ಭಾನುವಾರ, ಜುಲೈ 4, 2021

ಒಳಿತೆಂದಿಗೂ ಸ್ಥಿರ (ಕವಿತೆ) - ಜಿ ಟಿ ಆರ್ ದುರ್ಗ.

ಒಳಿತೆಂದಿಗೂ ಸ್ಥಿರ

ಯೋಚಿಸಿ ನೋಡು ಮನುಜ 
ಜೀವನದ ಸುಖವ.....
ನಾವೆಷ್ಟು ದಿವಸ ಬದುಕಿರುವುದು
ಆಲೋಚಿಸು ಓ ಮನುಜ

ಮಾಡೋದೆಲ್ಲ ಬಹಳಷ್ಟಿದೆ ಮಾಡಿಬಿಡು
ಒಳ್ಳೆದೆಲ್ಲ ಎಷ್ಟೊಂದಿದೆ ನೋಡಿಬಿಡು
ಇರುವ ತನಕ ನೀನು ಒಳಿತು ಮಾಡಿಬಿಡು
ಸಾವು ಯಾರಿಗಿಲ್ಲಿ ಬಿಡುವುದಿಲ್ಲ ನೋಡು

ನೀನು ಮನುಷ್ಯನಾದ್ರೆ ಬದುಕಿ ಬಿಡು
ಅರ್ಥ ಮಾಡಿ ಒಳಿತನ್ನು ಮಾಡಿ ಬಿಡು
ಇನ್ನೊಬ್ಬರಿಗೆ ಖೇಡನ್ನೆಂದು ಬಯಸಬೇಡವೆ
ಶಾಶ್ವತ ಯಾರಿರಲ್ಲ ಭೂಮಿಲಿ ಮರೆಯ ಬೇಡವೆ

ಹರಿವ ನೀರಿನಂತೆ ಕೊನೆಗೆ ತೊರೆಗೆ ಸೇರಿ
ಸಾಗರ ಜೊತೆಯಲ್ಲಿ ಮುಳುಗಿ ದಡವ ಸೇರಿ
ಅಲೆಗಳಾಗಿ ಬರುವ ಕಷ್ಟ ಸಹಿಸಬೇಕು
ಒಟ್ಟಿಗೆ ಬದುಕಿ ಬಾಳ್ವೆಯನ್ನು ಮಾಡಬೇಕು

ಇದ್ದುದನ್ನು ಕೂಡಿಟ್ಟು ಮಣ್ಣಿಗೆ ಹೋಗಬೇಡ
ಇರುವುದನ್ನು ಹಂಚಿ ತಿನ್ನು ಸಂಬಂಧ ಬಿಡಬೇಡ
ಇರುವ ನಾಲ್ಕು ದಿನವಾದ್ರು ಒಳಿತು ಮಾಡು
ದ್ವೇಷ ಅಸೂಯೆ ಮನಸ್ಸಿಂದ ಬಿಟ್ಟು ಬಿಡು

ಜಿ ಟಿ ಆರ್ ದುರ್ಗ
ಬಂಗಾರಪೇಟೆ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...