ಟಂಕಾಗಳು
ಟಂಕಾ: ರಂಗವಲ್ಲಿ
ಮನೆಯ ಮುಂದೆ
ರಂಗವಲ್ಲಿಯನ್ನೀಕ್ಕಿ
ಕಣ್ವಡಲಿಗೆ
ಸುಮಧುರತೆಯಿಂದ
ಕಂಗೊಳಿಸುತಲಿದೇ.
ಟಂಕಾ:ಕವಿ
ಮನದಾಸೇಗೆ
ಕಲ್ಪನೆ ಮೂಡಿ ಬಂದ
ವಿಷಯವನ್ನು
ಮನಕಲಕುವಂತೆ
ತಾ ಗೀಚುತಲಿಹನು.
ಟಂಕಾ:ತಾಯಿ
ತಾಯಿ ನಾ ನಿನ್ನ
ಪೂಜಿಸುತಲಿಯೇನು
ನವ ಮಾಸದಿ
ತಾ ಕಷ್ಟಗಳನ್ನುಂಡು
ಗರ್ಭದಲ್ಲಿರಿಸಿದೆ.
ಟಂಕಾ:ಮಳೆ
ಬೋರ್ಗರೆಯುವ
ಮಳೆ ಹನಿಗಳಿಗೆ
ಕೈ ಒಡ್ಡಿ ನಾನು
ನೃತ್ಯದಾಗಸದಲ್ಲಿ
ನಾ ಹಿಗ್ಗುತಲಿಯೆನು
ಟಂಕಾ:ಸೌಂದರ್ಯ
ಒಡವೆಗಳೇ
ಹೆಣ್ಣಿಗೆ ಸೌಂದರ್ಯ
ಅಲಂಕಾರವೆ
ಆಕೆಗೆ ಯವ್ವನವು
ಇದೆಂದು ಮುಗಿಯದು .
✍✍ಕುಮಾರಿ. ರಂಜಿತಾ ಶೇತಸನದಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ