ಭಾನುವಾರ, ಜುಲೈ 11, 2021

ಗಡಿನಾಡು ಬೀದರ್ ಜಿಲ್ಲೆಯಲ್ಲಿ ದಾಸೋಹದ ರೂಪದಲ್ಲಿ ಆಹಾರ ವಿತರಣೆ (ಕೃತಜ್ಞತಾ ಲೇಖನ) - ಶ್ರೀಮತಿ ಸ್ವರೂಪ ಎಸ್ ನಾಗೂರ್.

ಗಡಿನಾಡು ಬೀದರ್ ಜಿಲ್ಲೆಯಲ್ಲಿ ದಾಸೋಹದ ರೂಪದಲ್ಲಿ ಆಹಾರ ವಿತರಣೆ
    
(ದಾಸೋಹ ಎಂಬ ಹೆಸರು ಮತ್ತೊಂದು ರೂಪ ಪಡೆಯಿತು ಈಕರೋನದ ಸಂದರ್ಭದಲ್ಲಿ) 
      12ನೇ ಶತಮಾನದಲ್ಲಿ ನಮ್ಮ ಶರಣರು ಅನುಭವ ಮಂಟಪ ದಾಸೋಹದ ಮುಖಾಂತರ ಅನೇಕ ಜನರಿಗೆ ದಾಸೋಹದ ಜೊತೆಗೆ ಅನುಭವದ ಭಾವವನ್ನು ಉಣಬಡಿಸಿದರು ನಮ್ಮ ಶರಣರು.ಅಲ್ಲಿ ಯಾವುದೇ ರೀತಿಯ ಜಾತಿಯ ತಾರತಮ್ಯವಿಲ್ಲದೆ, ಮೇಲು-ಕೀಳು ಇಲ್ಲದೆ, ಹೆಣ್ಣು-ಗಂಡು, ಎಂಬ ಭೇದಭಾವವಿಲ್ಲದೆ ಎಲ್ಲರೂ ಸರಿಸಮಾನರು ಎಲ್ಲರಿಗೂ ಸ್ವತಂತ್ರವಾದಂತಹ ಅವಕಾಶವನ್ನು ಕಲ್ಪಿಸಿಕೊಡಲಾಗಿತ್ತು.
    ಹೀಗೆ ಅಂತ ಶರಣರು ಮೆಟ್ಟಿದ ನಾಡು ನಮ್ಮ ನಾಡು, ನಮ್ಮ ಗಡಿನಾಡು, ಈ ಗಡಿನಾಡಿನಲ್ಲಿ ಜನಿಸಿದ ಪ್ರತಿಯೊಬ್ಬ ಮನುಷ್ಯನಲ್ಲಿ ಪ್ರೀತಿ ,ತ್ಯಾಗ, ಕರುಣೆ, ನೀತಿ, ನಿಸ್ವಾರ್ಥ ಮನೋಭಾವನೆ, ಹುಟ್ಟಿನಿಂದಲೇ ಹುಟ್ಟಿಕೊಂಡು ಬಂದಿದೆ. ಎಂತಹ ಪರಿಸ್ಥಿತಿ ಬಂದರೂ ದೃತಿಗೆಡದೆ ಎದುರಿಸುವಂತಹ ಮನೋಭಾವ ನಮ್ಮದಾಗಿದೆ. ಕರ್ನಾಟಕದ ಕಿರೀಟ ಎಂದೆನಿಸಿಕೊಂಡ ನಮ್ಮ ಬೀದರ್ ಜಿಲ್ಲೆ ಅನೇಕ ಐತಿಹಾಸಿಕ ,ಪೌರಾಣಿಕ ಸ್ಥಳಕ್ಕೆ ಪ್ರಸಿದ್ಧಿಯನ್ನು ,ಬಿದರಿ ಕಲೆ,ಎಂಬಂತಹ ಕಲಾಕೃತಿಯಲ್ಲಿ ರಾಷ್ಟ್ರ ಅಂತರಾಷ್ಟ್ರೀಯಲ್ಲಿ ಮಟ್ಟದಲ್ಲಿ ಪ್ರಖ್ಯಾತಿಯನ್ನು ಪಡೆದಿದೆ.
       ಇಂಥಹ ಒಂದು ನಗರದ ಮೇಲೆ ಕರೋನಾ ಎಂಬ ಮಹಾಮಾರಿಯು ಭಯಂಕರ ರೂಪದಿಂದ ರಾರಾಜಿಸುತ್ತಿದೆ. ಇದು ಅನೇಕ ಜನರ ಜೊತೆ ಚೆಲ್ಲಾಟ ನಡೆಸುತ್ತಿದೆ. ರಾಜ್ಯದಲ್ಲಿಯೇ ಕರೋನಾ ಸೋಂಕಿತ ಪ್ರಮಾಣದಲ್ಲಿ ಹೆಚ್ಚಳ ಪ್ರಥಮ ಸ್ಥಾನ ಪಡೆದಿತ್ತು. ಹೀಗೊಂದು ಮಹಾಮಾರಿಗೆ ಅನೇಕ ಜನರು ತುತ್ತಾಗಿ ತಮ್ಮ ಪ್ರಾಣಪಕ್ಷಿಯನ್ನು ಕಳೆದುಕೊಂಡಿದ್ದಾರೆ. ಇನ್ನೂ ಅನೇಕ ಜನರು ಸೋಂಕಿನಿಂದ ಬಳಲುತ್ತಿದ್ದಾರೆ. ಇಂತಹ ಒಂದು ಸಂದರ್ಭದಲ್ಲಿ ನಮ್ಮ ಸರಕಾರವು ಕೂಡ ಅನೇಕ ರೀತಿಯಲ್ಲಿ ಸಹಾಯ  ಮಾಡುತ್ತಿದೆ. ಆದರೆ ನಾವು ಎಲ್ಲವನ್ನು ಸರ್ಕಾರದಮೇಲೆ ಬಿಟ್ಟಿದ್ದರೆ ಹೇಗೆ ಸರಕಾರದ ಜೊತೆಗೆ ನಮ್ಮದು ಕೆಲವು ಕರ್ತವ್ಯಗಳನ್ನುಈ ಒಂದು ಸಂದರ್ಭದಲ್ಲಿ ತೋರಿಸಿ ಕೊಡುವಲ್ಲಿ ಸಹಾಯವಾಗಿದೆ ಹೀಗೆಸಂಕಷ್ಟದ ಸಮಯದಲ್ಲಿ ಸಹಾಯ ಮಾಡುವುದು ಮನುಷ್ಯನ ಮಾನವೀಯತೆಯ ಲಕ್ಷಣಗಳಲ್ಲಿ ಒಂದು ಎನ್ನಬಹುದು
       ಮಾನವೀಯತೆಯನ್ನು ತೋರಿಸುವಲ್ಲಿ ನಮ್ಮಲ್ಲಿ ಅನೇಕ ಜನರು ಮುಂದಾಗಿದ್ದಾರೆ.
ಕಷ್ಟವೆಂಬುದು ಯಾರಿಗೂ ತಪ್ಪಿದ್ದಲ್ಲ. ಅದು ಶ್ರೀಮಂತರಿಗೂ ಕಾಡುತ್ತದೆ ಮತ್ತು ಬಡವರಲ್ಲಿ ಕಾಡುತ್ತದೆ ಆದರೆ ನಾವು ವ್ಯತ್ಯಾಸವನ್ನು ನೋಡಬಹುದು ಶ್ರೀಮಂತರು ತಮ್ಮ ಕಷ್ಟವನ್ನು ದುಡ್ಡಿನ ಹೊದಿಕೆಯಿಂದ ಮುಚ್ಚಿಸಬಹುದು. ಆದರೆ ಬಡವರು ಹಸಿವಿನ ಹೊಟ್ಟೆಯನ್ನು ಮುಚ್ಚಿಸಲು ಸಾಧ್ಯವಿಲ್ಲ. ಅವರಿಗೆ ಹಲವಾರು ರೀತಿಯ ಕಷ್ಟಗಳು ಮೊದಲೇ ಕೆಲಸವಿಲ್ಲ, ಕೆಲಸವಿಲ್ಲ ವೆಂದರೆ ದುಡ್ಡಿಲ್ಲ, ದುಡ್ಡಿಲ್ಲ ಅಂದರೆ ಊಟವಿಲ್ಲ, ಅಂತಹ ಒಂದು ಸಂದರ್ಭದಲ್ಲಿ ಈ ಮಹಾಮಾರಿಯನ್ನು ಕರೋನಾ ಕೆಕೆ ಆಡುತ್ತಿದೆ. ಹೀಗೆ ರೋಗಿಗಳು ಆಸ್ಪತ್ರೆಯಲ್ಲಿ ಒದ್ದಾಡಿದರು, ಅವರ ಮನೆಯವರು ಸಂಬಂಧಿಕರು ಆಸ್ಪತ್ರೆಯವರಿಗೆ ಹೊರಗೆ ನರಳಾಡುತ್ತಿರುವ, ಅಂತಹ ಸಂದರ್ಭ ಅಂಥವರ ಕಣ್ಣೀರನ್ನು ಒರೆಸಲು ಮುಂತಾದಂತಹ ನಮ್ಮ ದಾಸೋಹದ ಎಂಬುದರ ಮತ್ತೊಂದು ರೂಪ ಆಹಾರ ವಿತರಣೆಯ ಮೂಲಕ ಅವರ ನೋವನ್ನು ಸ್ಪಂದಿಸಲು ಸಹಾಯಕಾರಿಯಾಗಿದೆ. ಈ ಒಂದು ಕಾರ್ಯದಲ್ಲಿ ತೊಡಗಿದಂತೆ ಎಲ್ಲಾ ನನ್ನ ಅಣ್ಣ ತಮ್ಮಂದಿರು, ಅಕ್ಕತಂಗಿಯರಿಗೆ ನನ್ನ ಸಿರ್ ಅಷ್ಟಾಂಗ ನಮಸ್ಕಾರ ತಿಳಿಸುತ್ತಾ. ಅವರ ಈ ಉದಾರತೆ, ತ್ಯಾಗ,ಕರುಣೆ ,ಪ್ರೀತಿ ಮತ್ತೊಬ್ಬರ ಕಷ್ಟಕ್ಕೆ ಹೆಗಲನ್ನು ಕೊಟ್ಟಂತಹ  ಈ ಎಲ್ಲಾ ಕರೋನಾ ವಾರಿಯರ್ಸ್ ಗೆ ನನ್ನ ಹೃದಯಪೂರ್ವಕವಾದ ಧನ್ಯವಾದಗಳನ್ನು ಸಲ್ಲಿಸುತ್ತೇನೆ. 
बूंद बूंद मिलने से 
बन जाता है सागर,
सूट सूट मिलने से 
बन जाता है चादर,
ಎಂಬ ನಾಣ್ಣುಡಿಯಂತೆ ನಮ್ಮ ಈ ಒಂದು ಸಂಘಟಕರು ಮನೆಮನೆಗೆ ಫೋನ್ ಮಾಡಿ ನಿಮಗೆ ಕೈಲಾದಷ್ಟು ಸಹಾಯ ಮಾಡಿ ಎಂದು ಕೇಳಿಕೊಂಡುರು ಹೀಗೆ ಅವರ ಒಂದು ಕರೆಗೆ ಓಗೊಟ್ಟು ಅನೇಕ ಓಣಿಗಳಿಂದ, (ಗಲ್ಲಿ)ಅನೇಕ ಮಾತೆಯರು ತಮ್ಮ ಕೈಲಾದಷ್ಟು ರೊಟ್ಟಿ, ಚಪಾತಿ ,ಅನ್ನ ,ಸಾರು, ಹಣ್ಣು, ಬಿಸ್ಕೆಟ್, ಹೀಗೆ ಹಲವು ರೀತಿಯಲ್ಲಿ ಆಹಾರದ ಪದಾರ್ಥಗಳನ್ನು ಸಂಗ್ರಹಿಸಿ ಅದನ್ನು ಪೇಪರಗಳಲ್ಲಿ ರೋಲ್ ಮಾಡಿ. ಆಸ್ಪತ್ರೆಯ ಹೊರಗಡೆ ಊಟವಿಲ್ಲದೆ ಅಲೆದಾಡುತ್ತಿರುವಂತೆ ಜನರಿಗೆ, ಲಂಡನ್ ಸಮಯದಲ್ಲಿ ಕೆಲಸವಿಲ್ಲದೆ ಹಸಿವಿನಿಂದ ನರಳುತ್ತಿರುವ ಕೂಲಿಕಾರ್ಮಿಕರಿಗೆ ದಾಸೋಹದ ಮತ್ತೊಂದು ರೂಪದಲ್ಲಿ ಆಹಾರವನ್ನು ವಿತರಣೆ ಮಾಡಲಾಯಿತು. ಈ ಒಂದು ಕಾರ್ಯದಲ್ಲಿ ಭಾಗಿಯ ನಾನು ಕೂಡ ಚಿಕ್ಕದಾಗಿ ಅಳಿಲು ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಈ ಒಂದು ಸತ್ಕಾರ್ಯದಲ್ಲಿ ಪಾಲ್ಗೊಂಡ ಅಂತಹ ಅನೇಕ ನೂರಾರು ಜನರು ಹೆಸರುಗಳನ್ನು ನಾವು ನೋಡಬಹುದು. ನನ್ನ ಕಣ್ಣಿಗೆ ಬಿದ್ದಂತಹ ಹೆಸರುಗಳಲ್ಲಿ ರಾಮಕೃಷ್ಣ ಬಾಲೆ, ರಾಮಲಿಂಗ ವಿದ್ಯಾ ದಂಪತಿ, ಸಚ್ಚಿದಾನಂದ ಚಿದ್ರಿ , ವಿರುಪಾಕ್ಷ ಗಾದಿಗಿ, ಶ್ರೀಮಂತ ಸಪಾಟೆ. ಅರುಣ್ ಅಣ್ಣಾ, ಅನೇಕ ನವ ಯುವಕ ಗುಂಪುಗಳು, ಜೊತೆಗೆ ಸಪ್ನಾ ಗ್ರೂಪ ಕೂಡ ಹಲವಾರು ರೀತಿಯಿಂದ ಸಹಾಯ ಮಾಡಿದ್ದಾರೆ  
  ಹೀಗೆ ಇಂಥ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಸಹಾಯ ಮಾಡಿದ ಎಲ್ಲರಿಗೂ
ವೈದ್ಯರು ದಾದಿಯರು ಪೊಲೀಸರು ಪೌರಕಾರ್ಮಿಕರು ಹೀಗೆಲ್ಲಾ ಕರೋನ ವಾರಿಯರ್ಸ
ನನ್ನ ಅನಂತ ಕೋಟಿ ನಮಸ್ಕಾರಗಳನ್ನು ತಿಳಿಸುತ್ತೇನೆ. 
      
       
   ಸ್ವರೂಪ,ಎಸ್ ,ನಾಗೂರ್.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...