ಆಶಾಡ ಮಾಸದ ವೈಶಿಷ್ಟ್ಯತೆ
ಆಷಾಢ ಮಾಸವೆಂದರೆ ಶೂನ್ಯ ಮಾಸವು
ಆದರೆ ರೈತರಿಗಿದುವೆ ಸಂಭ್ರಮ ಮಾಸವು
ಈ ಮಾಸವು ಶುಭಕಾರ್ಯಗಳಿಗೆ ನಿಷಿದ್ಧವು
ಆಧ್ಯಾತ್ಮ ಸಾಧಕರಿಗೆ ಇದುವೆ ಪ್ರಶಸ್ತ ಕಾಲವು
ಶಿವನು ಪಾರ್ವತಿಗೆ ಬೋಧಿಸಿದ ಅಮರತ್ವ ರಹಸ್ಯವಾ
ಹಿಡಿಯುವ ಸೋಮವಾರ, ಚಾತುರ್ಮಾಸ್ಯ ವ್ರತವಾ
ಅಮೃತ ಲಕ್ಷ್ಮಿಯ ಪೂಜೆಯ ಮಾಡುವ ಸಮಯ
ತಾಯಿಗಂಗೆ ಉತ್ತರದಿಂದ ದಕ್ಷಿಣಕ್ಕೆ ಇಳಿದ ಸಮಯ
ಚಾಮುಂಡಿ ತಾಯಿ ಜನ್ಮ ತಳೆದ ಮಾಸ
ಹಿಮಲಿಂಗ ದರ್ಶನ ಭಾಗ್ಯ ನೀಡುವ ಮಾಸ
ಸೋಮವಾರ ವ್ರತ ಹಿಡಿಯುವ ಮಾಸ
ಜಪತಪಗಳಿಂದ ದೇವನ ಸ್ತುತಿಸುವ ಮಾಸ
ಅಕ್ಕತಂಗಿಯರು ಅಣ್ಣನ ದಾರಿ ಕಾಯುವರು
ನಾಗರ ಪಂಚಮಿಗೆ ಕರೆಯಲು ಬರುವನೆಂದು
ನವವಧುವರರ ಮಿಲನಕೆ ಸಮಯ ಸೂಕ್ತವಲ್ಲ
ದೇವತೆಗಳು ಶಯಿನಿಸಿರುವ ಸಂತಾನಕೆ ದೈವಬಲವಿಲ್ಲ
- ಆಶಾ.ಎಲ್.ಎಸ್, ಶಿವಮೊಗ್ಗ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ