ಸೋಮವಾರ, ಆಗಸ್ಟ್ 2, 2021

ದೇವರ ಅಸ್ತಿತ್ವದ ನಂಬಿಕೆ (ಲೇಖನ) - ಹಂಸರಾಗ ಶೆಟ್ಟಿ.

 ದೇವರ ಅಸ್ತಿತ್ವದ ನಂಬಿಕೆ....

  ಮಾನವ ಜನಾಂಗದ ನಂಬಿಕೆಗಳು ಮನುಷ್ಯನ ಬದುಕಿಗೆ ಪೂರಕವಾಗಿದೆ.ಅದು ದೇವರೇ ಆಗಿರಬಹುದು ಅಥವಾ ವೈಜ್ಞಾನಿಕ ಚಿಂತನೆಗಳೇ ಆಗಿರಬಹುದು.ತನ್ನ ನಂಬಿಕೆಗಳ  ಆಧಾರದ ಮೇಲೆ ಅವನ ಬದುಕು ನಿಂತಿದೆ ಎಂದರೂ ತಪ್ಪಾಗಲಾರದು.
    ಈ ಜಗತ್ತು ಅದೊಂದು ಅದ್ಭುತ ಶಕ್ತಿಯ ಕೈ ಚಳಕದಿಂದ ಚಲಿಸುತ್ತಿದೆ. ಭೂಮಿಯ ಚಲನೆ, ಪ್ರಕೃತಿಯ ಆಗುಹೋಗುಗಳು , ನಿಸರ್ಗ ಸೃಷ್ಟಿಯ ಚಿತ್ತಾರ ನಮ್ಮನ್ನು ಬೆರಗುಗೊಳಿಸುತ್ತಾ ಇದರ ಹಿಂದೆ ಯಾವುದೋ ಅಗೋಚರ ಶಕ್ತಿಯ ಇರುವಿಕೆಯನ್ನು ತಿಳಿಯಬಹುದು.ಇದನ್ನೇ ಜನರು ದೇವರ ರೂಪದಲ್ಲಿ ಪೂಜಿಸಿದರು.ಅದಕ್ಕೆ ತಮ್ಮದೇ ನಂಬಿಕೆಗಳ ಪ್ರಕಾರ ಹಲವು ಹೆಸರುಗಳನ್ನು ಇಡಲು ಪ್ರಾರಂಭಿಸಿದರು.ಅದೇ ದೇವರ ಸೃಷ್ಟಿಗೆ ಮುನ್ನುಡಿ ಬರೆದದಂತಾಯಿತು.ಪ್ರಸ್ತುತ ಕಾಲಘಟ್ಟದಲ್ಲಿ ದೇವರ ಅಸ್ತಿತ್ವ ಮತ, ಧರ್ಮ ಭಾಷೆ ಸಂಸ್ಕೃತಿಯ ಪ್ರತೀಕ ವಾಗಿದೆ ಎಂಬುದು ವಿಷಾದದ ಸಂಗತಿ.
   ಆಧುನಿಕ ಶತಮಾನದ ಹೊಸ ಹೊಸ ರೀತಿಯ ಬೆಳವಣಿಗೆ ಮತ್ತು ಅನ್ವೇಷಣಾ ಮನೋಭಾವವೇ ವೈಜ್ಞಾನಿಕ ಚಿಂತನೆಗಳ ಬುನಾದಿ.ಹೊಸ ಆವಿಷ್ಕಾರಗಳ ಮೂಲಕ ದೇವರ ಬಗೆಗಿನ ನಂಬಿಕೆ ಎಂದರೆ ಅದು ಮೂಢನಂಬಿಕೆ ಎಂದು ಪ್ರತಿಪಾದಿಸುವಂತಾಗಿದೆ.ವಿಜ್ಞಾನದ ಬೆಳವಣಿಗೆ ಪ್ರಭಾವದಿಂದ ತಾಂತ್ರಿಕ, ವೈಜ್ಞಾನಿಕ ಅಭಿವೃದ್ಧಿ ತೀವ್ರ ಗತಿಯಲ್ಲಿ ಸಾಗಿದರೂ ಕೂಡಾ ದೇವರ ಮಹತ್ವ ಕಡಿಮೆಯಾಗಿಲ್ಲ ಎಂದೇ ಹೇಳಬಹುದು. ಮನುಷ್ಯನ ಜೀವನ ವ್ಯವಸ್ಥೆ ಯಲ್ಲಿ ಒಂದು ಸಣ್ಣ ಹುಲ್ಲು ಕಡ್ಡಿಯ ಚಲನೆಗೂ ದೇವರ ಅಸ್ತಿತ್ವ ವನ್ನು ನೆನಪಿಸುವ ನಮಗೆ ದೇವರು ನಂಬಿಕೆ ಗೆ ಅರ್ಹ ಎಂಬುದು ನನ್ನ ಅಭಿಪ್ರಾಯವಾಗಿದೆ.  ವೈಜ್ಞಾನಿಕ ಬೆಳವಣಿಗೆ ಸಮಾಜಕ್ಕೆ ಪೂರಕವಾಗಿ ಪರಿಣಮಿಸಿದರೂ ಯುಧ್ಧ , ಹಾಗೂ ಇತರ ಸಂದರ್ಭಗಳಲ್ಲಿ ದೇಶದೇಶಗಳನ್ನು ಸಂಪೂರ್ಣ ವಾಗಿ ನಾಶಮಾಡುವ ಸಾಮರ್ಥ್ಯ  ವಿಜ್ಞಾನಕ್ಕೆ ಇದೆ.ಹಾಗೆಯೇ ಗಣಕಯಂತ್ರ , ಉಪಗ್ರಹ ಉಡಾವಣೆ,ಮಂಗಳಯಾನ, ಅಂತರಿಕ್ಷ ಯಾತ್ರೆ ಇವುಗಳೆಲ್ಲ ವೈಜ್ಞಾನಿಕ ಕ್ರಾಂತಿ ಎಂದರೂ ಕೂಡಾ ದೇವರ ರೂಪದಲ್ಲಿ ಬದುಕಿ ಮಾನವೀಯ ಮೌಲ್ಯ ತಿಳಿಸಿದ ಕೃಷ್ಣ,ಬುಧ್ಧ, ಯೇಸು, ಮಹಮದ್ ಪೈಗಂಬರ್ , ಗುರುನಾನಕ್ ರವರ ಚಿಂತನೆಗಳು ಸಮಾಜದ ಉನ್ನತಿಗೆ ಕಾರಣೀಭೂತವಾಗಿದೆ ಎಂದರೂ ತಪ್ಪಾಗಲಾರದು.ಹೀಗಾಗಿ ದೇವರು ನಂಬಿಕೆಗೆ ಅರ್ಹ ಅಂತೆಯೇ ವೈಜ್ಞಾನಿಕ ಚಿಂತನೆಗಳು ಕೂಡಾ ದೇಶದ ಅಭಿವೃದ್ಧಿಗೆ ಅಗತ್ಯ ಹಾಗೂ ಅನಿವಾರ್ಯ....
- ಹಂಸರಾಗ ಶೆಟ್ಟಿ ಶಿಕ್ಷಕಿ ಗೋಳಿತೊಟ್ಟು ಪುತ್ತೂರು ದ.ಕ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...