ಶನಿವಾರ, ಸೆಪ್ಟೆಂಬರ್ 4, 2021

ಸರ್ವಪಲ್ಲಿ ರಾಧಾಕೃಷ್ಣನ್ (ಲೇಖನ) - ಮೋಹನ್ ಪ್ರಸಾದ್. ಎಸ್.

"ಸರ್ವಪಲ್ಲಿ ರಾಧಾಕೃಷ್ಣನ್ "

   ಸೆಪ್ಟೆಂಬರ್ 5 ಅನ್ನು ದೇಶಾದ್ಯಂತ ಶಿಕ್ಷಕರ ದಿನವನ್ನಾಗಿ ಆಚರಿಸುತ್ತಾರೆ. ಇದೆ ದಿನ ಮಹಾನ್ ಶಿಕ್ಷಕ ಸರ್ವ ಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟು ಹಬ್ಬ ಕೂಡ. ಶಿಕ್ಷಕರಾಗಿ ದೇಶದ ರಾಷ್ಟ್ರ ಪತಿಗಳಾಗಿ ರಾಧಾ ಕೃಷ್ಣನ್ ಅವರು ದುಡಿದಿದ್ದಾರೆ (ಪುಸ್ತಕ ಹಿಡಿಯುವ ಕೈ ದೇಶವನ್ನು ಆಳುತ್ತದೆ ಎಂದು ತೊರಿಸಿಕೊಟ್ಟಿದ್ದಾರೆ) ಮಹಾನ್ ವಿದ್ವಾಂಸ ಮತ್ತು ವಾಗ್ಮಿಯಾಗಿದ್ದ ಇವರು ಭಾರತದ ಅಭ್ಯುದಯಕ್ಕೆ ಮಹತ್ತರವಾಗಿ ಯೋಚಿಸಿದವರಾಗಿದ್ದಾರೆ. ತಮ್ಮ ಹುಟ್ಟು ಹಬ್ಬವನ್ನು ತಾವು ಮಾತ್ರ ಆಚರಿಸಿಕೊಳ್ಳಬಾರದು ಎಂಬ ಉದ್ದೇಶಕ್ಕಾಗಿ ಭವಿಷ್ಯವನ್ನು ರೂಪಿಸುವ ಗುರುಗಳ ದಿನವನ್ನಾಗಿ "ಸೆಪ್ಟೆಂಬರ್ 5" ಅನ್ನು ರಾಧಾಕೃಷ್ಣ ಅವರು ಘೋಷಿಸಿದ್ದಾರೆ. ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರು ಪೋಷಕರ ಸ್ಥಾನವನ್ನು ಪಡೆದುಕೊಳ್ಳುತ್ತಾರೆ ಅವರಿಗೆ ಯಾವ ರೀತಿಯ ಪುರಸ್ಕಾರವನ್ನು ನೀಡಿದರೂ ಅದು ಕಡಿಮೆಯೇ ಎಂಬುದು ರಾಧಾಕೃಷ್ಣ ಅವರ ಅಭಿಪ್ರಾಯವಾಗಿತ್ತು. 
        ಮಕ್ಕಳ ಬದುಕನ್ನು ರೂಪಿಸುವಲ್ಲಿ ಶಿಕ್ಷಕರು ಮಹತ್ತರವಾದ ಜವಾಬ್ಧಾರಿಯನ್ನು ಹೊಂದಿದ್ದು ಸಣ್ಣ ಮಗುವಿನಿಂದ ಹಿಡಿದು ಅವರನ್ನು ಸಮಾಜದಲ್ಲಿ ಉನ್ನತ ವ್ಯಕ್ಕಿಗಳನ್ನಾಗಿ ಮಾಡುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಹಿರಿದಾದುದು. ಮಹಾನ್ ವಿದ್ವಾಂಸರಾಗಿದ್ದು  ಅವರು ದೇಶ ವಿದೇಶಗಳನ್ನು ಸುತ್ತಿ ಅಲ್ಲಿನ ವಿಚಾರಗಳನ್ನು ಭಾರತಕ್ಕೆ ತರುವ ಪ್ರಯತ್ನವನ್ನು ಮಾಡಿದ್ದರು. ಇವರು ರಷ್ಯಾದ ಸ್ಟಾಲಿನ್ ಸ್ನೇಹವನ್ನು ಸಂಪಾದಿಸಿದರು  ತಮ್ಮ ಶಿಕ್ಷಕ ವೃತ್ತಿಯಲ್ಲೂ ಅವರು ಹೆಸರುವಾಸಿಯಾಗಿದ್ದರು ಮತ್ತು ತಮ್ಮ ಹುಟ್ಟಿದ ಹಬ್ಬವನ್ನು ಮಾತ್ರ ಈ ದಿನ ಆಚರಿಸಬಾರದು ಎಲ್ಲಾ ಶಿಕ್ಷಕರು ಈ ದಿನ ದೇಶವಾಸಿಗಳು ನೆನೆಯಬೇಕು ಎಂಬ ಕಾರಣಕ್ಕಾಗಿ" ಸೆಪ್ಟೆಂಬರ್ 5 "ಅನ್ನು ಶಿಕ್ಷಕರ ದಿನವನ್ನಾಗಿ ಅವರು ಮಾಡಿಸಿದರು.  ನಮ್ಮ ತಪ್ಪನ್ನು ತಿದ್ದಿ ನಮ್ಮ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕುವವರು ಶಿಕ್ಷಕರಾಗಿದ್ದು ಅವರನ್ನು ಪೂಜ್ಯಾನಿಯ ಭಾವನೆಯಿಂದ ಕಾಣಲಾಗುತ್ತದೆ. ಗುರುವನ್ನು ದೈವಿಕ ಭಾವದಿಂದ ಕಾಣುವ ಒಂದೇ ಕಾರಣವೆಂದರೆ ಪೋಷಕರ ಸ್ಥಾನವನ್ನು ಅವರು ಪಡೆದು ಕೊಂಡಿರುವುದಕ್ಕೆ ಶಿಕ್ಷಕರ ದಿನಾಚರಣೆಯ ಪ್ರಯುಕ್ತ  ಸರ್ವಪಲ್ಲಿ ರಾಧಾಕೃಷ್ಣನ್ ಅವರ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಅರಿಯೋಣ. 
ವಾಗ್ಮಿ ಶಿಕ್ಷಕರಾಗಿದ್ದು ರಾಧಾಕೃಷ್ಣನ್ ಅವರು ಭಾರತದ ಪ್ರಥಮ ಉಪರಾಷ್ಟ್ರಪತಿ (1952-1962)ಮತ್ತು ಎರಡನೇ ರಾಷ್ಟ್ರಪತಿಗಳಾಗಿದ್ದರು (1962-1967)
  "ಸರ್ವಪಲ್ಲಿ ರಾಧಾಕೃಷ್ಣನ್" ರವರು ದಕ್ಷಿಣ ಭಾರತದ ತಮಿಳುನಾಡಿನ "ತಿರುತ್ತಣಿ "ಎಂಬಲ್ಲಿ ಸೆಪ್ಟೆಂಬರ್ 5 1888ರಲ್ಲಿ. *ಸರ್ವಪಲ್ಲಿ *ಎಂಬಲ್ಲಿ ಮನೆತನದ ಹೆಸರಾದರೆ "ರಾಧಾಕೃಷ್ಣನ್ "ಎನ್ನುವುದು ಅವರ ತಂದೆ -ತಾಯಿ ಇಟ್ಟ ಮುದ್ದಿನ ಹೆಸರು. 
ತಂದೆ :- "ವೀರಸ್ವಾಮಿ " ಇವರು ಜಮೀನ್ದಾರರ ಬಳಿ ದಿನಗೂಲಿ ನೌಕರರಾಗಿ ಸೇವೆಗೈಯುತ್ತಾ ಮಗನ ಶ್ರೇಯೋಭಿವೃದ್ಧಿಗ್ಗೆ ಶ್ರಮಿಸಿದವರು ಇವರು ತಮ್ಮ ಸ್ಕಾಲರ್‌ಶಿಪ್ ಹಣದಲ್ಲಿಯೇ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಣವನ್ನು ಮುಗಿಸಿದ ಮೇಲೆ ಮದ್ರಾಸ್ ಕ್ರಿಶ್ಚಿಯನ್ ಕಾಲೇಜ್ ನಲ್ಲಿ "ತತ್ವಜ್ಞಾನ "ವಿಷಯದ ಮೇಲೆ ಬಿ. ಎ ಮತ್ತು ಎಂ. ಎ ಪದವಿಯನ್ನು ಸಂಪಾದಿಸಿದರು.
ಸ್ನಾತಕೋತ್ತರ ಪದವಿಯಲ್ಲಿ  ರಾಧಾಕೃಷ್ಣನ್ ಮಂಡಿಸಿದ ಪ್ರಬಂಧ "ದಿ ಎಥಿಕ್ಸ್ ಆಫ್ ವೇದಾಂತ " ಅವರ ಬದುಕಿನ ದಿಕ್ಕನ್ನೆ ಬದಲಾಯಿಸಿತು. ವೆಲ್ಲೂರಿನಲ್ಲಿರುವಾಗಲೇ ಕೇವಲ 16ನೇ ವಯಸ್ಸಿನಲ್ಲಿ *ಶಿವಕಾಮುಮ್ಮ* ಎಂಬುವವರನ್ನು ಬಾಳ ಸಂಗಾತಿಯನ್ನಾಗಿಸಿಕೊಂಡರು. 1909ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕರಾಗಿ ಅಚ್ಚುಮೆಚ್ಚಿನ ಶಿಕ್ಷಕ ವೃತ್ತಿ ಆರಂಭಿಸಿದರು. 1918ರಲ್ಲಿ "ಮೈಸೂರು ವಿಶ್ವವಿದ್ಯಾನಿಲಯದ "ತತ್ವಜ್ಞಾನ ವಿಭಾಗದ ಉಪನ್ಯಾಸಕರಾಗಿ ಆಯ್ಕೆಯಾದರುಇವರು "ದಿ ಫಿಲಾಸಫಿ ಆಫ್ ರವೀಂದ್ರನಾಥ ಠ್ಯಾಗೋರ್ "ಎಂಬ ಮೊದಲ ಪುಸ್ತಕ ವನ್ನು ಬರೆದರು. ಇವರು  ಮೈಸೂರಿನ ವಿಶ್ವವಿದ್ಯಾಲಯದಿಂದ ತೊರವಾಗಿ ಕಲ್ಕತ್ತಕ್ಕೆ ಹೊಗಾಬೇಕಾಗುತ್ತದೆ ಆಗ ಅವರನ್ನು ವಿದ್ಯಾರ್ಥಿಗಳು ರೈಲು ನಿಲ್ದಾಣದವರೆಗೆ ಹೂವಿನಿಂದ ಅಲಂಕೃತವಾದ ಕುದುರೆ ಸಾರೊಟಿನಲ್ಲಿ ವಿದ್ಯಾರ್ಥಿಗಳು ಹೊತ್ತೊಯ್ಯುವ ಆ ಘಟನೆಯನ್ನು ನೋಡಿದಾಗ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಯಾವ ರೀತಿಯಲ್ಲಿ ಮನಸೂರೆಗೊಂಡಿದ್ದರು ಹಾಗೂ ಈ ಒಂದು ಘಟನೆಯನ್ನು ಎಂದು ಮರೆಯಲಾರೆ ಎನ್ನುತ್ತಿದ್ದರು .
1931ರಲ್ಲಿ ಆಂಧ್ರಪ್ರದೇಶದ ವಿಶ್ವವಿದ್ಯಾಲಯಲ್ಲಿ ಉಪಕುಲಪತಿಗಳಾಗಿ ಆಯ್ಕೆಯಾದರು ಹಾಗೂ 1939ರಲ್ಲಿ ಬನಾರಸ್ ವಿಶ್ವವಿದ್ಯಾಲಯದಲ್ಲಿ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದರು. 
ಇವರ ಒಂದು ಸೇವೆಗೆ ಹಲವಾರು ಪ್ರಶಸ್ತಿಗಳು ದೊರೆತಿವೆ ಇವರಿಗೆ ಪ್ರತಿಷ್ಠಿತ *ಭಾರತ ರತ್ನ ಪ್ರಶಸ್ತಿ *(1954)ನೀಡಿ ಗೌರವಿಸಲಾಗಿದೆ.  
1967ರಲ್ಲಿ ತಮ್ಮ ನಿವೃತ್ತಿ ಜೀವನವನ್ನು ""ಮದ್ರಾಸಿನ ಮೈಲಾಪುರದಲ್ಲಿರುವ "" ತಮ್ಮ ಅಧಿಕೃತ ನಿವಾಸ *ಗಿರಿಜಾ* ದಲ್ಲಿ ಕಳೆದ ರಾಧಾಕೃಷ್ಣನ್ ರವರು 1975ರ ಏಪ್ರಿಲ್ 17 ರಂದು ಇಹಲೋಕ ತ್ಯಜಿಸಿದರು.    
ಭಾರತೀಯ ಶಿಕ್ಷಣ ಕ್ಷೇತ್ರಕ್ಕೋಂದು ಅರ್ಥವತ್ತಾದ ಚೌಕಟ್ಟನ್ನು ನೀಡುವ ಮೂಲಕ ಶಿಕ್ಷಣ ಕ್ಷೇತ್ರ,ತತ್ವಜ್ಞಾನ,ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ "ಡಾ.ಸರ್ವಪಲ್ಲಿ ರಾಧಾಕೃಷ್ಣನ್ "ರವರು ಭಾರತೀಯರ ಮನದಲ್ಲಿ ಅಚ್ಚೇಳಿಯದ ಛಾಪನ್ನು ಮೂಡಿಸಿದ್ದರೆ... 

ಎಲ್ಲಾರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು

-   ಮೋಹನ್ ಪ್ರಸಾದ್. ಎಸ್.



(ನಿಮ್ಮ ಬರಹಗಳ ‌ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...