ಸೋಮವಾರ, ಜುಲೈ 12, 2021

ತಿಳಿಯಬೇಕು ಮಕ್ಕಳೆ (ಕವಿತೆ) - ಶ್ರೀ ಜಿ ಟಿ ಆರ್ ದುರ್ಗಾ.

ತಿಳಿಯಬೇಕು ಮಕ್ಕಳೆ

ಮಕ್ಕಳೆ ಕೇಳಿ ಹೆತ್ತವರ ನೋವೊಂದನ್ನು
ನಿಮ್ಮ ಸುಖಕ್ಕಾಗಿ ಕಷ್ಟಪಡುತ್ತಾರೆ ನಿತ್ಯವಿನ್ನು
ಅದನ್ನು ಯೋಚಿಸಬೇಕು ಮಕ್ಕಳೆ ನೀವಿನ್ನು
ಹೆತ್ತೋರ ಪಡುವ ಸಂಕಷ್ಟವನ್ನು

ಸಾಕು ಸಾಕಪ್ಪಾ ಎನ್ನಬೇಡಿ ಹೆತ್ತವರ
ಮಕ್ಕಳೆ ಬೇಡ ಎನ್ನ ಬಾರದು ನಿನ್ನವರ
ಕೂಲಿ ಮಾಡಿಯಾದ್ರು ಸಾಕುತ್ತಾರೆ
ಬಿಸಿಲು ಮಳೆ ಎನ್ನದೆ ದುಡಿಯುತ್ತಾರೆ

ತಂದೆತಾಯಿಯ ಸಂಕಟ ಹೇಗೆ ತಿಳಿಬೇಕು
ಬಿಸಿಲಲ್ಲಿ ಮಳೆಯಲ್ಲಿ ದುಡಿಯುತ್ತಿರಬೇಕು
ಯಾರಿಗೋಸ್ಕರ ಮಾಡುವರು ಅವರು
ನನ್ನ ಮಕ್ಕಳು ಉತ್ತಮರಾಗಬೇಕೆನ್ನುವರು

ಓದಿಗಾಗಿ ಲಕ್ಷಗಟ್ಟಲೆ ಹಣವನ್ನು ಕಟ್ಟುತ್ತಾರೆ
ತನ್ನ ಮಕ್ಕಳು ಸುಖವನ್ನು ಬಯಸುತ್ತಾರೆ
ತಿಳಿಯದ ಮಕ್ಕಳು ಮೂರ್ಖರಾದರೆ
ಹುಟ್ಟಿಸಿ ಬೆಳಸಿದ ಹೆತ್ತವರಿಗೆ ಜೀವನ ಕಣ್ಣೀರೆ

ಮಕ್ಕಳೆ ಕೇಳಿ ಗೌರವ ದೊಡ್ಡದು ನೀವು ತಿಳಿಬೇಕು
ಉತ್ತಪ ಶಿಕ್ಷಣ ಪಡಿಬೇಕು ಒಳ್ಳೆ ವ್ಯಕ್ತಿ ಆಗಬೇಕು
ಹೆಣ್ಣು ಗಂಡು ಅರ್ಥಮಾಡಿಕೊಳ್ಳಿ ಹೆತ್ತವರ ಕಷ್ಟ
ಜೀವನಬಲು ಕಷ್ಟ ಮಕ್ಕಳು ಬದಲಾಗುವುದೆ ಕಷ್ಟ

ಒಳ್ಳೆಯದೆಂದು ಮಾಡುತ್ತಾರೆ ಹೆತ್ತವರು
ಮಕ್ಕಳಿಗಾಗಿ ದುಡಿಯುತ್ತಾರೆ ಹಗಲಿರುಳು
ಅನವಶ್ಯಕವಾಗಿ ವ್ಯೆರ್ಥ ಮಾಡಬೇಡಿ ಜೀವನ 
ಹೇಳಿಕೊಟ್ಟ ಮಾತು ಕಟ್ಟಿ ಕೊಟ್ಟ ಬುತ್ತಿ ಸ್ಥಿರವಲ್ಲ

- ಶ್ರೀ ಜಿ ಟಿ ಆರ್ ದುರ್ಗ
ಬಂಗಾರಪೇಟೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...