ಮಂಗಳವಾರ, ಜುಲೈ 13, 2021

ಕಾಯಕ ಯೋಗಿ (ಕವಿತೆ) - ಜಯರಾಮು ಎಂ.

ಕಾಯಕ ಯೋಗಿ


ವಿಶ್ವವ ಬೆಳಗುವ ಜ್ಯೋತಿ
ಹಸಿವ ನೀಗುವ ದಿವ್ಯ ಜ್ಯೋತಿ
ಜಗದ ಉಸಿರಿಗೆ ಬಲದ ಆಹಾರವ ನೀನು ಭೂಮಾತೆಯ ಪುತ್ರನು ನೀನು

ಹಗಲಿರುಳೆನ್ನದೆ ದುಡಿವ ನೀನು
ಚಳಿ ಗಾಳಿಗೆ ಕರಗದ ಕಲಿ ನೀನು
ಬೆವರ ಹರಿಸಿ ಜಗದ ಉಸಿರ
ಉಳಿಸಿದ ಮಹಾತ್ಮನು ನೀನು

ಕೈಯಲಿ ನೇಗಿಲು ಹಿಡಿದು
ಹೆಗಲಲಿ ನೊಗವ ಹೊತ್ತು
ಹೊಲದೆಡೆಗೆ ಹೊರಟಿಹ
ಶಕ್ತಿದಾತನು ನೀನು

ಅರೆ ಬೆತ್ತಲೆ ಕಾಯಕ ನೀನು
ವ್ಯವಸಾಯದ ಮಿತ್ರನು ನೀನು
ಮಳೆ ಬಿಸಿಲಿಗೆ ಅಂಜದವ ನೀನು
ಚಳಿಗೆಂದು ಹಿಂಜರಿಯದವ ನೀನು

ಸುಖ ನೆಮ್ಮದಿ ಬಯಸಲಿಲ್ಲ
ಆಸೆ ಆಕಾಂಕ್ಷೆಗಳು ತೋರಲಿಲ್ಲ
ದಿನದ ಕಾಯಕ ಮುಗಿಸಿ
ಜಗಕೆಲ್ಲ ಅನ್ನವ ನೀಡುವವನು

ಹುಲ್ಲು ಕಡ್ಡಿ ಕಸವ ತೆಗೆದು
ಬೀಜವ ಬಿತ್ತಿ ಗೊಬ್ಬರವ ಹಾಕಿ
ಮುಗಿಲ ಕಡೆ ಮುಖವ ಮಾಡಿ
ಮಳೆಗಾಗಿ ಪ್ರಾರ್ಥಿಸುವ ಅನ್ನದಾತನು 

ಬಂಜರು ಭೂಮಿಯನು ಹಸಿರಗೊಳಿಸಿ
ಹಸಿದ ಹೊಟ್ಟೆಗೆ ಅನ್ನವ ನೀಡಿ
ತನ್ನ ಹಸಿವನೆ ಮರೆಯುವ
ಶಕ್ತಿ ಕಾಯಕನು ನೀನು 

ರವಿಯ ಜೊತೆ ಹೊರ ಬಂದೆ
ಭೂ ತಾಯಿಯ ನಗಿಸುತ ಬಂದೆ
ನಿನ್ನ ಪ್ರಾಣವ ಪನವಿಟ್ಟೆ
ಜಗಕೆ ಅನ್ನವ ನಿಟ್ಟೆ

ಮುಂಗಾರು ಮಳೆಗೆ  ಬಂಗಾರದ ಬೆಳೆ
ಅನ್ನದಾತನ ಮುಖ ವಸುಂದರೆಯೆಡೆಗೆ
ಬಸಿದ ಬೆವರು ತುಂಬಿದ ಕೆಸರೆಂದೆ ನಿಂತೆ ಬದುಕಿನ ಬವಣೆಯಲಿ  

ಜಗದ ಹಸಿರು ರೈತನ ಉಸಿರು
ಪ್ರಕೃತಿಯ ನಗುವು ಜೀವದ ಜಲವು
ಸೃಷ್ಟಿಯ ಸುಳಿವು ಹುಸಿರಿನ ಹೊಳವು
ಅನ್ನದಾತನ ಕಾಯಕವು

ದೇಶದ ಪಾಲಿಗೆ ಸೇವಕನಿವನು
ಕಲ್ಪನೆಗೆ ಮೀರಿದ ಕಾಯಕನಿವನು
ಕವಿಗಳಿಗೆ ಒಲುಮೆ ನೀಡಿದ ನಾಯಕ
ಅನ್ನದಾತನ ದೈವ ದಾಯಕ


                            -  ಜಯರಾಮು ಎಂ
                          ಯುವ ಬರಹಗಾರರು
                               ಮಲ್ಲೇನಹಳ್ಳಿ

3 ಕಾಮೆಂಟ್‌ಗಳು:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...