ಭಾನುವಾರ, ಜುಲೈ 4, 2021

ತುಂತುರು ಮಳೆ (ಕವಿತೆ) - ಶಿವನಗೌಡ ಪೊಲೀಸ್ ಪಾಟೀಲ

ತುಂತುರು ಮಳೆ..
 ಮಳೆ ಮಳೆ ತುಂತುರು ಮಳೆ
 ತೊಳೆಯಿತು ಭೂಮಿಯ ಕೊಳೆ
 ಸುಮಧುರ ವಾಸನೆಯ  ಹೊಳೆ
 ಒಳಪಾಯಿತು ಭೂಮಿಯ ಕಳೆ

 ಪ್ರಕೃತಿ ತಂಪಾಯಿತು
 ಮನಸ್ಸು ಇಂಪಾಯಿತು
 ಭೂಮಿ ಹಸಿರಾಯಿತು
 ಆಸೆ  ಚಿಗುರೊಡೆಯಿತು

 ಗುಡುಗುಡು ಶಬ್ದವಿಲ್ಲದೆ
 ಸುರಿಯಿತು ತುಂತುರು ಮಳೆ
 ನೀರು ಶೇಖರಣೆ ಯಾಗಲಿಲ್ಲ
 ಆದರೂ ಹೆಚ್ಚಾಯಿತು ಹಸಿರಿನ ಕಳೆ..

 ತುಂತುರು ಮಳೆಯಲ್ಲಿ
 ಆಡುವುದು ಬಲುಚಂದ
 ಕೋಗಿಲೆಯ  ಇಂಪಾದ
 ಗಾನ ಇನ್ನೂ ಆನಂದ

ತುಂತುರು ಮಳೆಯನಡುವೆ
ಸೂರ್ಯ ಬೆಳಕು ಚೆಲ್ಲಿದ
ಆ ಬೆಳಕಿನಲ್ಲಿ ಮೋಡದಲ್ಲಿ
ಕಾಮನಬಿಲ್ಲು ಮೂಡಿದ
- ಶಿವನಗೌಡ ಪೊಲೀಸ್ ಪಾಟೀಲ
ಸಾಹಿತಿಗಳು ಕೊಪ್ಪಳ
9845646370.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...