ಶುಕ್ರವಾರ, ಜುಲೈ 23, 2021

ವಿಚಾರ ಮಂಟಪ ಪಾಕ್ಷಿಕ ಸ್ಪರ್ಧೆ ಫಲಿತಾಂಶ ಪ್ರಕಟಣೆ.

ಎಲ್ಲರಿಗೂ ನಮಸ್ಕಾರಗಳು

ವಿಚಾರ ಮಂಟಪ ಸಾಹಿತ್ಯ ಪತ್ರಿಕೆ ಬರಹಗಾರರಿಗಾಗಿ ಪ್ರತಿ ಹದಿನೈದು ದಿನಕ್ಕೊಮ್ಮೆ ಆ ಅವಧಿಯಲ್ಲಿ ಹೆಚ್ಚು  ವೀಕ್ಷಕರನ್ನು ಗಳಿಸಿದ ಒಬ್ಬ ಕವಿ/ಲೇಖಕರಿಗೆ ವಾರ ಉತ್ತಮ‌ ಕವಿ/ಬರಹಗಾರರು ಎಂಬ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುವುದು ಎಂಬ  ಪ್ರಕಟಣೆ ನೀಡಿದ್ದೇವು. 

ಅದರಂತೆ ಎರಡನೇ ಅವಧಿಯಲ್ಲಿ ಅತಿ ಹೆಚ್ಚು ವೀಕ್ಷರನ್ನು ಪಡೆದಿರುವ

 
ಶ್ರೀ ಮಂಜುನಾಥ್ ಡಿ ಕೆ ಇವರು ಬರೆದ 'ಬಂದನವೆಂಬ ರೋಗ' ಎಂಬ ಕವಿತೆ ದಿನಾಂಕ ೦೧:೦೭:೨೦೨೧ - ೧೫:೦೭:೨೦೨೧ ರ ಅವಧಿಯಲ್ಲಿ 

ಅತಿ ಹೆಚ್ಚು ವೀಕ್ಷಕರನ್ನು ಗಳಿಸಿರುವ ಕಾರಣ, ಮಾನ್ಯರಿಗೆ ನಮ್ಮ ವಿಚಾರ ಮಂಟಪ ಪತ್ರಿಕೆಯ ವತಿಯಿಂದ ವಾರದ ಉತ್ತಮ ಬರಹಗಾರರು ಎಂದು ಗುರುತಿಸಿ ಅಭಿನಂಧನಾ ಪತ್ರವನ್ನು ‌ನೀಡಿ ಗೌರವಿಸುತ್ತಿದ್ದೇವೆ.


ಮಾನ್ಯರಿಗೆ ವಿಚಾರ ಮಂಟಪ ಸಾಹಿತ್ಯ ಪತ್ರಿಕೆ ಹಾಗೂ ವಿಚಾರ ಮಂಟಪ ಸಾಹಿತ್ಯ ವೇದಿಕೆಯ ಸಮಸ್ತ ಪಧಾದಿಕಾರಿಗಳ ಪರವಾಗಿ ತುಂಬು ಹೃದಯದ ಅಭಿನಂದನೆಗಳು 💐💐💐

ಶ್ರೀ ಮಂಜುನಾಥ್ ಡಿ‌ ಕೆ ರವರು ಬರೆದ 'ಬಂಧನವೆಂಬ ರೋಗ' ಕವಿತೆ ಮತ್ತೊಮ್ಮೆ ನಮ್ಮ ಓದುಗರಿಗಾಗಿ.....

ಬಂಧನವೆಂಬ ರೋಗ

ಮನೆಯಲ್ಲೇ ಕೂತು ಕಿಡಿಕಾರಿದೆವ..?
ಎಡರು ತೊಡರಲಿ ಮನ:ಶಾಂತಿ ಕಳಕೊಂಡೆವ..?
ನಾವು ನಮ್ಮವರು ತಲೆಯೆತ್ತಿ ನಡೆಯದಂತಾಯಿತ..?
ಸಂತಸದ ದುಡಿಮೆಯಿಲ್ಲದಂತಾಯಿತ..?
ಒಳ್ಳೆ ವಿಚಾರಗಳು ಮನಸಿಗೆ ಹರಿದು ಬಂದವ..?
ಬದುಕು ಕೇಳುವ ನೂರು ಪ್ರಶ್ನೆಗಳ ಜೀವ 
ಉತ್ತರದಲ್ಲಿ ಸತ್ತು ಹೋಗುತ್ತದೆ
ಜೀವರಸವೇ ಬತ್ತಿಹೋಗುತ್ತದೆ.
ತುಡಿವ ಎದೆಮಿಡಿವ ಮನಗಳ
ಮಾನವ ಪ್ರೀತಿಗೆ ಅವಕಾಶವಿರಲಿಲ್ಲ
 ಜಾಗತೀಕದ ಮೇಲಾಟದಲ್ಲೆಲ್ಲ
ಆತಂಕಶಿಸ್ತೀಯ ಮೇಧಾವಿಗಳು ಕಲೆತು
 ಆಯೋಜಿಸಿದ ಯೋಜನೆಗಳ ಫಲ
ಸಮಾಜವ್ಯಾದಿ,ನೆಮ್ಮದಿ ಹಾಳುಮಾಡಿದೆ
 ಇಷ್ಟ ಕಷ್ಟಗಳನ್ನು ಹಂಚಿಕೊಳ್ಳದಂತಾಗಿದೆ.
ಬಾಲ್ಯದಲ್ಲಿ ಕಥೆ ಕೇಳಿದ್ರೆ ನಿದ್ದೆ ಬರ್ತ್ತಿತ್ತು
ಈಗ ನಮ್ಕತೆ ನೆನುಸ್ಕೋಂಡ್ರೆ ನಿದ್ದೆ ದೂರ ಓಡ್ತಿದೆ
ನಾವಿಂದು ನಾಗರೀಕ ಪ್ರಪಂಚದಲ್ಲಿ ಇದ್ದೂ ಇಲ್ಲದಂತಾಗುತ್ತಿದ್ದೀವ..?
ಬದುಕಿನ ಅತಂತ್ರ ಸಂತೆಯಲಿ...!
ಸಕಲ ಜೀವ ಸಂಕುಲಗಳಿಗೂ ಒಳಿತಾಗಲಿ
ಕನಸಿನೊಂದಿಗೆ ಕಟ್ಟಿಕೊಂಡಿದ್ದ ಬದುಕು
ನಿಜವಾದ ಗೆಲುವಾಗಲಿ...!
ಬಂಧನವೆಂಬ ರೋಗ  ತೊಲಗಲಿ..!
ಶಾಂತಿ ನೆಮ್ಮದಿಯ ಸಾಮ್ರಾಜ್ಯ ನಿರ್ಮಾಣವಾಗಲಿ...!

- ಶ್ರೀ ಮಂಜುನಾಥ್ ಡಿ‌ ಕೆ , ಉಪನ್ಯಾಸಕರು.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...