ಸ್ವಾಭಿಮಾನದ ಸಮುದ್ರ ಡಾ.ಬಿ.ಆರ್.ಅಂಬೇಡ್ಕರ
ಆಹಾರಕ್ಕಿಂತ ಸ್ವಾಭಿಮಾನ ಮುಖ್ಯ. ಸ್ವಾಭಿಮಾನವಿಲ್ಲದ ಮನುಷ್ಯ ಜೀವಂತ ಶವದಂತೆ ಎಂದು ನುಡಿದಿರುವ ಬಾಬಾ ಸಾಹೇಬ ಅಂಬೇಡ್ಕರರು ಅಧಿಕಾರ ಶಿಕ್ಷಣ ಮತ್ತು ಸ್ವಾಭಿಮಾನಗಳಿಸಿದಾಗಲೇ ಈ ಜೀವನಕ್ಕೊಂದು ಅರ್ಥ ಬರುತ್ತದೆ ಎಂದಿದ್ದ ಅವರು ಬರೋಡ ರಾಜ್ಯದಲ್ಲಿ ೧೯೧೭ರಲ್ಲಿ ಮಿಲಿಟರಿ ಕಾರ್ಯದರ್ಶಿಯಾಗಿ ನೇಮಕಗೊಂಡರು. ಅಲ್ಲಿ ಇವನೊಬ್ಬ ಅಸ್ಪೃಶ್ಯ ಎಂದರಿತ ಎಲ್ಲರೂ ಅಗೌರವ ತೋರಿದ್ದರಿಂದ ಸ್ವಾಭಿಮಾನಿಯಾಗಿದ ಅಂಬೇಡ್ಕರರು ಸದರಿಹುದ್ದೆಗೆ ರಾಜಿನಾಮೆ ನೀಡಿ ಹೊರಬಂದರು.
ಹಿಂದೂ ಧರ್ಮದಲ್ಲಿರುವ ಹುಳುಕನ್ನು ಎತ್ತಲೂ ತೊರಿಸಿ ನಾನು ಹಿಂದೂವಾಗಿ ಹುಟ್ಟಿದ್ದೇನೆ ಅದು ನನ್ನ ಕೈಯಲ್ಲಿರಲಿಲ್ಲ ಆದರೆ ನಾನು ಹಿಂದೂವಾಗಿ ಮಾತ್ರ ಸಾಯಲಾರೆ. ಎಂದು ಗರ್ಜಿಸಿ ಸ್ವಾತಂತ್ರ್ಯ, ಸಮಾನತೆ, ಮತ್ತು ಭಾತೃತ್ವದ ಅಡಿಪಾಯದ ಮೇಲೆ ನಿಂತಿರುವ ಬೌದ್ಧ ಧರ್ಮವನ್ನು ಅಕ್ಟೋಬರ್ ೧೪ ೧೯೫೬ ರಂದು ಬೌದ್ಧ ಧರ್ಮ ದೀಕ್ಷೆ ಪಡೆದುದಲ್ಲದೆ ಲಕ್ಷಾಂತರ ದಲಿತರಿಗೂ ದೀಕ್ಷೆ ನಿಡಿಸಿದ್ದರು.ಅಂಬೇಡ್ಕರರು ಅಹಿಂಸಾತ್ಮಕ ಆಯುಧ ಹಿಡಿದು ಸ್ವಾಭಿಮಾನದ ಹಕ್ಕಿಗಾಗಿ ಮಾಡಿದ ಹೋರಾಟೆಗಳೇ ಆಗಿದ್ದವು.
ಬಾಬಾ ಸಾಹೇಬರ ಬಹುಮುಖ್ಯವಾದ ಹೋರಾಟವೆಂದರೆ ಅಸ್ಪೃಶ್ಯತಾ ನಿವಾರಣೆ ಮತ್ತು ಮೀಸಲಾತಿಗಾಗಿ ನಡೆಸಿದ ಚಳುವಳಿ, ಶ್ರೀಮಂತರ ಸಿರಿತನ ದರಿದ್ರರ ಬಡತನದಲ್ಲಿದೆ. ಅದನ್ನು ನಿಮ್ಮ ಕೈಯಲ್ಲಿದೆ. ದುಡಿಯುವ ಜನರೆಲ್ಲಾ ಜಾತಿಮತಗಳನ್ನು ಧಿಕ್ಕರಿಸಿ ಸಂಘತಿರಾಗಬೇಕು. ಈ ಸಂಘಟನೆಯಿಂದಲೇ ಸಂಘರ್ಷ ಮಾಡಬೇಕು ಎಂದರು. ೧೯೩೭ರಲ್ಲಿ ಸಾವಿರಾರು ಅಸ್ಪೃಶ್ಯರನ್ನು ಕಟ್ಟಿಕೊಂಡು ಮಾಹಡ್ ನಗರದ ಬೌಡಾರ್ ಕೆರೆಯ ನೀರನ್ನು ಕುಡಿಯುವ ಚಳುವಳಿ ಹಾಕಿಕೊಂಡು ಯಶಸ್ಸುಕಂಡರು. ಅದೇ ವರ್ಷ ಡಿಸೆಂಬರ್ ಹಿಂದೂ ಧರ್ಮದ ಆಧಾರಸ್ತಂಭ ಅದರ ಧರ್ಮ ಶಾಸ್ತ್ರಗಳಿಗೆ ಮೆದುಳಾಗಿದ್ದ ಮನುಸ್ಮೃತಿಯನ್ನು ದಹಿಸಿದರು.
ನಾಸಿಕದ ಕಾಳಾರಾಮ ಮತ್ತು ಪಾರ್ವತಿಮಂದಿರಗಳನ್ನು ಪ್ರವೇಶಿಸುವ ಚಳುವಳಿ ನಡೆಸಿ ಯಶಸ್ವಿಯಾದರು.
ಸಂಸತ್ತಿನಲ್ಲಿ ಸ್ತ್ರೀಯರಿಗೆ ಸಮಾನವಾದ ಹಕ್ಕಿಗಾಗಿ, ಕಾರ್ಮಿಕರ ಹಕ್ಕಿಗಾಗಿ ಹೊರಾಡಿ ನ್ಯಾಯ ಸಿಗದೆ ಹೋದಾಗ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಹಾನುಭಾವ ಡಾ.ಬಿ.ಆರ್.ಅಂಬೇಡ್ಕರರು.
ಬಾಬಾ ಸಾಹೇಬರ ಅಂಬೇಡ್ಕರರು ೧೯೫೪ರ ಅಕ್ಟೋಬರ ೩ರಂದೂ ಆಕಾಶವಾಣಿಯಲ್ಲಿ ಭಾಷಣ ಮಾಡುತ್ತ ಭಾರತೀಯರು ಇಂದು ಗೂಗಲ್ ಎರಡು ತತ್ವಗಳ ಆಧಾರದ ಮೇಲೆ ನಿಂತಿದ್ದಾರೆ. ಒಂದನೇಯದ್ದು ನಮ್ಮ ಸಂವಿಧಾನ ಸಂಕೇತಿಸುವ ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವವನ್ನು ನಂಬಿದ ರಾಜಕೀಯ ತತ್ವಜ್ಞಾನ. ಎರಡನೆಯದ್ದು ಹಿಂದೂ ಸಮಾಜ ಸಂಕೇತಿಸುವ ಅಸಮಾನತೆ ಪ್ರಶ್ಯ- ಅಸ್ಪೃಶ್ಯ ಎಂಬ ಜಾತಿಪದ್ಧತಿ ತತ್ವಜ್ಞಾನ ಈ ಬಂಧಿತನದ ಮೌಲ್ಯಗಳಿಂದ ಭಾರತೀಯರನ್ನು ಹೊರೆಗೆಳೆಯಲು ನಾನು ಸಂಕಲ್ಪ ಮಾಡಿದ್ದೇನೆ ಎಂದು ಹೇಳಿದರು.
ಅಂಬೇಡ್ಕರರ ಹೋರಾಟ ಸಮಾನತೆ ಹೋರಾಟ ತಾತ್ವಿಕ ಚಿಂತನೆ ಮೇಲೆ ನಿಲ್ಲದೆ ವಾಸ್ತವಿಕ ನೆಲೆಗಟ್ಟಿನ್ನು ಹೊಂದಿತು. ಭಾರತ ಕರಡು ಸಮಿತಿಯ ಅಧ್ಯಕ್ಷರಾಗಿದ್ದಾಗ ಯಾವುದೇ ಜಾತಿ, ಕುಲ, ಸ್ತ್ರೀ ಪುರುಷ ಎಂಬ ಲಿಂಗಭೇದವಿಲ್ಲದೆ ಪ್ರತಿಯೊಬ್ಬ ಭಾರತೀಯ ಪ್ರಜೆಗೊ ಸಮಾನ ಮೂಲಭೂತ ಹಕ್ಕುಗಳು ಕೊಡಬೇಕೆಂದು ಪ್ರತಿಪಾದಿಸಿ ಮಹಾನುಭಾವ ಸ್ವಾಭಿಮಾನದ ಸಮುದ್ರ ಡಾ.ಬಿ.ಆರ್.ಅಂಬೇಡ್ಕರ
- ಪರಮೇಶ.ಡಿ.ವಿಳಸಪೂರೆ
ಯುವ ಬರಹಗಾರ
ಬೀದರ ಜಿಲ್ಲೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448241450 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ