ಶುಕ್ರವಾರ, ಜುಲೈ 2, 2021

ಗೋರೂರು ಅನಂತರಾಜು ಅವರ ಅಪೂರ್ವ ಅನುಭವದಲ್ಲೊಂದು ಸುತ್ತು (ಲೇಖನ) - ಶ್ರೀಮತಿ ಗಿರಿಜಾ ಮಾಲಿ ಪಾಟೀಲ.

ಗೊರೂರು ಅನಂತರಾಜು ಅವರ ಅಪೂರ್ವ ಅನುಭವದಲ್ಲೊಂದು ಸುತ್ತು.

ಗೊರೂರು ಅನಂತರಾಜು ಅವರು ನಮ್ಮ ನಡುವಿನ ಅತ್ಯುತ್ತಮ ಸಾಹಿತಿಗಳಷ್ಟೆ ಅಲ್ಲದೆ ಒಬ್ಬ ನಿಜವಾದ ಸಾಹಿತಿಯಲ್ಲಿ ಇರಬೇಕಾದಂತಹ ಸರಳ ಸಜ್ಜನಿಕೆಯ ಗುಣಗಳನ್ನು ಮೈಗೂಡಿಸಿಕೊಂಡಿರುವ ವ್ಯಕ್ತಿತ್ವ. ಉತ್ತಮ ಬರವಣಿಗೆಯ ಜೊತೆಗೆ ಇವರ ಕ್ರಿಯಾಶೀಲತೆ, ಸಂಘಟನಾತ್ಮಕ ಚಟುವಟಿಕೆ ಎಲ್ಲರಿಗೂ ಮೆಚ್ಚುಗೆ ಆಗುವಂತಹದ್ದು. ಕರ್ನಾಟಕ ರಾಜ್ಯ ಬರಹಗಾರರ ಬಳಗದ ಹಾಸನ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಇವರು ಹಲವಾರು ಯುವ ಬರಹಗಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿಯೂ ಕಾರ್ಯೊನ್ಮುಖರಾಗಿದ್ದಾರೆ. ಇವರ ಜ್ಞಾನದ ಹರಿವು, ಆಳ ವಿಸ್ತಾರಗಳಿಗೆ ಈ ‘ಮುರಿದು ಬಿದ್ದ ಭಜನೆ ಮನೆ’ ಎನ್ನುವ ಲೇಖನ ಸಂಗ್ರಹ ಮಾಲಿಕೆಯು ಉತ್ತನ ಉದಾಹರಣೆಯಾಗಿ ನಿಲ್ಲುತ್ತದೆ. ಅಲ್ಲದೆ ಖ್ಯಾತ ಅಂಕಣಬರಹಗಾರರೂ ಆಗಿರುವ ಇವರು ತಮ್ಮ ಉತ್ತಮ ಬರವಣಿಯ ಮೂಲಕ ಯಾವಾಗಲೂ ಸದ್ದು ಮಾಡುತ್ತಲೇ ಇರುವವರು. ಈಗಾಗಲೆ ಸಾಕಷ್ಟು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿರುವ ಇವರು ಈ ಸಂಕನದಲ್ಲಿ ಮೊಟ್ಟ ಮೊದಲಿಗೆ ಬರುವ ಮುರಿದು ಬಿದ್ದ ಭಜನೆ ಲೇಖನದಲ್ಲಿ ತಾವು ಬಾಲ್ಯದಿಂದಲೂ ನೋಡಿದ ಮತ್ತು ಒಂದು ರೀತಿಯ ಸಾಂಸ್ಕøತಿಕ ನಂಟನ್ನು ಹೊಂದಿರುವ ಭಜನೆ ಮನೆಯ ಮಹತ್ವ ಮತ್ತು ಗೋರೂರು ಪ್ರೇಕ್ಷಣೀಯ ಸ್ಥಳವಾಗಿ ಹೊಂದಿರುವ ಮಹತ್ವ ಹಾಗೂ ಭಜನೆ ಮನೆ ಕುಸಿದು ಬಿದ್ದಾಗಿನ ಭಾವನಾತ್ಮಕ ಅಭಿವ್ಯಕ್ತಿಯೂ ಹೌದು ಯಾವುದೇ ಸೌದ ಭೌತಿಕವಾಗಿ ಕುಸಿದು ಬಿದ್ದಾಗ ಮರು ನಿರ್ಮಾಣ ಮಾಡಬಹುದು ಆದರೆ ಸಾಂಸ್ಕøತಿಕವಾಗಿಯೂ ಅಂಧಃಪತನವಾದಗ ಮರುನಿರ್ಮಾಣ ಹೇಗೆ ಸಾಧ್ಯ? ಎನ್ನುವ ಅಭಿವ್ಯಕ್ತಿಯ ಕೊನೆಯ ಮಾತು ಮನ ಮುಟ್ಟುವಂತಹದ್ದು.
 ‘ಮೊದಲು ಲಾಕ್ ಡೌನ್ ಘೋಷಿಸಿದವನು ಲಕ್ಷ್ಮಣ’ ಎನ್ನುವ ಲೇಖನದ ಆರಂಭ ಹಾಸ್ಯಮಯವಾದರೂ ವಿಷಯ ವಸ್ತು ತುಂಬಾ ಗಂಭಿರವಾದದ್ದು. ಪ್ರಾದೇಶಿಕ ಸ್ವವಲಂಭನೆಯಿಂದ ಆಗಬಹುದಾದ ಅನುಕೂಲಗಳತ್ತ ಇದು ನಮ್ಮ ಗಮನ ಹರಿಸುತ್ತದೆ. ಕರೋನದಿಂದಾಗಿ ಇಡೀ ವಿಶ್ವವೇ ಲಾಕ್ ಡೌನ್ ಸಮಸ್ಯೆಯಿಂದ ತತ್ತರಿಸಿದ್ದು, ಸ್ವಯಂ ಉದ್ಯೋಗ ಮತ್ತು ಸ್ವವಲಂಭನೆಯ ಅಗತ್ಯವನ್ನು ಕರೋನಾದ ಈ ಸಂದಿಗ್ಧ ಪರಿಸ್ಥಿತಿ ತುಸು ಚನ್ನಾಗಿಯೇ ಹೇಳಿದೆ. ವಿದ್ಯಾವಂತರು ಪದವಿಗಳನ್ನು ಪಡೆದು ನೌಕರಿ ಇಲ್ಲದೆ ಅಲೆದು ಅಡ್ಡ ದಾರಿ ಹಿಡಿಯುವುದಕ್ಕಿಂತ ಸ್ವಯಂ ಉದ್ಯೋಗದಿಂದ ತಮ್ಮ ಬದುಕನ್ನಷ್ಟೆ ಅಲ್ಲದೆ ಇಡೀ ಊರನ್ನೇ ಅಚ್ಚುಕಟ್ಟಗಿಸಬಹುದು ಹಾಗೂ ಇದರಿಂದ ಪರಿಸರದ ಸಂರಕ್ಷಣೆಯೂ ಆಗುತ್ತದೆ. ಮಗ್ಗ, ಗಾಣ, ಕಾಗದಗಳನ್ನು ತಯಾರಿಸಿವುದರ ಮೂಲಕ ಮಲ್ಲಿಗೆ ಹಳ್ಳಿ ಗ್ರಾಮಸ್ಥರು ಸ್ವಾವಲಂಭಿಯಾದ ರೀತಿಯನ್ನು ಈ ಲೇಖನ ತುಂಬಾ ಚನ್ನಾಗಿ ವಿವರಿಸುವಲ್ಲಿ ಯಶಸ್ವಿಯಾಗಿದೆ. ಲೇಖನದಲ್ಲಿ ಅಲ್ಲಲ್ಲಿ ಬಳಸಿರುವ ಹನಿಗವನಗಳು ತುಂಬಾ ಸುಂದರವಾಗಿವೆ. “ರಾವಣ ಕೂಗಿ ಭವತೀ ಭಿಕ್ಷಾಂದೇಹಿ ಭಿಕ್ಷೆ ಹಾಕಿ ಕಿಡ್ನಾಪ್ ಆದಳು ವೀದೇಹಿ”  ಗೊರೂರು ಅನಂತರಾಜು ಅವರ ಹಾಸ್ಯ ಪ್ರಜ್ಞೆಯ ಪ್ರತೀಕವಾಗಿ “ಪ್ರೇಮಪತ್ರವನ್ನು ಸಂಪಾದಕರ ಮಗಳಿಗೆ ಕಳಿಸಿದರೆ ಅಲ್ಲಿಂದಲೂ ಬರಬೇಕೆ ವಿಷಾದ ಪತ್ರ! ಹೀಗೆ ಹಾಸ್ಯದ ಚಟಾಕಿ ಹಾರಿಸುತ್ತಲೇ ಉತ್ತಮ ವಿಷಯ ವಸ್ತುವನ್ನು ಮನವರಿಕೆ ಮಾಡಿಕೊಡುವಲ್ಲಿ ಸಫಲರಾಗಿದ್ದಾರೆ. 
‘ಬಂಗಾರದ ಮನುಷ್ಯ ಚಿತ್ರ ನೋಡುತ್ತಾ ಡಾ.ರಾಜ್ ಸ್ಮರಿಸುತ್ತಾ’ ಎನ್ನುವ ಲೇಖನದಲ್ಲಿ ಡಾ.ರಾಜಕುಮಾರ್ ಅವರು ಹಾಸನಿಗೆ ಬೇಟಿ ನೀಡಿದ ಸಂದರ್ಭವನ್ನು ಕಟ್ಟಿಕೊಡುತ್ತದೆ. ಸಾಹಿತ್ಯ ಎನ್ನುವುದು ಹೆಚ್ಚಾಗಿ ಅನುಭವದಿಂದಲೇ ಹುಟ್ಟುತ್ತದೆ ನಿಜ ಆದರೆ ತುಂಬಾ ಸಾರಿ ಕಾಲ್ಪನಿಕವಾಗಿಯೂ ಇರಬಹುದು. ‘ಇಕ್ಕಟ್ಟಾದ ರಸ್ತೆಗಳು ಮನುಷ್ಯನನ್ನು ಉತ್ತಮ ಚಾಲಕನನ್ನಾಗಿ ಮಾಡುತ್ತವೆ’ ಎನ್ನುವ ಲೇಖನದಲ್ಲಿ ಕೂಲಿ ಕಾರ್ಮಿಕರ ಬದುಕಿನ ಸ್ಥಿತಿ ಗತಿ ಹೋರಾಟದ ಕುರಿತು ಮಾತನಾಡುತ್ತಾ ಗೊರೂರು ಅವರು “ಕಾರ್ಮಿಕರು ಬೆವರು ಸುರಿಸಿ ಉತ್ಪಾದನೆಯನ್ನು ಹೆಚ್ಚಿಸುತ್ತಾರೆ. ಆ ಉತ್ಪಾದನೆ ಯಾವುದೇ ರೂಪದಲ್ಲಿರಲಿ ಅದೇ ಆಸ್ತಿ ಅಥವಾ ಬಂಡವಾಳವಾಗುತ್ತದೆ. ಈ ಆಸ್ತಿಯ ಲಾಭ ಬಂಡವಾಳಗಾರರಿಗೆ ಸೇರುತ್ತದೆ.” ಎಂದು ಕಾರ್ಲಮಾಕ್ರ್ಸ ಅವರ ಮಾತನ್ನು ಸಮರ್ತಿಸುತ್ತಾ ಕಾರ್ಮಿಕರ ಪರವಾಗಿ ತಮ್ಮ ವಾದವನ್ನು ಮಂಡಿಸುತ್ತಾರೆ.
 ಹಾಗೆಯೆ ‘ಮನೆಯೊಗಿರಲು ಬೇಸರವೇ ಓದಿ ದಿ ಬೆಟ್ ಸ್ಟೋರಿ’ ಎಂದು ಲಾಕ್ ಡೌನ್ ನಲ್ಲಿನ ಈ ಸಂದರ್ಭವನ್ನು ಸದುಪಯೋಗ ಪಡಿಸಿಕೊಂಡು ಓದುವದರಲ್ಲಿ ತೊಡಗಿಸಿಕೊಳ್ಳುವುದು ಮತ್ತು ಓದು ಎನ್ನುವುದು ಬದುಕಿನಲ್ಲಿ ತರುವ ಬದಲಾವಣೆ ಮತ್ತು ಬೆಳವಣಿಗೆ ಕುರಿತು ತುಂಬಾ ಚನ್ನಾಗಿ ಬರೆಯುತ್ತಾರೆ. ‘ದಿ ಬೆಟ್’  ಎನ್ನುವ ಸ್ಟೋರಿಯನ್ನು ಉದಾಹರಣೆಯಾಗಿ ಬಳಸಿಕೊಂಡು ಬದುಕು ಅನುಭವದ ಮೂಸೆಯಲ್ಲಿ ಅನಿರೀಕ್ಷಿತವಾಗಿ ಹೇಗೆ ಬೇಕಾದರೂ ಬದಲಾಗಬಹುದು ಎನ್ನುವುದನ್ನು ಈ ಲೇಖನ ಚನ್ನಾಗಿ ಮನದಟ್ಟು ಮಾಡುತ್ತದೆ. ‘ಬರೆದಂತೆ ನಡೆಯಲು ಸಾಧ್ಯವಿಲ್ಲ ಏಕೆಂದರೆ?’ ಎನ್ನುವ ಲೇಖನದಲ್ಲಿ ನಾವು ಬರೆಯುವ ವಿಷಯಕ್ಕೂ ನೈಜ ಬದುಕಿಗೂ ತುಂಬಾ ವ್ಯತ್ಯಾಸವಿರುವುದು ಹಾಗೂ ಮದುವೆಯ ಮುಂಚಿನ ಬದುಕಿನ ಸ್ವತಂತ್ರ ಮನಸ್ಸು ಮದುವೆಯ ನಂತರ ಜವಾಬ್ಧಾರಿ ಹೆಚ್ಚಿ ಬಂಧಿಯಂತಾಗಿ ಒತ್ತಡದಲ್ಲಿ ಬದುಕು ಸೀಮಿತವಾಗುವುದನ್ನು ತುಂಬಾ ಚನ್ನಾಗಿ ವಿವರಿಸಿದ್ದಾರೆ.
‘ಕಲ್ಯಾಣದ ಕರುಣಿ ಬಸವಣ್ಣನಿರುವಾಗ ಕಲ್ಲಿಗ್ಯಾಕೆ ಕೈ ಮುಗಿಯುವೆ’ ಎನ್ನುವ ಲೇಖನವು ಬಸವಣ್ಣ ಕಳೆದು ಶತಮಾನಗಳೇ ಸಂದರೂ ಸಮಾನತೆ ಬಾರದಿರುವುದು ಮತ್ತು ಅವರ ವಿಚಾರದಾರೆಗಳೂ ಸಾಹಿತಿಗಳನೆಲ್ಲಾ ಕಾಡಿದರೂ ಇದ್ದ ಸ್ಥಿತಿ ಮಾತ್ರ ಬದಲಾಗಿಲ್ಲ ಹಾಗೂ ಅಂತ ಮಹಾ ಮತ್ಸದ್ದಿ ನಾಯಕನನ್ನು ನಾವು ಪೂಜಿಸಬೇಕೆ ಹೊರತು ಕಲ್ಲನ್ನಲ್ಲ ಎಂದು ಸ್ಪಷ್ಟೀಕರಿಸಿರುವುದು ವೇಧ್ಯವಾಗುತ್ತದೆ.
‘ಇವರ ಒಂದು ಮುಂಜಾನೆಯ ವಾಕಿಂಗ್’ ಎನ್ನುವ ಲೇಖನ ಪ್ರತಿ ವ್ಯಕ್ತಿಯ ಜೀನದಲ್ಲೂ ಮಹತ್ವ ಪೂರ್ಣವಾದ ಈ ವಾಕಿಂಗ್ ನಮಗೆ ಹತ್ತು ಹಲವು ಅನುಭವಗಳ್ನು ಕಟ್ಟಿಕೊಡುವ ಮೂಲಕ  ಇದು ಬದುಕಿನ ಬಹುಮುಖ್ಯ ಆಯಾಮವೇ ಆಗಿರುತ್ತದೆ ಎನ್ನುವುದನ್ನು ಇವರ ಈ ಲೇಖನ ಸಾಕ್ಷೀಕರಿಸುತದೆ. ಹಾಗೆಯೇ ಮುಂದುವರಿದು ‘ಉದುಗೂರು ಶ್ರೀ ಉಮಾಮಹೇಶ್ವರಿ ಕ್ಷೇತ್ರ’, ‘ಮಲೆನಾಡು ಶ್ರೀ ಕ್ಷೇತ್ರ ಸಂಕಲಾಪುರ ಮಠ’, ಮತ್ತು ‘ದಸರೀಘಟ್ಟ ಶ್ರೀ ಚೌಡೇಶ್ವರಿ ಅಮ್ಮನವರು’ ಎನ್ನುವ ಲೇಖನಗಳು ಕ್ಷೇತ್ರ ಮಹತ್ವ ಮತ್ತು ಐತಿಹಾಸಿಕವಾಗಿ ಸ್ಥಳ ಪುರಾಣವನ್ನು ಹಾಗೂ ಆಚರಣೆಗಳನ್ನು ಕಟ್ಟಿ ಕೊಡುವಲ್ಲಿ ಯಶಸ್ವಿಯಾಗಿದ್ದು. ಒಟ್ಟಾರೆಯಾಗಿ ಈ ಲೇಖನಗಳು ಇವರ ಇವರ ಜ್ಞಾನದ ಆಳ ವಿಸ್ತಾರಗಳನ್ನು ಪ್ರತಿಬಿಂಬಿಸುತ್ತವೆ. ಅನುಭವವನ್ನು ಯತಾವತ್ತಾಗಿ ಚಿತ್ರಿಸುತ್ತಾ ಹೊರಡುವ ಗೋರೂರು ಅನಂತರಾಜು ಅವರ ಬದುಕಿನ ವಿಭಿನ್ನ ಅಬಿರುಚಿಯನ್ನೂ ಕಟ್ಟಿಕೊಡುತ್ತದೆ. 
ಹಾಸನ ತಾಲೂಕು 7 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನನ್ನ ಪತಿ ನಾನಾ ಗೌಡ ಮಾಲಿ ಪಾಟೀಲ ಅವರೂ ಕವಿಗೋಷ್ಟಿಯ ಅಧ್ಯಕ್ಷರಾಗಿ ಹೋಗಿದ್ದರು. ಅಲ್ಲಿಗೆ ಕಾರ್ಯಕ್ರಮದ ಸರ್ವಾಧ್ಯಕ್ಷತೆಯನ್ನು ವಹಿಸಿ ವೇದಿಕೆಯನ್ನು ಅಲಂಕರಿಸಿದ ಓಬಳೇಶ ಘಟ್ಟಿಯವರೊಂದಿಗೆ ತಾವು ಕಳೆದ ಹಾಗೂ ಮಾತನಾಡಿದ ಗಳಿಗೆಯನ್ನು ತುಂಬಾ ಚನ್ನಾಗಿ ವಿವರಿಸಿದ್ದಾರೆ. ಹಾಗೂ ಹಾಸನ ಜಿಲ್ಲೆಯ 19 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಮೇಟಿಕೇರೆ ಹಿರಯಣ್ಣನವ ಬದುಕು ಬರಹವನ್ನು ಕೂಡ ವಿವರಿಸುತ್ತಾ ಅವರ ಕವಿತೆಯ ಸಾಲುಗಳನ್ನು ಉದಾಹರಿಸಿದ್ದಾರೆ.

 
ಗೊರೂರು ಅನಂತರಾಜು ಅವರ ಅಪೂರ್ವ ಅನುಭವದ ಅನಂತದಲ್ಲೊಂದು ಸುತ್ತು
ಮುಂದಿನ ಲೇಖನ ಹಳೆಯ ನೆನಪನ್ನು ಮೆಲುಕು ಹಾಕುತ್ತಾ ‘ಬಾಂಬೆಯ ಜೋಕಟ್ಟೆಯೊಂದಿಗೆ ನೆನಪಿನ ದೋಣಿಯಲ್ಲಿ’ ಎನ್ನುವ ಶೀರ್ಷಿಕೆಯಡಿ ಮುಂಬೈನ ಜೋಕಟ್ಟೆಯವರ ಬರಹಗಳನ್ನು ಮೆಲಕು ಹಾಕುತ್ತಾ ‘ಆಡು ಮುಟ್ಟದ ಸೊಪ್ಪಿಲ್ಲ ಜೋಕಟ್ಟೆ ಬರೆಯದೆ ಬಿಟ್ಟ ವಿಷಯವಿಲ್ಲವೆಂದು” ಅವರ ಬರವಣಿಗೆಯ ಆಳ ಅರಿವನ್ನು ಚನ್ನಾಗಿ ವಿಶ್ಲೇಷಿಸಿದ್ದಾರೆ.
‘ಮೂರ್ಖರ ದಿನಚಾರಣೆಯ ಮೋಜಿನ ಇತಿಹಾಸ’ ಎನ್ನುವ ಇವರ ಲೇಖನದಲ್ಲಿ ಮೂರ್ಖರ ದಿನಚಾರಣೆ ಆಚರಣೆಯ ಹಿನ್ನಲೆ ಇತಿಹಾಸವನ್ನು ಕುರಿತು ತುಂಬಾ ಮಾಹಿತಿಯನ್ನು ಹಿಡಿದಿಟ್ಟಿದ್ದಾರೆ. ಇವರ ಆಳವಾದ ಜ್ಞಾನ ಅಧ್ಯಾಯನಗಳಿಗೆ ಹಿಡಿದ ಕನ್ನಡಿಯಂತಹ ಇವರ ಲೇಖನಗಳು ಓದುಗರ ಬದುಕಿಗಂತು ಸಾಕಷ್ಟು ಅನುಭವಗಳನ್ನು ಕಟ್ಟಿ ಕೊಡುತ್ತವೆ. ಅದರಲ್ಲೂ ಇವರ ‘ಕತೆಗೆ ವಸ್ತುವಾದಳು ಹುಡುಗಿ, ಎನ್ನುವ ಲೇಖನದಲ್ಲಿನ ಕತೆ ತುಂಬಾ ಅಧ್ಬುತವಾಗಿ ಮೂಡಿ ಬಂದಿದ್ದು ವೇಷ್ಯಾ ವಾಟಿಕೆಯ ಹಿಂದಿರುವ ಘನ ಘೋರ ಸತ್ಯವೊಂದನ್ನು ಬಯಲು ಮಾಡುತ್ತದೆ. ನನ್ನನ್ನು ತುಂಬಾ ಕಾಡಿದ ಈ ಲೇಖನ ಮನಸ್ಸನ್ನು ತುಂಬಾ ಕಲುಕಿಬಿಟ್ಟಿತು. ಪತ್ರಿಕೆಗಾಗಿ ಬರೆಯಲೆಂದು ಕತೆ ಹುಡುಕುತ್ತಿರುವಾಗ ಕಡೆಗೆ ವಿಷಯಕ್ಕಾಗಿ ತಡಕಾಡಿ ರಾತ್ರಿ ಪಿಕ್ಚರ್ ಬಿಟ್ಟಾಗ ಚಿತ್ರಮಂದಿರದಿಂದ ಹೊರಗೆ ಬಂದು ಹತ್ತಿರ ನಿಂತ ಕೋವiಲ ಎನ್ನುವ ಹೆಣ್ಣೊಬ್ಬಳನ್ನು ಮಾತನಾಡಿಸಿ ತಾವು ಅಪಾಯಕ್ಕೆ ಸಿಲುಕಿ ಕಡೆಗೆ ಹುಡುಗಿಯನ್ನು ಭವಿಷ್ಯದ ಅಪಾಯದಿಂದ ರಕ್ಷಿಸಲಾಗದ ಅಸಹಾಯಕ ಪರಿಸ್ಥಿತಿಗೆ ನೊಂದುಕೊಳ್ಳುವ ಈ ಕತೆ ಎಂತವರ ಮನಸ್ಸನ್ನೂ ಕಲುಕುತ್ತದೆ. ಈ ಲೇಖನ ನಮ್ಮ ನಡುವಿನ ದುಷ್ಟ ಸಮಾಜದ ವಿರುದ್ಧ ಧ್ವನಿ ಎತ್ತುವುದಲ್ಲದೆ ಸ್ತ್ರೀ ಪರವಾದ ಧ್ವನಿಯಾಗಿ ಮಾರ್ಧನಿಸಿದೆ. ನನ್ನನ್ನಂತೂ ಇಲ್ಲಿರುವ ಕೆಲವು ಲೇಖನಗಳು ಭಾವುಕಳನ್ನಾಗಿಸಿ ಕಣ್ಣು ಹಸಿಯಾಗಿಸದೆ ಬಿಡಲೇ ಇಲ್ಲ. 
ಮುಂದುವರಿದು ‘ಬಿಂಡಿಗಾ ಶ್ರೀ ದೇವಿರಮ್ಮ ದೇವಾಲಯ’, ‘ಜನಪದರ ನಂಬಿಕೆಯ ಅಡಿಬೈಲು ರಂಗನಾಥಸ್ವಾಮಿ ಬೆಟ್ಟಕ್ಕೆ ಭೇಟಿ’, ರಾಮಾಯಣದ ಪೋಷಕ ಪಾತ್ರ ಶಭರಿ ಮೋಕ್ಷ’ ಎನ್ನುವ ಲೇಖನಗಳೂ ತುಂಬಾ ಅತ್ಯುತ್ತಮವಾಗಿ ಮೂಡಿಬಂದಿವೆ. ಗೊರೂರು ಅನಂತ ರಾಜು ಅವರು ಮೇಲ್ನೋಟಕ್ಕೆ ಕಂಡಸ್ಟು ಅವರ ಆಂತರ್ಯದ ಅನುಭವಗಳು ಸರಳವಾಗಿಲ್ಲ. ತಾವು ಕಂಡುಂಡ ತಮ್ಮ ಬುದುಕಿನ ಅನುಭವವನ್ನು ಯತಾವತ್ತಾಗಿ ಕಟ್ಟಿಕೊಡುವ ವಿರಳ ಸಾಹಿತಿ ಇವರಾಗಿದ್ದಾರೆ. ಇವರ ಅತ್ಯಂತ ಅಪೂರ್ವವೆನ್ನಿಸುವ ಇಂತಹ ಅನುಭವ ಲೇಖನಗಳು ನಿರಂತರವಾಗಿ ಹೊರ ಬರುವ ಮೂಲಕ ನಮ್ಮಂತ ಯುವ ಬರಹಗಾರರಿಗೆ ದಾರಿ ದೀಪವಾಗಲಿ ಎಂದು ಆಶಿಸುತ್ತಾ...

ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಸಂಸ್ಥಾಪಕ ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ :9448713659 ವಾಟ್ಸಪ್ ಮಾತ್ರ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...