ಮುಂಜಾನೆ ಕಾಮಣ್ಣ
ಮುಂಜಾನೆ ಬೆಳಕಲ್ಲಿ ಹೊಂಗಿರಣ ಚೆಲ್ಲುತ್ತಾ
ಮುಗಿಲಾಗೆ ಬಳಿದಾವೆ ಏಳು ಬಣ್ಣ
ರವಿತೇಜ ಬರುವಾನು ಶುಭವನ್ನು ಕೋರುತ್ತಾ
ಪಡುವಣದಿ ಬೆಳಕನ್ನು ಚಿಮ್ಯಾನೆ
ಬಿಳಿ ಮೋಡ ಮಡಿಲಲ್ಲಿ ಹೊಂಗನಸು ಬೀರುತ್ತಾ
ಚಂದಿರನು ಬಳಿಬಂದು ನಿಂತಾನೆ
ತೇರನೇರುತ ಬಂದು ಬಾನ ರವಿತೇಜ
ಶೃಂಗಾರದ ಬಾಗಿಲೊಳು ಬರುತ್ತಾನೆ
ಮುಂಗಾರು ಮಳೆ ಬಂದು ಅಂಗಳವು ತಂಪಾಗಿ
ಗಿಡಮರಗಳು ಚಾಮರವ ಬೀಸ್ಯಾವೆ
ಇದು ಏಕೆ ಆಶ್ಚರ್ಯ ಏಳು ಬೆಳಕಿನ ಕಿರಣ
ಅದ್ದೂರಿ ಸ್ವಾಗತಕ್ಕೆ ಭಾಸ್ಕರನು ತಲೆ ಬಾಗ್ಯಾನ
ಚೆರಿತ್ರೆಯಲಿ ಕಂಡಿಲ್ಲ ಈ ಸೊಬಗು ಚಿತ್ತಾರ
ಏಳು ಬಣ್ಣಗಳ ಹಾರ ರವಿಗೆ ಹಾಕ್ಯಾರ
ಅಬ್ಬಬ್ಬಾ ಏನ್ ಚೆಲುವು ಮುಂಜಾನೆ ಹೊಳಪು
ಬಿಳಿ ಮೋಡದೊಳಗರಳ್ಯಾವು ಶ್ವೇತ ಹೂವು
ರವಿ ಬಂದು ನಗುತ್ತಾನೆ ಭೂತಾಯಿ ಕರಿತಾಳೆ
ಬಂದೋಗು ಧರಣಿಗೆ ಬಿಳಿ ಮುತ್ತಿನ ಮಳೆ
ಬಂಗಾರದ ಹೂ ಬಾಳೆ ಅರಳಾಲಿ ಬಾನಲ್ಲಿ
ಹುಟ್ಯಾನು ಚಂದ್ರಮನ ಏಳು ಬಣ್ಣದಲ್ಲಿ
ಬಂದಾರೆ ತೊಡಿಸುವೆ ಏಳು ಬಣ್ಣದ ಒಡವೆ
ಸಕಲ ವೈಭವದಲ್ಲಿ ಚಿಲಿಪಿಲಿ ಹಿಂಪಲ್ಲಿ
ಹಕ್ಕಿಗಳ ಸ್ವರದಲ್ಲಿ ಶೃತಿಯ ಬೆರೆಸಿದ ರವಿಯ
ಬಣ್ಣಿಸಲಾಗದು ಭುವಿಯ ವರ್ಣನೆಯ
- ಶ್ರೀ ಜಿ ಟಿ ಆರ್ ದುರ್ಗ
ಜಿ ಹೆಚ್ ಎಲ್
ಬಂಗಾರಪೇಟೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ