ಭಾವೈಕ್ಯದ ಬೆಸುಗೆ
ಬಾ ಇಲ್ಲಿ ಕಮ್ಮಟಕೆ ಕವಿ ಕಾವ್ಯ ಬರೆಯುವನು
ಸೃಜನದಿಂ ಸಹೃದಯ ಕೋಟೆಯಲಿ
ರಕ್ಷಣೆಯ ರೇಖೆಯಲಿ ಬಂಧನವ ಬೆಸೆಯುವನು ಹಾಡುವನು ಮೈದುಂಬಿ ಹಾರೈಸುತ
ಮತ್ತೆ ಶ್ರಾವಣ ಬಂತು ತಂತು ಪ್ರೀತಿಯ ಸಂಚು
ಕೋಗಿಲೆಯ ಗಾನದಿಂ ಹೊರಸುಸುತ
ಗರಿಗರಿಯ ನವಿಲುಗರಿ ಹಾರೈಕೆ ಉಡುಗೊರೆಯು
ಕಲ್ಲುಸಕ್ಕರೆ ಸಿಹಿಯ ಮೆಲ ಮೆಲ್ಲುತ
ಅನುಭಾವಿಗಳು ಇಲ್ಲಿ ಅನುಭವದ ರಸ ನೀಡಿ
ಹಾವ ಭಾವದ ಬೆಸುಗೆ ಚಿಮ್ಮಿಹರು
ಮತ್ತೆ ಕೂಡುತ ವೈರ ಕಳೆ ಕಳೆಯುತ ದೂರ
ನಿತ್ಯ ನಿತ್ಯವು ಸತ್ಯ ಬೆಸೆಯುವ ಬಾರಾ
ರೇಖೆ ರೇಖೆಯ ದಾಟಿ ಗಡಿರೇಖೆಯ ಮೀಟಿ
ಒಳ ಒಳಗೆ ಚಿಮ್ಮುವ ಹಗೆ ಹೊಗೆಯಲಿ
ಮೂಡಿ ಬರಲಿ ಮತ್ತೆ ಒಮ್ಮತದ ಜೀವಕಳೆ
ಸೋದರತೆ ಚಿಗುರಲಿ ರಕ್ಷಾಬಂಧನದಲಿ
✍ಶ್ರೀಧರ ಗಸ್ತಿ ಧಾರವಾಡ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ