ಉಕ್ಕಲಿ ಗ್ರಾಮದ ಸೈನಿಕನಿಗೊಂದು ಸಲಾಂ"
ಭಾರತ ಸ್ವತಂತ್ರ ಪಡೆದು ಅದೆಷ್ಟೋ ವರ್ಷಗಳೇ ಗತಿಸಿದರೂ ಇನ್ನು ಈ ದೇಶದಲ್ಲಿ ಉಗ್ರರ ಅಟ್ಟಹಾಸ ಮೇಲಕ್ಕೇರುತ್ತಿದೆ ದಿನಾಂಕ 01/07/2021ರಂದು ಜಮ್ಮು ಕಾಶ್ಮೀರ ರಾಜ್ಯದ ಪುಲ್ವಾಮ ದಾಳಿಯಲ್ಲಿ ನಮ್ಮ ಉಕ್ಕಲಿ ಗ್ರಾಮದ ವೀರಯೋಧ ಕಾಶಿರಾಯ ಬೊಮ್ಮನಹಳ್ಳಿ ಯವರು ವೈರಿಗಳ ಗುಂಡಿಗೆ ಎದೆಕೊಟ್ಟು ವೀರ ಮರಣ ಹೊಂದಿದ್ದಾರೆ.
ಹಾಗೆಯೇ ಇವರು ದೇಶದ ವಿವಿಧ ಕಡೆಯಲ್ಲಿ ವೃತ್ತಿ ಮಾಡುತ್ತ 15 ವರ್ಷಗಳೇ ಗತಿಸಿದವು ಇನ್ನು ಎರಡು ಮೂರು ವರ್ಷಗಳಲ್ಲಿಯೇ ಸೈನ್ಯದಿಂದ ನಿವೃತ್ತಿ ಹೊಂದಿ ಮನೆಗೆ ಬರುತ್ತೇನೆ ಎಂದು ತನ್ನ ತಾಯಿ ಹಾಗೂ ಹೆಂಡತಿ-ಮಕ್ಕಳಿಗೆ ಸದಾ ಹೇಳುತ್ತಲೇ ಇರುತ್ತಿದ್ದರು. ಇವರಲ್ಲಿ ಇರುವ ದೇಶಭಕ್ತಿಯ ಪ್ರೇಮ ಸದಾ ಚಿಗುರುತ್ತಲೆ ಇರುತ್ತಿತ್ತು. ತನ್ನ ಒಬ್ಬ ಮಗನಿಗೆ ಕ್ರಾಂತಿಕಾರಿ ದೇಶಭಕ್ತ ಭಗತ್ ಸಿಂಗನ ಹೆಸರು ಇಟ್ಟಿದ್ದಾರೆ. ಇದು ಇವರಲ್ಲಿರುವ ತಾಯಿ ಭಾರತಾಂಬೆಯ ಮೇಲಿನ ನಿಜವಾದ ಪ್ರೀತಿ.
ಮಡಿದ ಯೋಧನಿಗೆ ನಾವೆಲ್ಲರೂ ಮತ್ತೊಮ್ಮೆ ಭಾವಪೂರ್ಣ ನಮನಗಳನ್ನು ಸಲ್ಲಿಸುತ್ತಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರುತ್ತ ಹಾಗೂ ಅವರ ಕುಟುಂಬಕ್ಕೆ ನೋವು ಮರೆಸುವ ಶಕ್ತಿ ಆ ಭಗವಂತ ನೀಡಲಿ ಎಂದು ಪ್ರಾರ್ಥಿಸೋಣ.
ಜೈ ಹಿಂದ್...
Once again I selute you sir...
- ಅಂಬರೀಶ್ ನಾಯ್ಕೋಡಿ.
ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ ವಿಜಯಪುರ...
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ