ಗುರುವಾರ, ಜುಲೈ 22, 2021

ಅರಿತು ನಡೆ- ಅರಿವಿನ ಕಡೆ" (ಆಧುನಿಕ ವಚನ) - - ಹನುಮಂತ ದಾಸರ, ಹೊಗರನಾಳ.

"ಅರಿತು ನಡೆ- ಅರಿವಿನ ಕಡೆ"

ಹಬ್ಬ ಹರಿದಿನಕೆ ಶುಧ್ಧಿಯಾದೊಡೇನುಬಹುದು
ಅಂಗ ಶುಧ್ಧಿ ಇಲ್ಲದಿರೆ|
ಅಂಗ ಶುಧ್ಧಿಯಾದೊಡೇನುಬಹುದು
ಅಂತರಂಗ ಶುಧ್ಧಿ ಇಲ್ಲದಿರೆ|
ನದಿ ಸಾಗರದಲಿ ಮಿಂದೇಳಿದರೇನುಬಹುದು
ಬುಧ್ಧಿ ಶುಧ್ಧವಿಲ್ಲದಿರೆ|
ಲಿಂಗವ ಧರಿಸಿದರೇನುಬಹುದು
ಅಂಗಾಂಗಳರಿವು ಇಲ್ಲದಿರೆ|
ಮೀಸೆ ಗಡ್ಡಗಳ ಬಿಟ್ಟರೇನುಬಹುದು
ಆಶೆ ಅನುಭವಗಳ ತೊರೆಯದಿರೆ|
ಶಾಸ್ತ್ರವ ಓದಿದರೇನುಬಹುದು
ನಿಸ್ವಾರ್ಥವನ್ನು ಅರಿಯದಿರೆ|
ವೇದಗಳನು ಓದಿದರೇನುಬಹುದು
ಗಾದೆಮಾತುಗಳ ಅರಿಯದಿರೆ|
ಲಿಂಗಮೋಕ್ಷವ ಪಡೆದರೇನುಬಹುದು
ದುರ್ಜನ ಸಂಗದೋಷವ ತೊರೆಯದಿರೆ|
ಬಸವ ಬಸವ ಎಂದು ಪೇಳಿದರೇನುಬಹುದು
ಬಸವ ತತ್ವಾದರ್ಶಗಳ ಅರಿಯದಿರೆ|
ಗುಡಿ ಗುಂಡಾರಗಳ ಸುತ್ತಿ ತಲೆ ಬೋಳಿಸಿದರೇನುಬಹುದು
ಎಳೆ ಮುಗುವಿನ ಮುಗ್ಧ ಭಾವವ ಅರಿಯದಿರೆ|
ಸಿಗದು ಎಮಗೆಂದಿಗೂ ಬದುಕಿನಲಿ ಮುಕ್ತಿ
ಬೆರೆತು ನಡೆ ಶಿವಶರಣ ಬಸವಣ್ಣರ ಆಧ್ಯಾತ್ಮದಲಿ ಭಕ್ತಿ....!!
              
- ಹನುಮಂತ ದಾಸರ, ಹೊಗರನಾಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...