ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವ
ವೇದಗಳಕಾಲದಿಂದಲೂ ವಿಶೇಷ ಸಂಸ್ಕೃತಿಯುಳ್ಳ ಪವಿತ್ರವಾದ ವೈಜ್ಞಾನಿಕ ನೆಲೆಗಟ್ಟಿನ ಆಚರಣೆಗಳುಳ್ಳಂತಹ ತನ್ನದೇ ಆದ ಭಾವನಾತ್ಮಕ ಸಂಬಂಧ ಬೆಸೆದಿರುವ ದೇಶ ನಮ್ಮ ಭಾರತವಾಗಿದೆ.ಇಂತಹ ನಮ್ಮ ಸಂಸ್ಕೃತಿಯ ಮೇಲೆ ವಿದೇಶಿಯರ ಪ್ರಭಾವ ಹಿಂದಿನಿಂದಲೂ ಬೀರುತ್ತಿದೆ,ಆಗೆಲ್ಲಾ ನಮ್ಮ ಸಂಸ್ಕೃತಿ ಗಟ್ಟಿಯಾಗಿ ಬೇರೂರಿ ಉಳಿದಿತ್ತು, ಆದರೆ ಇತ್ತಿಚಿನ ದಿನಗಳಲ್ಲಿ ಅಂದರೆ ಸ್ವಾತಂತ್ರ್ಯ ನಂತರ ಹಲವು ಸಂಸ್ಕೃತಿಯ ಜನ,ಜನಾಂಗ,ದೇಶಗಳ ಪ್ರಭಾವ ಹೆಚ್ಚಾಗಿ ನಮ್ಮ ಸಂಸ್ಕೃತಿಯನ್ನ ಕೆಲವರು ಕೈಬಿಡುತ್ತಿದ್ದಾರೆ,
ನಮ್ಮ ಆಹಾರ ಪದ್ಧತಿ, ಹಿಂದಿನ ಕಾಲದಲ್ಲಿ ಕುಳಿತು ಊಟ ಮಾಡುವ,ಸಹಭೋಜನ ಪದ್ಧತಿ ಇತ್ತು,ಈಗ ಒಬ್ಬರೇ ಬೇಕೆಂದಾಗ ಬೇಕು ಬೇಕಾದ ಕಡೆಯಲ್ಲಿ ಆಹಾರ ಸೇವನೆ ಮಾಡಲಾಗುತ್ತಿದೆ.ಏನು ತಿಂದೆವು ಎಷ್ಟು ತಿಂದೆವು ಅನ್ನುವುದೇ ಗೊತ್ತಾಗದ ಸ್ಥಿತಿ ಬಂದೊದಗಿದೆ.ಉಡುಪು ವಸ್ತ್ರ ವಿಷಯದಲ್ಲಿಯೂ ಸಹ ವಿದೇಶಿಗರ ಪ್ರಭಾವ ಹೆಚ್ಚಾಗಿ ನಮ್ಮ ಸಂಸ್ಕೃತಿಯ ಉಡುಪು ಬದಲಿಗೆ ವಿದೇಶಿ ಉಡುಗೆ ತೊಡುಗೆ ಹೆಣ್ಣು ಗಂಡೆಂಬ ವ್ಯತ್ಯಾಸ ತಿಳಿಯದಷ್ಟು ಪ್ರಭಾವ ಬೀರುತಿದೆ.
ಹೀಗೆ ಆಹಾರ,ಉಡುಗೆ ತೊಡುಗೆಯೇ ಅಲ್ಲದೇ ಭಾಷೆಯ ಮೇಲೂ,ಶಿಕ್ಷಣ ವ್ಯವಸ್ಥೆಯ ಮೇಲೂ ಪಾಶ್ಚಿಮಾತ್ಯ ಶೈಲಿ ಪ್ರಭಾವ ಬೀರುತಿದೆ.ನಮ್ಮ ಸಂಸ್ಕೃತಿಯ ಗುರುಕುಲ ಶಿಕ್ಷಣದಲ್ಲಿ ಮೌಲ್ಯ ಶಿಕ್ಷಣಕೆ ಹೆಚ್ಚು ಒತ್ತು ನೀಡಲಾಗುತ್ತಿದೆ.ಆದರೆ ಇಂದಿನ ಶಿಕ್ಷಣ ವ್ಯವಸ್ಥೆ ನಾಗಾಲೋಟದಲಿ ಓಡುವ ದುಡ್ಡನು ದುಡಿಯಲು ಮಾತ್ರವೇ ಎಂಬಂತೆ ಬಿಂಬಿತವಾಗುತಿದೆ.
ಇನ್ನು ಕುಟುಂಬ ವ್ಯವಸ್ಥೆ ಮೇಲೂ ಪಾಶ್ಚಿಮಾತ್ಯತೆ ಎದ್ದು ಕಾಣುತಿದೆ.ನಮ್ಮಲ್ಲಿ ಕಾಣುತ್ತಿದ್ದ ಕೂಡುಕುಟುಂಬ ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿ,ಹಿರಿಯರನು ವೃದ್ಧಾಶ್ರಮಕೆ ಬಿಡುವ,ಕಿರಿಯರನ್ನ ಹಾಸ್ಟೆಲ್ ನಲ್ಲಿ ಬಿಟ್ಟು ಓದಿಸುವ ಪರಿಪಾಠವಾಗಿದೆ.ಇಂದು ಭಾವನೆಗಳು ಬೆಲೆ ಕಳೆದುಕೊಳ್ಳುತಿವೆ,
ಇನ್ನು ನೈತಿಕತೆ ಇಲ್ಲದ ವಿವಿಧ ಆಚರಣೆಗಳು,,ತಿಂದು ಕುಡಿದು ಹೆಣ್ಣು ಗಂಡು ಒಟ್ಟಿಗೆ ಕುಣಿದು ಕುಪ್ಪಳಿಸುತಿವೆ,,ಇಲ್ಲಿ ನಮ್ಮ ಸಂಸ್ಕೃತಿ ನಾಶವಾಗಿ ಪಾಶ್ಚಿಮಾತ್ಯ ಸಂಸ್ಕೃತಿ ಆಚರಣೆ ವಿಜೃಂಭಿಸುತಿದೆ.
ಒಳ್ಳೆಯ ಉತ್ತಮ ಅಂಶ ಭೂಮಿಯ ಯಾವ ಮೂಲೆಯಲ್ಲಿದ್ದರೂ ಅದನ್ನ ಅಳವಡಿಸಿಕೊಳ್ಳೋಣ,ಆದರೆ ಮೌಲ್ಯಗಳಿಲ್ಲದ ಕೇವಲ ಆಡಂಬರಕೆ ಯಾವುದೇ ಸಂಸ್ಕೃತಿಗೆ ಮಾರುಹೋಗದೆ,ನಾವು ಭಾರತೀಯರು ಇಡೀ ವಿಶ್ವಕ್ಕೆ ಮಾದರಿಯಾದವರು,ನಮ್ಮ ಸಂಸ್ಕೃತಿಯನ್ನ ಆಚರಿಸೋಣ,ಗೌರವಿಸೋಣ.
*ಆನಂದಜಲ,ಶಿಕ್ಷಕಿ*
*ತುರುವೇಕೆರೆ*
(,ನಿಮ್ಮ ಬರಹಗಳ ಪ್ರಕಟಣೆ ಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ