ಕರುನಾಡು ಸಾಹಿತ್ಯ ಪರಿಷತ್ತು
ಜಿಲ್ಲಾ ಘಟಕ ಕೋಲಾರ ಹಾಗೂ ಶ್ರೀ ಟ್ರಸ್ಟ್, ಬೆಂಗಳೂರು
ಇವರ ಜಂಟಿ ಸಹಯೋಗದ ಕಥಾ ಸ್ಪರ್ಧೆಗೆ
ವಿಷಯ: “ಕೋವಿಡ್_19 ನಿಯಂತ್ರಣ ಹಾಗೂ ವ್ಯಾಕ್ಸಿನ್ ಕುರಿತ ಜಾಗೃತಿ”
ಕಳೆದ ವರ್ಷದ ಮಾರ್ಚನಿಂದ ಚೀನಾದ ವುಹಾನ್‍ನಲ್ಲಿ ಹುಟ್ಟು ಪಡೆದ ಸೂಕ್ಷಾಣು ಕೊರೊನಾದಿಂದುಟಾದ
ರೋಗದಿಂದ ಇಡೀ ವಿಶ್ವವೇ ತಲ್ಲಣಿಸಿ ಹೋಗಿದೆ. ವಿಶ್ವದಾದ್ಯಂತ ಲಕ್ಷಾವಧಿ ಜನ ಪ್ರಾಣ ತೆತ್ತಿದ್ದಾರೆ. ಬಡವ-ಬಲ್ಲಿದ, ಮಕ್ಕಳು, ವೃದ್ಧರೆನ್ನದೇ ಎಲ್ಲರನ್ನೂ ಕಾಡಿದ ಕೊರೊನಾ, ರೂಪಾಂತರಿಯೆಂದು ತಜ್ಞರು ಸಾಬೀತುಪಡಿಸಿ, ಅದರ ಆವಾಂತರಗಳನ್ನೂ, ವಹಿಸಬೇಕಾಗಿರುವ ಮುನ್ನೆಚ್ಚರಿಕೆಗಳನ್ನೂ , ಕಾಲ ಕಾಲಕ್ಕೆ ಮಾಧ್ಯಮಗಳ ಮೂಲಕ ಸಾರುತ್ತಲೇ ಇದ್ದಾರೆ. ಈ ನಡುವೆ ಸಾವಿರಾರು ಸಂಘ-ಸಂಸ್ಥೆಗಳು, ಸಮಾಜ ಸೇವಕರು, ವಿದ್ಯಾರ್ಥಿಗಳು, ಮಹಿಳಾ ಮಂಡಳಗಳು, ಸರ್ಕಾರಿ ಅಧಿಕಾರಿಗಳು, ಆರೋಗ್ಯ ಇಲಾಖೆಯ ನೌಕರರು, ಪೋಲೀಸ್ ಇಲಾಖೆಯವರು ಹೀಗೇ ಎಲ್ಲರೂ ತಮಗೆ ಸಾಧ್ಯವಿದ್ದಷ್ಟು ಸಹಾಯ-ಸಹಕಾರಗಳನ್ನು,ನೀಡುತ್ತ, ಜನರಿಗೆ ಸೂಕ್ಷಾಣು ದಾಳಿ, ವಹಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಜಾಗೃÀ್ರತಿ ಅಭಿಯಾನಗಳನ್ನು ಮಾಡುತ್ತಾ ಸೇವಾ ನಿರತರಾಗಿದ್ದಾರೆ.
ಅದು ಎರಡನೇ ಅಲೆ ಶುರುವಾಗುತ್ತಿದ್ದ ಸಮಯ. ಮೊದಲ ಸಲ ಅನುಸರಿಸಿದ್ದ ಬಿಗಿ ಕ್ರಮಗಳಿಂದಾಗಿ ಸ್ವಲ್ಪ ನಿಯಂತ್ರಣಕ್ಕೆ ಬಂದಿದ್ದ ಕೊರೊನಾ ಪರಿಸ್ಥಿತಿಯಿಂದಾಗಿ ನಿಯಮಗಳನ್ನು ಹಂತ ಹಂತವಾಗಿ ಸರಳಗೊಳಿಸುತ್ತಾ ಬಂದಾಗ ಜನರು ಈ ಮೊದಲೇ ನೀಡಲಾಗಿದ್ದ ಎಚ್ಚರಿಕೆಗಳನ್ನು ಮರೆತು ಪ್ರವಾಹೋಪಾದಿಯಲ್ಲಿ ಮಾರುಕಟ್ಟೆ, ಕಛೇರಿ, ವಿವಿಧ ಕಾರ್ಯಕ್ರಮಗಳಲ್ಲಿ ಓಡಾಡಿದ್ದ ಪರಿಣಾಮ ಕೊರೊನಾ ನಿಯಂತ್ರಣ ತಪ್ಪಿ ಹಬ್ಬತೊಡಗಿತ್ತು. ಹಿಂದೆಂದಿಗಿಂತಲೂ ಬಿಗಿಯಾದ ಮುನ್ನೆಚ್ಚರಿಕೆ, ಜಾಗೃತಿ ಅಭಿಯಾನಗಳನ್ನು ನಡೆಸುವದು ಅವಶ್ಯವಾಗಿತ್ತು. ರಾಜು, ರವಿ, ರೀಟಾ, ಸಂಜು, ಸುಜಾತ, ಸಂಗೀತ, ಗೀತಾ, ಗಣೇಶ ಇನ್ನೂ ಹಲವಾರು ಹುಡುಗ-ಹುಡುಗಿಯರು ಇªರೆಲ್ಲರೂ ಪದವಿಯ ವಿದ್ಯಾರ್ಥಿಗಳು, ನಮ್ಮ ಮನೆಯ ಸನಿಹದಲ್ಲೇ ಇದ್ದ ಪಿಜಿಗಳಲ್ಲಿ ವಾಸವಾಗಿದ್ದವರು. ಒಳ್ಳೆಯ ಗೆಳೆತನವಿತ್ತು.ಓದಿನಲ್ಲಿ ಚುರುಕಾಗಿದ್ದವರು, ಅಲ್ಲದೇ ಸಾಮಾಜಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳು, ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದವರು.
ಕೋವಿಡ್ ಕಾರಣದಿಂದಾಗಿ ಕಾಲೇಜುಗ¼ಲ್ಲಿ ನೇರ ತರಗತಿಗಳಿರಲಿಲ್ಲವಾದ್ದರಿಂದ ತಮ್ಮ ತಮ್ಮ ಆನ್ ಲೈನ್ ತರಗತಿಗಳು ಮುಗಿದ ಮೇಲೆ ಬಿಡುವಿನ ವೇಳೆ ಏನಾದರೂ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಯೋಚಿಸಿದರು. ಆಗ ಹೊಳೆದದ್ದೇ ಕೊರೊನಾ ಜಾಗೃತಿ ಅಭಿಯಾನಕ್ಕೆ ನೆರವಾಗುವುದು. ತಮಗೆ ಪರಿಚಯವಿರುವ ಸಮಾಜ ಸೇವಾ ಸಂಘಟನೆಯ ಜನರೊಂದಿಗೆ ಬರೆತು ನಗರದ ಬೇರೆ ಬೇರೆ ಪ್ರದೇಶಗಳಲ್ಲಿ ಹಣ್ಣು-ಹಂಪಲು,ತರಕಾರಿ ಮಾರುವವರಿಗೆ, ಅಂಗಡಿಗಳಿಗೆ ತೆರಳಿ ಈ ಸೂಕ್ಷ್ಮಾಣು ಮನುಷ್ಯನ ದೇಹ ಹೇಗೆ, ಯಾವ ಕಾರಣದಿಂದ ಪ್ರವೇಶ ಮಾಡುತ್ತದೆ, ತಡೆಯುವ ಸುಲಭ ಪರಿಹಾರಗಳ ಬಗೆಗೆ ತಿಳಿ ಹೇಳುವುದು, ಮನೆಯಲ್ಲೇ ಲಭ್ಯವಿರುವ ವಸ್ತುಗಳಿಂದ ಕಷಾಯ ಸೇವನೆ ಕುರಿತು, ಸರಳ ವ್ಯಾಯಾಮ, ಯೋಗಾಸನದ ಬಗೆಗೆ, ತಮ್ಮಲ್ಲಿರುವ ವಿಡಿಯೋಗಳು, ಭಿತ್ತಿಚಿತ್ರಗಳ ಮೂಲಕ ಅರಿವು ಮೂಡಿಸುತ್ತಿದ್ದರು. ಬೀದಿ ನಾಟಕಗಳನ್ನು ರಚಿಸಿ ಆಡುªದರೊಂದಿಗೆ ಇನ್ನೂ ಪರಿಣಾಮಕಾರಿಯಾಗಿ ಜನರ ಮನದಲ್ಲಿ ತಿಳುವಳಿಕೆ ಉಂಟು ಮಾಡುತ್ತಿದ್ದರು. ಚಿಕ್ಕ ಚಿಕ್ಕ ತಂಡಗಳನ್ನು ರಚಿಸಿಕೊಂಡು ಹೊಸ ಹೊಸ ವಿಧಾನಗಳಿಂದ ಜಾಗೃತಿ ಕಾರ್ಯಕ್ರಮವನ್ನು ನಡೆಸುತಿದ್ದರು. ಸರಕಾರೇತರ ಸಂಸ್ಥೆಗಳು ನೀಡುವ ಮಾಸ್ಕ, ಆಹಾರದ ಕಿಟ್ಗಳನ್ನು ವಿತರಿಸುವುದು, ಸೋಂಕಿತರಿಗೆ ಅಂಬ್ಯುಲೆನ್ಸ, ದೊರಕಿಸಿಕೊಡುವುದು, ಅವಶ್ಯವಿರುವ ಬಡವರಿಗೆ ಆಸ್ಪತ್ರೆಗಳ ಮಾಹಿತಿ ನೀಡುವುದು. ಹೀಗೆ ಅನೇಕ ಚಟುವಟಕೆಗಳಲ್ಲಿ ಸಕ್ರಿಯರಾಗಿದ್ದರು. ಅವರಲ್ಲಿ ಕೆಲವರು ಪರಿಚಯವಿದ್ದುದರಿಂದ ಆಗಾಗ ತಾವು ಮಾಡಿದ ಕೆಲಸ, ಭೇಟಿ ನೀಡಿದ ಬೇರೆ ಬೇರೆ ಸ್ಥಳಗಳು, ಅಲ್ಲಿಯ ಗಲ್ಲಿಗಳಲ್ಲಿ ಜನರು ಹೇಗೆ ವರ್ತಿಸಿದರು ಮುಂತಾದವುಗಳನ್ನು ಹಂಚಿಕೊಳ್ಳುತ್ತಿದ್ದರು. ಅವರಿಂದ ಪ್ರೇರಿತಳಾಗಿ, ನಾನೂ ನಮ್ಮ ಪ್ರದೇಶದ ಹಲವು ಮನೆಗಳಿಗೆ ಅವರೊಂದಿಗೆ ಅಭಿಯಾನದಲ್ಲಿ ಪಾಲ್ಗೊಂಡದ್ದಿದೆ,
ಅಷ್ಟೊತ್ತಿಗೆ ವ್ಯಾಕ್ಸಿನೇಶನ್ ವಿತರಣೆಯೂ ಶುರುವಾಗಿತ್ತಾದ್ದರಿಂದ ಮತ್ತು ಜನರಲ್ಲಿ ವ್ಯಾಕ್ಸಿನ್ ಬಗೆಗೆ ಇದ್ದ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ, ಲಸಿಕೆ ಪಡೆಯುವದರಿಂದ ರೋಗ ಬರದಂತೆ ತಡಿಗಟ್ಟುವುದು ಹೇಗೆ ಸಾಧ್ಯವಾಗುತ್ತದೆಂಬುದನ್ನೂ ತಮ್ಮ ಸಂಬಂಧಿಕರನ್ನು ಕರೆಸಿ ಲಸಿಕೆ ಹಾಕಿಸುವ ಮೂಲಕ ಖಚಿತ ಪಡಿಸಿ ಪ್ರೇರೇಪಿಸಿದರಂತೆ. ವ್ಯಾಕ್ಸಿನ್ ಪಡೆದ ಮೇಲೆ ಕಾಣಿಸಬಹುದಾದ ಸಾಮಾನ್ಯವಾದ ಅದರೆ ನಿರಪಾಯಕಾರಿಯಾದ ಲಕ್ಷಣಗಳ ಬಗ್ಗೆ ತಿಳಿ ಹೇಳಿ ಹೆಚ್ಚೆಚ್ಚು ಜನರು ವ್ಯಾಕ್ಸನ್ ಪಡೆಯಲು ನೆರವಾಗುತ್ತಿದ್ದರು.
ವಿದ್ಯಾರ್ಥಿಗಳು ರಚಿಸಿದ ಭಿತ್ತಿ ಪತ್ರಗಳ ಬರಹಗಳು.
• ಸ್ಯಾನಿಟೈಸ್ ಮಾಡುವುದನ್ನು ಮರೆಯದಿರಿ
• ಮಾಸ್ಕ ಧರಿಸುವುದು ಇನ್ನೂ ಅವಶ್ಯ. ಕೊರೊನಾ ನಮ್ಮ ಬೆನ್ನ ಹಿಂದಿದೆ.
• ಎರಡು ಮೀಟರ್ ಅಂತರ ನಮ್ಮನ್ನು ಕಾಪಾಡುವುದು ನಿರಂತರ.
• ಅವಶ್ಯಕತೆ ಇದ್ದರೆ ಮಾತ್ರ ಹೊರ ಹೋಗಿ, ಎಸ್, ಎಮ್, ಎಸ್ ಮರೆಯದಿರಿ.
• ನಿಮ್ಮನ್ನು ನೀವು ಸುರಕ್ಷಿತವಾಗಿಟ್ಟುಕೊಂಡರೆ, ನಿಮ್ಮ ಸುತ್ತಲಿನವರನ್ನು ಕಾಪಾಡಿದಂತೆ.
• ವ್ಯಾಕ್ಸಿನ್ ಪಡೆಯಿರಿ. ರೋಗ ನಿರೋಧಕ ಶಕ್ತಿ ಬೆಳೆಸಿಕೊಳ್ಳಿ.
• ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ.
• ಆರೋಗ್ಯವಂತ ನಾಗರಿಕ ಸಮುದಾಯ, ದೇಶದ ಶಕ್ತಿ.
• ಮಾಡಿದರೆ ಅಲಕ್ಷ್ಯ, ತರುವುದು ಆಪತ್ತು ಮರೆಯದಿರಿ.
ಹೀಗೆ ಫಲಕಗಳನ್ನು ಸಿದ್ಧಪಡಿಸಿಕೊಂಡು ಗಲ್ಲಿ ಗಲ್ಲಿಗಳಲ್ಲಿ ಸಂಚರಿಸಿ ತಿಳಿಸಿಹೇಳುತ್ತಿದ್ದರು, ನಾನಾ ಸಂಘಟನೆಗಳು ಈ ವಿದ್ಯಾರ್ಥಿಗಳ ಕಾರ್ಯವನ್ನು ಶ್ಲಾಘಿಸುತ್ತಿದ್ದರು. ನಿಜಕ್ಕೂ ವಿದ್ಯಾರ್ಥಿ ದೆಸೆಯಲ್ಲಿ ಈ ರೀತಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಮುಂದೆ ಅತ್ತ್ಯತ್ತಮ ನಾಯಕತ್ವದ ಗುಣಗಳನ್ನು ಬೆಳೆಸಬಲ್ಲುದು. ಒಂದೆರಡು ದಿನ ರಜೆ ಸಿಕ್ಕರೆ ಅಲ್ಲಿ ಇಲ್ಲಿ ತಿರುಗಾಟದ ಯೋಜನೆ ಹಾಕುವುದು, ಮೊಬೈಲ್‍ಗಳನ್ನು ನೋಡುತ್ತಾ ಕಾಲಹರಣ ಮಾಡುವ ಇಂದಿನ ಬಹುತೇಕ ವಿದ್ಯಾರ್ಥಿಗಳಿಗೆ ಆ ಹುಡುಗರ ತಂಡ ಮಾದರಿಯಾಗಿದೆ.
ಶ್ರೀಮತಿ ರೇಖಾ.ಎಂ.ನಾಡಿಗೇರ,
211, ಕನ್ಹಯ್ಯ ಅಪಾರ್ಟಮೆಂಟ್,
ಅಮರಗೋಳ, ಹುಬ್ಬಳ್ಳಿ, 9886590666.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ :9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ