ಶುಕ್ರವಾರ, ಜುಲೈ 16, 2021

ಕರುಣೆ (ಕವಿತೆ) - ಶ್ರೀ ಪುರುಷೋತ್ತಮ ಪೆಮ್ನಳ್ಳಿ.

ಕರುಣೆ

ಕರುಣೆ ತುಂಬಿದ ಮನುಜ ಮನವು 
ದೇವರು ನೀಡಿದ ವರದಾನವು
ತೋರಬೇಕು ಜೀವಿಗಳಲ್ಲಿ ದಯೆಯ
ಬಿಡಿಸಬೇಕು ಕಷ್ಟದ ಸೆರೆಯ...

ನೋವು ನಲಿವು ಕಂಡಾಗ ಮನದಲ್ಲಿ 
ಅರಿವಿಲ್ಲದೆ ಮೂಡುವ ಕರುಣೆಯು
ಪ್ರತಿಫಲವ ಬಯಸದೆ ತೋರುವುದು 
ಅರಿವಲ್ಲಿ ಹೊಸ  ಹೊಸ ಚಿಂತನೆಯು...

ವಿಶ್ವ ಪ್ರೇಮದಿ ತೋರಿದರೆ ಕರುಣೆಯ
ಕಳೆದುಕೊಳ್ಳುವುದೇನಿದೆ ನಮ್ಮಯ
ಕರುಣೆಗೆ ಭಾಜಿನವಾದ ದುಃಖದ ಮನವು
ಹರಸಿದಾಗ ಸಿಗುವುದು ಮನಕೆ ಆನಂದವು...

ನೊಂದ ಮನಕೆ ತೋರಿದ ಕರುಣೆಯು
ನವ ಚೇತನವ ತುಂಬುವುದು ಆಶಯಕೆ
ತಿಳಿಯುವುದು ಸಾಧನೆಯ ಹಾದಿಯು
ಸುಲಭದಿ ಕರುಣೆ ತುಂಬಿದ ಮನಕೆ...

🌹ಪುರುಷೋತ್ತಮ ಪೆಮ್ನಳ್ಳಿ🌹
ಪಾವಗಡ ತಾ ತುಮಕೂರು ಜಿ
ದೂ.೯೬೩೨೨೯೬೮೦೯.




(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...