ಶನಿವಾರ, ಸೆಪ್ಟೆಂಬರ್ 4, 2021

ಗುರು ಸ್ಮರಣೆ (ಕವಿತೆ) - ಶ್ರೀಮತಿ, ಭಾಗ್ಯ ಗಿರೀಶ್. ಹೊಸದುರ್ಗ.

ಗುರು ಸ್ಮರಣೆ

ಅಜ್ಞಾನ ನೀಗುವುದು, ಜ್ಞಾನದ ದಾಹ..
ಸನ್ಮಾರ್ಗ ತೋರುವುದು,ಸಜ್ಜನರ ಸ್ನೇಹ,
ನಿಸ್ವಾರ್ಥ ಭಾವದಿಂ ಕಳೆ,ಸ್ವಾರ್ಥದ ಮೋಹ.
ಧ್ಯಾನದಿಂ ರಚಿಸಿದ ಪದಗಳ ಸಾಲೇ,ಭಕ್ತಿಯ ಧೋಹಾ.

ಮೌಢ್ಯಗಳ ತೊಡೆದು ಹಾಕಿ,ಸುಜ್ಞಾನಿಯಾಗು
ಧರ್ಮಮಾರ್ಗದಲ್ಲಿ ನಡೆಯುವ ಸತ್ಪ್ರಜೆಯಾಗು
ಅದಕ್ಕೂ ಮೊದಲು,ನೀ ಗುರುವಿನ ಪ್ರಿಯ ಶಿಷ್ಯನಾಗು
ಮನುಜ ಎಲ್ಲರೊಳಗೊಂದಾಗು,ಪ್ರಕೃತಿಯ ಕೂಸಾಗು.

ಗುರಿ ತೋರುವ ಗುರುವಿನ ಅಡಿದಾವರೆಗೆ ನಮಿಸು.
ಅಚಲತೆಯಲಿ,ಸಾಧನೆ ಕಡೆ ಗಮನಹರಿಸು.
ಸತತ ಪ್ರಯತ್ನದಿ,ಸಾಧನೆಯ ಸಾಕಾರಗೊಳಿಸು
ನಿನ್ನ ಯಶಸ್ಸಿನೊಂದಿಗೆ,ಗುರುಗಳ ಹೆಸರ  ಅಜರಾಮರಗೊಳಿಸು.

ತ್ರಿಮೂರ್ತಿಗಳ ಸ್ವರೂಪ ತಾನಾಗಿರುವ..
ಶಿಷ್ಯರಿಗೆ,ಪಾರಮಾರ್ಥಿಕ ಜೀವನದ ಮೌಲ್ಯವ ತಿಳಿಸುವ
ಸಮಾಜದ ಸತ್ಪ್ರಜೆಯ ಹೊಣೆಹೊತ್ತು ನಿರ್ಮಿಸುವ,
*ಗುರು* ಸಮಾಜದ ಉದ್ಧಾರಕನಾಗಿ ಅವತರಿಸಿರುವ.

✍️ ಶ್ರೀಮತಿ, ಭಾಗ್ಯ ಗಿರೀಶ್.
          ಹೊಸದುರ್ಗ.
ಹೊಸದುರ್ಗ (ತಾ)ಚಿತ್ರದುರ್ಗ (ಜಿ)
ಮೋ:-೯೬೧೧೦೯೨೩೯೪.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...