಕಾಶಗಳನ್ನೂ ನೀಡದಿರುವುದು.

🍀ಸಾಮಾಜಿಕ ಜಾಲತಾಣಗಳಲಿ ಮಾಧ್ಯಮ ಸಿನಿಮಾರಂಗದಲ್ಲಿ ಹೆಚ್ಚು ಹೆಚ್ಚು ಸ್ಫೂರ್ತಿದಾಯಕ ವಿಚಾರಗಳನ್ನ ಅಳವಡಿಸಿಕೊಳ್ಳದೆ ಇರುವುದು.

🍀ಸ್ನೇಹಮಯ ವಾತವರಣ ಹಾಗೂ ಮುಕ್ತವಾಗಿ ಬೆರೆಯುವಂತಹ ಅವಕಾಶಗಳನ್ನ  ಸೃಜಿಸಿ ಕೊಳ್ಳದಿರುವದು.

🍀 ವಿಶಾಲತೆಯ ಮನೋಭಾವನೆಯ ಕೊರತೆ ಎಲ್ಲ ಸಂಬಂಧ ಮೌಲ್ಯಗಳು ದೂರ ಸರಿಯಲು ಪ್ರಮುಖ ಕಾರಣವಾಗಿದೆ.

🍀ಬದುಕಿನ ತತ್ವಸಾರಗಳು ಸಿದ್ಧಾಂತಗಳು ಆದರ್ಶಗಳು ಹಂಚಿಕೆಗೊಳ್ಳುವ ವಿಚಾರದಲ್ಲಿನ ಗೊಂದಲಗಳು.

🍀ಆರೋಗ್ಯದಾಯಕ ಜೀವನ ಶೈಲಿಯಲಿ ಕಾಣುವ ಗೊಂದಲಗಳು.

 ಪ್ರತಿಯೊಂದು ಸಮಸ್ಯೆಗೂ ಪರಿಹಾರವೆಂಬಂತೆ ಮಾನವ ಸಂಬಂಧಗಳ ಮೌಲ್ಯ ಕ್ಷೀಣಿಸುತ್ತಿರುವುದನ್ನ ಕೆಲವಾರು ಸಲಹೆಗಳನ್ನೂ ಪಾಲಿಸುವ ಮೂಲಕ ಉತ್ತಮಗೊಳಿಸಬಹುದಾಗಿದೆ
ಆ ಸಲಹೆಗಳನ್ನ ಕೆಳಗಿನಂತೆ ಕಾಣಬಹುದಾಗಿದೆ.

ಸಲಹೆಗಳು
---------------
🍀 ನಾನು ನನ್ನದು ನಾನೇ ಶ್ರೇಷ್ಠ ಎಂಬ ಮನೋಭಾವನೆಗಳನ್ನ ಮನಸಿನಿಂದ ಕಿತ್ತುಹಾಕಿ ಎಲ್ಲರು ನನ್ನಂತೆ ಪ್ರೀತಿಪಾತ್ರರು ಎಂಬ ಸತ್ಯತೆಯನ್ನೂ ತಿಳಿಯಬೇಕು.

🍀ಪೋಷಕರು ತಮ್ಮ ಹಿರಿಯರೊಂದಿಗೆ ಮಕ್ಕಳು ಮುಕ್ತವಾಗಿ ಕಾಲ ಕಳೆಯಲು ಅವಕಾಶ ಮಾಡಿಕೊಡಬೇಕು.

🍀ಮೌಲ್ಯಯುತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವುದು.

🍀ವ್ಯಕ್ತಿಯು ತಾನು ಎಷ್ಟೇ ಶ್ರೀಮಂತನಾದರು ಪ್ರೀತಿ ಪ್ರೇಮ ಮಮಕಾರಗಳಿಂದ ವಂಚಿತನಾದರೆ ಅವನು ನಿಜವಾಗಿಯೂ ಬಡವನಾಗುತ್ತಾನೆ ಎಂಬ ಸತ್ಯವನ್ನ ತಿಳಿಯಬೇಕು.

🍀ಮಕ್ಕಳನ್ನ‌ ಹೊರದೇಶಗಳಲ್ಲಿ ನೋಡ ಬಯಸುವ ನಾವು ಮಾನವತ್ವದ ಅಡಿಯಲಿ ಬೆಳೆಸುವುದನ್ನ ಕಲಿಸುಯುವುದು ಅನಿವಾರ್ಯವಾಗಿದೆ.

🍀ತನ್ನ ಸುತ್ತಲಿನ ಪರಿಸರವ ‌ಅರಿತು ಪ್ರೀತಿ ಹಂಚಿ ಪ್ರೀತಿ ಪಡೆಯುವ ಸನ್ನಿವೇಶಗಳ ಬಗ್ಗೆ ಪರಿಚಯಿಸವುದು ಮೌಲ್ಯಗಳ ವಿಚಾರಗಳ ಬಗ್ಗೆ ಅರ್ಥೈಸುವುದು.

ಮೌಲ್ಯಯುತ ಸಂಬಂಧಗಳಲ್ಲಿ  ಹಿಂದೆ ಮತ್ತು ಇಂದು ಹೇಗೆ ವ್ಯತ್ಯಾಸಗಳನ್ನ ಕಾಣಬಹುದೆಂದು ಒಂದು ಸ್ವರಚಿತ ಕವನದ ಮೂಲಕ ತಿಳಿಸುವ ಪ್ರಯತ್ನ ಮಾಡಲಾಗಿದೆ ಆತ್ಮೀಯರೇ..

🌹ಮರೆತೆ ಬಿಟ್ಟೇವು🌹

ಮರೆತು ಬಿಟ್ಟೇವು ನಾವಿಂದು
ಕಲಿಸುವುದ ಸನ್ನಡತೆಯ ಪರಂಪರೆಯ.
ಸಿಲುಕಿಸಿ ಬಿಟ್ಟೇವು  ಮಗುವಿಂದು
ಬಿಡಿಸಲಾರದೆ ಒದ್ದಾಡುವ ಸೆರೆಯ...

ಮುಂಜಾನೆ ನಸುಕಲಿ ಎದ್ದೇಳತ್ತಿದ್ದ ನಾವಿಂದು 
ಮಲಗಲಿ ಶಾಂತಿಯಲಿ ಮಗುವೆಂದು.
ರವಿಕಾಂತಿಯ ಭೂ ಸ್ಪರ್ಶ‌ ನೋಡಲಿಲ್ಲ..
ಸೂರ್ಯ ನಮಸ್ಕಾರ ಯೋಗವ ನೆನೆಯಲಿಲ್ಲ...

ಕರುಳ ಬಳ್ಳಿಗಳ ಪ್ರೀತಿ ಮಮತೆಯ
ಸಾಮರಸ್ಯದ ಒಡನಾಟವು ಅಂದು.
ಕಳಚಿ ಬೀಗುತಿಹೆವಿಂದು ಪ್ರೀತಿಯ
ಅರಿಯದೆ  ಕಾಟವು ತಪ್ಪಿತು ಎಂದು..‌.

ಸುಸಂಸ್ಕೃತಿಯ ಹೇಳುವ ಸಮಯವ
ಹೊಂದಿಕೆಯ ಮಾಡಲಿಲ್ಲ ನಾವುಗಳು.
ಮೌಲ್ಯಗಳ ಕೇಳುವ ಅವಕಾಶವ
ಅಲೆಯ ತಿಳಿಯಲಿಲ್ಲ ಮಕ್ಕಳು...

ಅಜ್ಜಿ ತಾತನ ಅರಿವಿನ ಕಥೆಯ ಕೇಳಲಿಲ್ಲ
ನೀತಿಯೆನೆಂಬ ಕಲಿಕೆನ  ತಿಳಿಯಲಿಲ್ಲ.
ಜಂಗಮವಾಣಿಗಳ ಸಂತೆಯ ಬರದಲ್ಲಿ
ಸಿಲುಕಿಸಿ ಬಿಟ್ಟೇವು ಗೊಂದಲದ ಗೂಡಲ್ಲಿ...

ಬುಗುರಿ ಕಣ್ಣಾಮುಚ್ಚಾಲೆ ಆಟದಿ ಅಂದು
ಕಲಿತು ನಡೆದೆವು ಬದುಕಿನ ಬಿಂದು.
ಆಟಗಳು ಸಾವಿರಾರು ಇದ್ದರೇನು ಇಂದು
ತಿಳಿಯುವಲ್ಲೆ ಇದ್ದೇವೆ ನಾವು ಇಂದು ಎಂದೆಂದೂ...
 
🌹ಪುರುಷೋತ್ತಮ ಪೆಮ್ನಳ್ಳಿ🌹
ಪಾವಗಡ ತಾ ತುಮಕೂರು ಜಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...