ಬೆಳಕ ಕಿಡಿ
ಕಲಿಸಿದ ಒಂದೇ ವರ್ಣವು ನನ್ನ
ಕತ್ತಲ ದಾರಿಯ ದಾಟಿಸಿದೆ
ಬೆತ್ತಲೆ ಮನದೊಳು ಅಕ್ಷರದರಿವೆಯ
ತೊಡಿಸಿ ಪಾವನ ಮಾಡಿಸಿದೆ
ಗುರುವೇ ನಿಮ್ಮ ನೆರಳು ನನ್ನನು
ಆಸರೆ ನೀಡುತ ಕಾಯುತಿದೆ
ನಡೆದು ಬಂದ ದಾರಿಯ ನೋಡಲು
ನಿಮ್ಮಯ ಗುರುತೇ ಕಾಣುತಿದೆ
ನಿಮ್ಮಯ ಚರಣಕೆ ಬಾಗಿದೆನಂದು
ಬೀಗುವ ಹಂತಕೆ ಸಾಗಿಸಿದೆ
ಮೃದು ಕರದಲ್ಲಿ ಪಾದವ ಮುಟ್ಟಿದೆ
ತ್ರಿಲೋಕ ದೇವತೆಗಳ ತೋರಿಸಿದೆ
ಬರಿದು ಬಾಳಿಗೆ ತೋರಿದ ಬೆಳಕು
ತಮವನು ಅಳಿಸಿ ಓಡಿಸಿದೆ
ಆರದ ಹಣತೆಯ ಹಚ್ಚಿದ ಕಾರಣ
ಇನ್ನೂ ಝಗಮಗ ಬೆಳಗುತಿದೆ
ಭವಿಷ್ಯದ ಗುರಿಯ ಅರುಹಿದಿರಂದು
ಎನ್ನಯ ಬದುಕನು ಬದಲಿಸಿದೆ
ಬೆನ್ನ ಹಿಂದೆ ನೀವಿರುವ ಕಾರಣ
ಗುರಿಯೂ ಹತ್ತಿರ ಎನಿಸುತಿದೆ
ಪಾವನನಾಮವ ನೆನೆಯುವೆನರತ
ಕರುಣಿಸಲೆನಗದು ಮುಕ್ತಿಯನು
ಏಸು ಜನುಮಗಳು ಹೊತ್ತರು ಕೊನೆಗೆ
ತೀರಿಸಬಹುದೇ ಋಣವನ್ನು..
- ಸುರೇಶ್ ಕಲಾಪ್ರಿಯಾ ಗರಗದಹಳ್ಳಿ
ಶಿಕ್ಷಕರು ಹಾಗೂ ಬರಹಗಾರರು
ಗಂಗಾವತಿ
ದೂ :೯೬೧೧೧೭೦೫೬೦.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಬರಹಗಾರರನ್ನು ಗುರುತಿಸಿ ಅವರ ಸಾಹಿತ್ಯಕ್ಕೆ ವೇದಿಕೆ ಕಲ್ಪಿಸುವ ಮೂಲಕ ಪ್ರೋತ್ಸಾಹ ನೀಡುತ್ತಾ ಬರಹಗಾರರಿಗೆ ಪ್ರೇರಣೆ ನೀಡುತ್ತಿರುವ ವಿಚಾರ ಮಂಟಪ ಸಾಹಿತ್ಯ ಪತ್ರಿಕೆಗೆ ಧನ್ಯವಾದಗಳು 🙏🙏
ಪ್ರತ್ಯುತ್ತರಅಳಿಸಿ