ಶುಕ್ರವಾರ, ಜುಲೈ 2, 2021

ಪಾರಿಜಾತ ಪುಷ್ಪ (ಕವಿತೆ) - ಶ್ರೀ ಇಂಗಳಗಿ ದಾವಲಮಲೀಕ.

*ಪಾರಿಜಾತ ಪುಷ್ಪ*
ಎತ್ತಲೋ ಲೋಕದಿಂದ ಬಂದವಳು
ಹೃದಯ ಕದ್ದವಳು ನೀನು
ಭಾವಲೋಕದ  ಭಾವನೆ ನೀನು
ಪಾರಿಜಾತದ ಪುಷ್ಪ ನೀನು

ಅಕ್ಷರಲೋಕದ ಅಪ್ಸರೆಯೇ
ಹೃದಯಾಂತರಾಳದಿ ಬಂದೆ
ಹೃದಯರಾಗಿಣಿಯಾಗಿ 
ಹರಿದು ಬಂದು ನೆಲೆ ನಿಂತಿರುವವಳೆ

ನನ್ನ ಮೂರನೆಯ ಕಣ್ಣಾಗಿ 
ತುತ್ತಾಗಿ ತೊತ್ತಾಗಿ 
ಮತ್ತೆ ಮಡದಿಯಾಗಿ
ಬಂದಿರುವವಳು ನೀನು

ನನ್ನಯ ಕೋಪ ತಾಪಕೆ ಕರಗಿ
ಮಂಜಿನ ಹನಿಯ ಮುತ್ತು ನೀಡಿ
ಬೆಂದವಳು ನೀನು ನನ್ನ ಮಡದಿ
ಕನಲಿದರು ಕರಗುವವಳು ನೀನು

ಕಷ್ಟದ ಬುತ್ತಿಯನುಂಡು
ಸುಖದ ತುತ್ತು ನನಗಿತ್ತವಳು
ಎರಡರಲ್ಲೂ ಜೊತೆಗಿದ್ದು 
ಹೆಗಲ ಕೊಟ್ಟವಳು ನೀನು

ಬಿಡುವುದೇತಕೆ ನಿನ್ನ
ಬಿಡದಿರು ಮಡದಿ ನನ್ನ
ಭವ ಸಾಗರವ ದಾಟಿಸು 
ಬಾ ನನ್ನ ಪಾರಿಜಾತ ಪುಷ್ಪ

*ಶ್ರೀ ಇಂಗಳಗಿ ದಾವಲಮಲೀಕ*
ಶಿಕ್ಷಕ ಸಾಹಿತಿಗಳು ಹತ್ತಿಮತ್ತೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713649 ವಾಟ್ಸಪ್ ಮಾತ್ರ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...