"ಜೀವ ಜನನಿ".
ಹೆತ್ತ ತಾಯಿ ಹೊತ್ತ ಕರುಳು ಹರಸಿದೆ ನಿನಗೆ ನೆತ್ತರ|
ತಿಳಿದು ಬೆಳೆದು ನೀಡು ನೀ ಹೆತ್ತ ಮಾತೆಗೆ ಉತ್ತರ|
ಕತ್ತಲೆಯ ಕೋಣೆಯಿಂದ ಹೊರತಂದಿದೆ ನಿನ್ನ ಹೊಂಬೆಳಕಿಗೆ|
ಉಣಿಸಿ ಬೆಳೆಸಿ ಜಗವ ತಿಳಿಸಿ ಹಗಲಿರುಳು ಶ್ರಮಿಸಿದೆ ನಿಮ್ಮೇಳ್ಗೆಗೆ||
ಹೇಸಿಯ ತೊಳೆದು ಕಸವ ಬಳೆದು ನಿನ್ನ ಹೊಟ್ಟೆಗೆ ನೀಡಿದೆ ಅನ್ನವ|
ಸಾಕಿ ಸಲುಹಿದ ಮಾತೆಗೆ ಬಾಕಿ ತೀರಿಸು ನೀ ನಿನ್ನಯ ಋಣವ|
ಕರುಳ ಕಿತ್ತಿ ಕೊರೆವ ನೋವಿಗೆ ನರಳಿ-ನರಳಿ ನಿತ್ತಳು ನಿನಗೆ ಜನನವ|
ಮರಳಿ ನಿಂತು ಬೆರಳ ತೋರಿ ಹೆತ್ತಕರುಳಿಗೆ ತರದಿರು ನೀ ಇನ್ಯಾವುದೇ ಕುತ್ತವ||
ಅರಿಯದೇ ತಿರುಗದಿರು ನೀ ಹೆತ್ತಕರುಳ ಮಹಿಮವ|
ತೊರೆಯದೇ ನಡೆಯದಿರು ನಿನಗೊಲಿದ ಭವವ|
ಮುರಿದು ಜಾರದಿರು ಅವಳಾಕಿದ ಗಡಿಭಾಗವ|
ಕೊನೆಗಾದರೂ ತೋರು ನಿನ್ನೆತ್ತವಳಿಗೆ ದಯವ||
ಜಗದೊಳು ವಿಸ್ಮಯ ಅವಳು ಜಗನ್ಮಾತೆಯು|
ತೋರಿದಳೆಮೆಗೆ ಜಗದೊಳು ಬದುಕುವ ಪ್ರತಿಷ್ಠೆಯು|
ಜಗವರಿಯದ ಜನನಕೆ ಜಗದಿ ಮೆರೆಯಲು ಕರುಣೆ ತೋರಿದ ಕರುಣಾಮಯಿ|
ಮಗು ಅತ್ತಾಗ ಅತ್ತು ನಕ್ಕಾಗ ನಗುತಾ ಮಕ್ಕಳೊಂದಿಗೆ ಬದುಕು ಸಾಗಿಸುವ ಮಹಾತ್ಮೆ ಹೆತ್ತತಾಯಿ||
-ಹನುಮಂತ ದಾಸರ,ಹೊಗರನಾಳ.
ತಾ/ಮಸ್ಕಿ. ಜಿ/ರಾಯಚೂರು.
ಮೊ: 9945246234.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ವಿಚಾರ ಮಂಟಪ ಸಾಹಿತ್ಯ ವೇದಿಕೆ ಪತ್ರಿಕೆಯ ಸಂಪಾದಕರಾದ ಶ್ರೀ ಮಾನ್ ವಿಘ್ನೇಶ್ ಗುರುಗಳಿಗೆ ಹೃತ್ಪೂರ್ವಕ ಧನ್ಯವಾದಗಳು🙏❤❤
ಪ್ರತ್ಯುತ್ತರಅಳಿಸಿ