ಶಿಕ್ಷಕರ ದಿನಾಚರಣೆ
ಕಲಿಸಿದ ಗುರುವಿನ ಹಿರಿಮೆಗೆ ಗರಿಮೆಯ ದಿನವು
ಖುಷಿಯಲಿ ತೇಲುತ ಸಾಗಿದೆ ಮಗುವ ಮನವು
ಅಕ್ಷರ ಮಂತ್ರವ ತಲೆಯಲಿ ಬಿತ್ತಿ ಜ್ಞಾನವ ಮೂಡಿಸಿದ
ಮನುಕುಲವ ಬೆಳಗಿದ ದೇವರ ಪ್ರತಿರೂಪ
ಗುರುವೇ ನಿನಗಿದೋ ಕೋಟಿ ಕೋಟಿ ನಮನ.||
ಗುರುವಿನ ದಿನಕೆ ರಾಧಾಕೃಷ್ಣನ್ ರ ಹೆಸರಿನ ಸ್ಮರಣೆ
ಕಲಿಕಾ ಕಾಯಕದಿ ತೊಡಗಿದ ಗುರುವಿಗೆ ಪ್ರೇರಣೆ
ಹೆಸರ ಬಯಸದ ಕಾಯಕಯೋಗಿಯೇ ಗುರುವು
ನಭದಿ ಗುರುವಿಗೆ ಯಾರಿಹರು ಸರಿಸಮವು
ಗುರುವೇ ನಿನಗಿದೋ ಕೋಟಿ ನಮನ.||
ಮಕ್ಕಳ ಮನಸಲಿ ಜ್ಞಾನ ಗಳಿಕೆಯ ಕಿಡಿಯ ಹೊತ್ತಿಸಿ
ಅವರವರ ಭವಿಷ್ಯವ ಬೆಳಗುವ ಮಾರ್ಗವ ತೋರಿಸಿ
ಮಕ್ಕಳ ಮನಸಲಿ ಚೇತನ ಶಕ್ತಿಯ ತುಂಬುತ ಸಾಗಿ
ಸನ್ನಡತೆಯ ಕಲಿಸಿದೆ ಗುರು ಹಿರಿಯರಿಗೆ ಬಾಗಿ
ಗುರುವೇ ನಿನಗಿದೋ ಕೋಟಿ ನಮನ.||
ಸಕಲ ದೇವಗಣಕೂ ಗುರುವೇ ಆದಿಯು
ಸಾಧನೆ ಛಲದ ಮನಕೆ ಹಾದಿಯ ಕನ್ನಡಿಯು
ಸರಳ ಸಜ್ಜನಿಕೆಗೆ ಗುರುವೇ ಜೀವನ ಪಾಠವು
ಓಂ ಮಂತ್ರವ ಕಲಿಸಿ ಬಾಳ ಬೆಳಗಿದ ದಾರಿದೀಪವು
ಗುರುವೇ ನಿನಗಿದೋ ಕೋಟಿ ನಮನ. ||
- ಪುರುಷೋತ್ತಮ ಪೆಮ್ನಳ್ಳಿ
ಪಾವಗಡ ತಾ ತುಮಕೂರು ಜಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ