ಮಂಗಳವಾರ, ಜುಲೈ 6, 2021

ಮಸಣದ ಹೂವು (ಕವಿತೆ) - ದಾನೇಶ್ವರಿ ಬಸವರಾಜ ಶಿಗ್ಗಾವಿ.

ಮಸಣದ ಹೂವು


ನಗುತಿಹುದು ನೋಡ ಮಸಣದ ಹೂವು, ಎಲ್ಲರೂ ಮಲಗಿಹಳು ಮೌನದಿ ಪಾಪ ಕರ್ಮದ ಪಯಣದಲ್ಲಿ ಎಲ್ಲರಿಗೂ ಒಂದೇ ಸ್ಥಾನ ಇರುವುದು ಇಲ್ಲಿ.
  

ಯಾರು ಕೂಡ ಇಲ್ಲಿ ಗದ್ದಲ ಮಾಡುತ್ತಿಲ್ಲ, ಬಡವ-ಬಲ್ಲಿದ
ಎಲ್ಲರಿಗೂ ಒಂದೇ ಸ್ಥಾನ ನೀಡಿದ ರುದ್ರಭೂಮಿ ಇದು


ನರಕದಂತಿರುವ ಊರಲ್ಲಿ
ಇರುವುದಕ್ಕಿಂತ ನಾನು,
ಮೌನವಾಗಿರುವ ಮಸಣದಲ್ಲಿ ಇರುವುದು ಸುಖವೆಂದು ನನ್ನೊಳಗೆ ನಗುತ್ತಿರುವೆ.


ಮುಂಜಾನೆ ಸೂರ್ಯನ ಕಿರಣಗಳಿಗೆ ಅರಳಿದ ನಾನು
ಸಂಜೆ ಮುದುಡುವ ನಾನು ಪರಿಮಳ ಬೀರಿ ನಗೆಯ ಚೆಲ್ಲಿರುವೆ ನಾನು ಮಸಣದ ಹೂವು

ಭೂಮಿಯ ಮೇಲೆ ಬದುಕುವ ಅವಕಾಶ ದೊರೆತ ನೀನು ನಗುತ ಬಾಳು, ಒಂದಲ್ಲ ಒಂದು ದಿನ ಇಲ್ಲಿಗೆ ನೀನು ಬರಲೇಬೇಕು

- ದಾನೇಶ್ವರಿ ಬಸವರಾಜ ಶಿಗ್ಗಾವಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...