ಸಲಹು ತಾಯೆ
ಒತ್ತಾರೆ ಎದ್ದು ನಾವು ಭಕ್ತಿಯಿಂದ ನಮಿಪೆವು
ಭೂತಾಯವ್ವ ರೈತರನ್ನ ಸಲಹವ್ವ
ಜಗದ ಪ್ರಾಣ ಕಣ್ಣು ಇವನವ್ವ
ಇವನಿದ್ದರೆ ಜಗವು ಇರುವುದವ್ವಾ
॥ ಪಲ್ಲವಿ ॥
ಮೂಡಣದಿ ನೇಸರನ ಕಿರಣ ಬಿದ್ದಾವ ।
ಜವರಾಯನ ಮಳೆಹನಿ ಚಿಮ್ಮಿ ನಿಂತಾವ ।
ಹದವಾದ ಹೊಲಗಳು ಮುದದಿಂದ ಕರೆದಾವ ।
ಬಿತ್ತನೆಯ ಸುಗ್ಗಿಗೆ ನಾಚಿ ನಿಂತಾವ ।
॥ಪಲ್ಲವಿ ॥
ಜೋಡಿ ಎತ್ತುಗಳು ಗೆಳೆಯರಾಗ್ಯಾವ ।
ಬಿಸಿಲು ಮಳೆಗಂಜದೆ ಜೊತೆಯಾಗಿ ನಿಂತಾವ ।
ಸುಗ್ಗಿ ಕಾಲಕ್ಕೆ ಗೆಜ್ಜೆಯಲ್ಲಿ ಹಿಗ್ಗಿ ಕುಣಿದಾವ ।
ಹಗಲಿರುಳೆನ್ನದೆ ನಿನ್ನ ನೆರವಿಗೆ ಬಂದಾವ ।
॥ಪಲ್ಲವಿ ॥
ಜಗಕೆಲ್ಲ ಧಾನ್ಯವ ಬೆಳೆಯುವ ದೇವರೇ ।
ಜನರೊಳಿತಿಗಾಗಿ ಇರುವ ಅನ್ನದಾತರೇ।
ಮಡದಿ ಮಕ್ಕಳೆಲ್ಲಾ ಸೇರಿ ದುಡಿಯುತಲಿರುವಿರಿ ।
ಹಸಿದರೊಡಲಿಗೆ ಅನ್ನವನಿಕ್ಕುವಿರಿ ।
॥ಪಲ್ಲವಿ॥
ಕನಸು ಕಾಣುತ್ತಲಿರುವ ಅನ್ನದಾತ ನಿತ್ಯವೂ ।
ಬದುಕು ಬಂಗಾರದಂತಾಗುವುದು ಸತ್ಯವು ।
ಮಣ್ಣಿನ ಮಕ್ಕಳಿಗೆ ಕಣ್ಣೀರು ಯಾಕವ್ವಾ ।
ಪನ್ನೀರು ಹರಿಯಲಿ ದಾರಿ ತೋರವ್ವಾ ।
॥ಪಲ್ಲವಿ॥
- ಸುಮಂಗಲಾ ಕೃಷ್ಣ ಕೊಪ್ಪರದ
ಶಿಕ್ಷಕಿ ಎ.ಸಿ.ಒ ಕನ್ನಡ ಮಾಧ್ಯಮ ಪ್ರೌಢಶಾಲೆ ಇಲಕಲ್ಲ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ