*ಪುಟ್ಟ ಹಕ್ಕಿ* (ಶಿಶುಗೀತೆ)
ಪುಟ್ಟ ಹಕ್ಕಿಯೊಂದು ಹಾರಿ
ನಮ್ಮ ಮನೆಗೆ ಬಂದಿತು
ಬಂದು ಚೀಂವ್ ಚೀಂವ್ ಎಂದು
ಕೂಗತೊಡಗಿತು ಕೂಗತೊಡಗಿತು!!
ಪುಟ್ಟಹಕ್ಕಿಯನ್ನು ಕಂಡು
ನಮ್ಮ ಮುಖದಿ ನಗು ಮೂಡಿತು
ಮನೆಯ ತುಂಬ ಪುಟ್ಟಹಕ್ಕಿಯು
ಹಾರತೊಡಗಿತು ನಲಿಯ ತೊಡಗಿತು!!
ಕೊಕ್ಕಿನಿಂದ ಕುಕ್ಕಿ ಕುಕ್ಕಿ ಪುಟ್ಟಹಕ್ಕಿ
ಅಕ್ಕಿಯನ್ನು ಆನಂದದಿ ತಿನ್ನುತ್ತಿತ್ತು
ಪ್ರೀತಿಯಿಂದ ಕಂಡ ಮನೆಯವರಿಗೆ
ಮನತುಂಬಿ ಭಕ್ತಿಯಿಂದ ನಮಿಸಿತು!!
ಪುಟ್ಟಹಕ್ಕಿ ಮನೆಯವರ ಮನಗೆದ್ದಿತು
ನಿಮಿಷಗಳಲ್ಲಿ ಎಲ್ಲರಿಗೂ ಆಪ್ತವಾಯಿತು
ನಮ್ಮೊಡನಿರಲ ಪುಟ್ಟ ಹಕ್ಕಿಗೆ ಆಸೆಯಾಯಿತು
ಹಕ್ಕಿಯ ಮನೆಯಲ್ಲಿ ಉಳಿಸಲು ನಮ್ಮ ಮನ ಒಪ್ಪಿತು!!
ಹುಲ್ಲುಕಡ್ಡಿ ತಂದು ನಮ್ಮ ಮನೆಯಲ್ಲೇ
ಮೂಲೆಯಲ್ಲಿ ತನ್ನ ಗೂಡು ಕಟ್ಟಿದ್ದು
ಅಂದಿನಿಂದ ಆನಂದದಿ ನಲಿಯುತಾ
ದಿನವು ದೂಡಿತು ದಿನವು ದೂಡಿತು!!
: ಕೆ ಎನ್ ಅಕ್ರಂಪಾಷ
ರಾಜ್ಯ ಕಾರ್ಯದರ್ಶಿ
ಕರುನಾಡು ಸಾಹಿತ್ಯ ಪರಿಷತ್ತು(ರಿ)
ಚಿಂತಾಮಣಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ