ಶನಿವಾರ, ಸೆಪ್ಟೆಂಬರ್ 18, 2021

ಕಲಿತಷ್ಟು ಶೂನ್ಯವಯ್ಯ (ಕವಿತೆ) - ಭರತ್ ಕೆ ಆರ್ ( ಕಾರಭ ) - ಹಾಸನ.

 ಕಲಿತಷ್ಟು ಶೂನ್ಯವಯ್ಯ 

ತಾಯಿಯೇ ಮೊದಲ ಗುರುವು
ಶಿಕ್ಷಕರೇ ಮಾರ್ಗದರ್ಶಕರು
ತಂದೆಯೇ ಬೆಂಬಲಿಸುವ ಗುರು
ಕಲಿಕೆಯೇ ಭವಿಷ್ಯದ ಭುನಾದಿ..

ಹುಟ್ಟಿನಿಂದಲೇ ಬರುವುದು ಕಲಿಕೆ
ಜೀವನ ಒಡ್ಡುವುದು ನಿತ್ಯ ಪರೀಕ್ಷೆ
ಬದುಕಿನ ಪಾಠವ ಕಲಿಸಿ
ಕಲಿಸುವುದು ಹೊಸಬಗೆಯ ತತ್ವವಾ....

ಕಲಿತಷ್ಟು ವಿದ್ಯೆಯ  ಸಾರವಿದೆ
ಬಿಡಿಸಲಾಗದಷ್ಟು  ಮಹತ್ವವಿದೆ
ಅರಿತಸ್ಟು ಜ್ಞಾನದ ಸುಧೆ ಇದೆ
ಅರಿಯದಾದಷ್ಟು ಅಂದಕಾರವಿದೆ..

ಪ್ರತಿ ಕ್ಷಣದ ಕಲಿಯುವಿಕೆ ಇದೆ
ಅನುಭವದ ಅನುಭೂತಿ ಇದೆ
ಕೇಳಿ ತಿಳಿಯುವ ಅಗತ್ಯ ಇದೆ
ಓದಿ ತಿಳಿಯುವ ಕಾಲಾವಕಾಶ ಇದೆ..

ತನ್ನ ಕೊನೆ ಉಸಿರು ಗೈದರು
ತಾನು ಕಲಿಯುವುದು ಸಾಕಷ್ಟಿದೆ
ಎಲ್ಲಾ ಕಲಿತವನು ಕಲಿಯದ್ದು ಬಹಳಷ್ಟಿದೆ
ಕೊನೆಗೆ ಕಲಿತಷ್ಟು ಶೂನ್ಯವಯ್ಶ....
  
   - ಕಾರಭ
ಭರತ್ ಕೆ ಆರ್ ( ಕಾರಭ )
S/O ರಂಗಸ್ವಾಮಿ.
ಎಂಜಿನಿಯರಿಂಗ್ ವಿದ್ಯಾರ್ಥಿ
ಹಾಸನ ಜಿಲ್ಲೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

7 ಕಾಮೆಂಟ್‌ಗಳು:

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...