ಭಾನುವಾರ, ಜುಲೈ 4, 2021

ಬಂಧನವೆಂಬ ರೋಗ (ಕವಿತೆ) - ಶ್ರಿ ಮಂಜುನಾಥ್ ಡಿ ಕೆ

ಬಂಧನವೆಂಬ ರೋಗ

ಮನೆಯಲ್ಲೇ ಕೂತು ಕಿಡಿಕಾರಿದೆವ..?
ಎಡರು ತೊಡರಲಿ ಮನ:ಶಾಂತಿ ಕಳಕೊಂಡೆವ..?
ನಾವು ನಮ್ಮವರು ತಲೆಯೆತ್ತಿ ನಡೆಯದಂತಾಯಿತ..?
ಸಂತಸದ ದುಡಿಮೆಯಿಲ್ಲದಂತಾಯಿತ..?
ಒಳ್ಳೆ ವಿಚಾರಗಳು ಮನಸಿಗೆ ಹರಿದು ಬಂದವ..?
ಬದುಕು ಕೇಳುವ ನೂರು ಪ್ರಶ್ನೆಗಳ ಜೀವ 
ಉತ್ತರದಲ್ಲಿ ಸತ್ತು ಹೋಗುತ್ತದೆ
ಜೀವರಸವೇ ಬತ್ತಿಹೋಗುತ್ತದೆ.
ತುಡಿವ ಎದೆಮಿಡಿವ ಮನಗಳ
ಮಾನವ ಪ್ರೀತಿಗೆ ಅವಕಾಶವಿರಲಿಲ್ಲ
 ಜಾಗತೀಕದ ಮೇಲಾಟದಲ್ಲೆಲ್ಲ
ಆತಂಕಶಿಸ್ತೀಯ ಮೇಧಾವಿಗಳು ಕಲೆತು
 ಆಯೋಜಿಸಿದ ಯೋಜನೆಗಳ ಫಲ
ಸಮಾಜವ್ಯಾದಿ,ನೆಮ್ಮದಿ ಹಾಳುಮಾಡಿದೆ
 ಇಷ್ಟ ಕಷ್ಟಗಳನ್ನು ಹಂಚಿಕೊಳ್ಳದಂತಾಗಿದೆ.
ಬಾಲ್ಯದಲ್ಲಿ ಕಥೆ ಕೇಳಿದ್ರೆ ನಿದ್ದೆ ಬರ್ತ್ತಿತ್ತು
ಈಗ ನಮ್ಕತೆ ನೆನುಸ್ಕೋಂಡ್ರೆ ನಿದ್ದೆ ದೂರ ಓಡ್ತಿದೆ
ನಾವಿಂದು ನಾಗರೀಕ ಪ್ರಪಂಚದಲ್ಲಿ ಇದ್ದೂ ಇಲ್ಲದಂತಾಗುತ್ತಿದ್ದೀವ..?
ಬದುಕಿನ ಅತಂತ್ರ ಸಂತೆಯಲಿ...!
ಸಕಲ ಜೀವ ಸಂಕುಲಗಳಿಗೂ ಒಳಿತಾಗಲಿ
ಕನಸಿನೊಂದಿಗೆ ಕಟ್ಟಿಕೊಂಡಿದ್ದ ಬದುಕು
ನಿಜವಾದ ಗೆಲುವಾಗಲಿ...!
ಬಂಧನವೆಂಬ ರೋಗ  ತೊಲಗಲಿ..!
ಶಾಂತಿ ನೆಮ್ಮದಿಯ ಸಾಮ್ರಾಜ್ಯ ನಿರ್ಮಾಣವಾಗಲಿ...!
- ಮಂಜುನಾಥ.ಡಿ.ಕೆ.
ಎಂ.ಎ. ಬಿಇಡಿ.ಎಂಫಿಲ್.
ಕನ್ನಡ ಉಪನ್ಯಾಸಕರು.
ಬೆಂಗಳೂರು.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

2 ಕಾಮೆಂಟ್‌ಗಳು:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...