ಭಾನುವಾರ, ಜುಲೈ 11, 2021

ನಾ ಎಂಬುದ ಬಿಡು (ಕವಿತೆ) - ಶ್ರೀ ಪುರುಷೋತ್ತಮ ಪೆಮ್ನಳ್ಳಿ.

ನಾ ಎಂಬುದ ಬಿಡು

ನಾನು ನಾನೆಂದೇಕೆ
 ಮೆರೆದಾಡುವೆ ಮೂಢ
ಅರಿತು ಬಾಳು ನನ್ನದೆಂಬುದು
 ಏನಿಹುದು ಜಗದಲಿ

ಅಳಿದಾಗ ಹೆಸರು ಇಲ್ಲ
ಹೆಸರುಳಿಯಲು ನಾ
 ಎಂಬುದು  ಮಾಡಿದ್ದಾದರು
 ಏನು ಅನ್ಯರ ಕಷ್ಟಕೆ...

ಪ್ರಾಣಿಪಕ್ಷಿ ಗಿಡಮರಗಳ 
ಬಾಳು ನಮಗಿಂತ ಲೇಸು
ಹಂಚಿ ತಿಂದವು ಅಸೂಹೆಯ
ಕಳಚಿ ವಿಶ್ವ ಪ್ರೇಮದಲಿ...

ನಿಸರ್ಗ ಬೇಸರದಿ ಬೆಂದು 
ಬಳಲಿ ಜೀವನ ಸಾಕಾಯಿತು
ತಿಳಿದರು ಹಲವರು ಜೀವನದ 
ನಶ್ವರತೆಯ ಸತ್ಯತೆ...

ಇನ್ನಾದರೂ ಕಲಿಯಬೇಕಿದೆ
ದೇವರ ಚದುರಂಗದಾಟದಿ 
ಜೀವನವೆಂಬ ಕಾಯಿಯ
 ನಡತೆಯ ನಡೆಸುವ ಪರಿಯ...

ನಾನು ನಾನೆಂದೇಕೆ
 ಮೆರೆದಾಡುವೆ ಮೂಢ...
 
 - ಪುರುಷೋತ್ತಮ ಪೆಮ್ನಳ್ಳಿ
ಪಾವಗಡ ತಾ ತುಮಕೂರು ಜಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...