ಶಿಕ್ಷಣ
ಸುಳ್ಳು ಕಪಟ ಮೋಸ ನಂಬಿದವನೆ ಜಾಣ
ಅಂತು ಜೀವನ ಮೌಲ್ಯವ ತಿಳಿಸಿದ ಶಿಕ್ಷಣ
ನಕ್ಕಿದೆ ಸೊಕ್ಕಿಲೆ ತಿರಿಸದೆ ಹಿರಿಯರ ಋಣ
ನೀಡಿದೆ ನ್ಯಾಯ ನೀತಿಯ ಆಚಾರಕೆ ಪಾಷಣ//
ಪಾಂಡಿತ್ಯವು ಮಾಡಿತು ನನ್ನ ಒಂಟಯಾಗಿ
ಆದರು ಖುಷಿಯಿಂದ ನಾಡು ಸುತ್ತಾಡಿ
ಕಳೆದೆ ನಾ ಈ ಜೀವನ ಹಾಯಾಗಿ
ಮೋಹ ದಾಹದ ಮತ್ತಲಿ ತೆಲಾಡಿ //
ಕಲಿತ ಜ್ಞಾನವು ಅತೀ ಆಗಿ
ಅಹಂನಿಂದ ನಂಟು ದೂರ ಮಾಡಿ
ನೊಂದು ಒದ್ದಾಡಿದೆ ಜೀವನ ಹಾಳಾಗಿ
ಮರೆತು ಸಂಸ್ಕಾರದ ನಡೆನುಡಿ//
ಕೊನೆಗೆ ನೆಮ್ಮದಿ ಇಲ್ಲದೆ ಸೊರಗಿ ಕರಗಿ
ಅತ್ತುಬಿಟ್ಟೇ ನಾ ಮನಸ್ಸಿಗೆ ನೋವಾಗಿ
ಕಾರಣ ಅಕ್ಷರ ಜ್ಞಾನವಿಲ್ಲದ ನೇಗಿಲ ಯೋಗಿ
ವಿನಯದಿ ಮೆರೆದ ನಾಡಿಗೆ ಅನ್ನದಾತನಾಗಿ//
ಅರಿತೆ ಅರಳುವದು ಬದುಕು ಹೂವಾಗಿ
ಬದುಕಿದರೆ ಮಾನವ ಸಂಘ ಜೀವಿಯಾಗಿ
ಆ ರೈತ ಕಲಿತವರಿಗೆ ಪ್ರೇರಣೆ ಯಾಗಿ
ಉಳಿದ ಸತ್ಯ ನ್ಯಾಯ ಧರ್ಮದ ಸಂಕೇತವಾಗಿ//
✍️ ಅನ್ನಪೂರ್ಣ.ಡಿ.ಸಿಂದೋಗಿ. ಸಾ!ಭೈರಾಪೂರ,ತಾ!ಜಿ!!ಕೊಪ್ಪಳ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ