'ಅಮ್ಮನ ಮಡಿಲು'
'ತಾಯಿಯೇ ಮೊದಲ ದೇವರು ' ಅನ್ನುತ್ತಾರೆ ಎಷ್ಟು ಸತ್ಯ ಅಲ್ಲವಾ! ಅಮ್ಮನಿರಲು ಸ್ವರ್ಗ ಕೂಡ ನಾಚುವುದು ಅವಳೆದುರಿಗೆ. ಮನೆಯ ಯಜಮಾನ ತಂದೆಯಾದರೆ , ಅವರ ಜವಾಬ್ದಾರಿನೇ ಪ್ರತಿ ಮನೆಯ ಅಮ್ಮ . ನಾವೆಲ್ಲರೂ ಚಿಕ್ಕವರಿದ್ದಾಗ ಎನಾದರೂ ಬೇಕಾದರೆ ನಾವು ತಂದೆಯ ಬಳಿ ಹೇಳಲು ಹೆದರಿಕೊಳ್ಳುವುದು ನೆನಪಾಗುತ್ತದೆ. ಆಗ ಅಮ್ಮನ ಸೀರೆ ಸೆರಗಿನ ಹಿಂದೆ ಹೋಗಿ ಅಡಗಿಕೊಂಡು ಗುಟ್ಟಾಗಿಅಮ್ಮ ನನಗೆ ಅದು ಬೇಕು ಇದು ಬೇಕು ಅನ್ನುತ್ತಿದ್ದೇವು. ಆಗ ಅವರು ತಂದೆಯವರ ಬಳಿ ಹೋಗಿ ಹೇಳುತ್ತಿದ್ದರು. ತಂದೆಯವರು ಬೈದರೆ ಒಂದೆರಡು ಬೈಗುಳ ಅನ್ನಿಸಿಕೊಂಡು ಏನ್ನೂ ಆಗೇ ಇಲ್ಲ ಅನ್ನೋ ನಿಸ್ವಾರ್ಥ ಮುಗ್ದ ಮನಸ್ಥಿತಿ ಒಬ್ಬ ತಾಯಿಯಿಂದ ಮಾತ್ರ ಸಾಧ್ಯ. ಅಂತವಳ ಗರ್ಭದಲ್ಲಿ ಜನಿಸಿದ ನಾವೆಲ್ಲರೂ ಅದೆಷ್ಟು ಪುಣ್ಯ ಮಾಡಿದ್ದೇವೆ ನಾವು. ನನ್ನ ಅಮ್ಮನಿಗೆ ನಾವು ಮೂವರು ಮಕ್ಕಳು. ನಮ್ಮಲ್ಲಿ ಯಾರನ್ನು ಹೆಚ್ಚು ಕಡಿಮೆ ಅನ್ನುವ ಕಲ್ಮಶ ಒಡ್ಡಿರದ ಏಕೈಕ ಜೀವ ಅಮ್ಮ . ದುಂಭಿ ಕುಸುಮಕ್ಕೆ ಮುತ್ತಿಗೆ ಹಾಕಿದಾಗ ಅದು ಹೀರುವ ಸವಿಯಾದ ರಸದಂತೆ, ಅಮ್ಮನ ಮಡಿಲು ಸೇರುವ ತವಕ ನನಗೆ. ಹಳೆಯ ನೆನಪು ಮರುಕಳಿಸುತ್ತದೆ. ನಾನು ಚಿಕ್ಕವಳಿರುವಾಗ ಅಮ್ಮ ಕಂಕುಳಲ್ಲಿ ಪುಟ್ಟ ಕೂಸಿಗೆ ನಲಿದಾಡಿದ ನೆನಪು, ಅವಳು ಅಮೃತ ಉಣಬಡಿಸಿದ ನೆನಪು, ಅವಳ ಅಮೃತ ಹಸ್ತದಿಂದ ಕೈತುತ್ತು ನೀಡಿ ಬೆಳದಿಂಗಳ ಊಟ ಮಾಡಿಸಿದ ಸವಿನೆನಪು ಮತ್ತೆ - ಮತ್ತೆ ಮನತುಂಬಿ ಬರುತ್ತದೆ. ಅವಳ ಸ್ಪರ್ಶವೇ ನನಗೆ ಆನಂದದ ಹೋನಲು ಆದ ಅನುಭವ ನೀಡುತ್ತದೆ. ಇಷ್ಟೇಲ್ಲಾ ಸಡಗರ ಸಂಭ್ರಮದ ನಡುವೆ ಒಂದೇ ಒಂದು ಸನ್ನಿವೇಶ ದುಖಃದಲ್ಲಿ ಇಡೀ ನಮ್ಮ ಕುಟುಂಬವನ್ನು ನರಳಾಡಿಸಿತು. ನನ್ನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರು.. ಇದು ತುಂಬಾ ಅಪಾಯಕಾರಿಯಾಗಿತ್ತು. ಇದು ಅವರ ಪ್ರಾಣಕ್ಕೆ ಕಂಟಕ ತಂದೋದಾಗಿತ್ತು. ಇದು ನನ್ನ ಕುಟುಂಬಕ್ಕೆ ಆಘಾತಕಾರಿ ವಿಷಯ. ಕಡೆಗೂ ನನ್ನ ತಾಯಿಯ ಭಕ್ತಿಯ ಫಲವೋ, ನಮ್ಮ ಅದೃಷ್ಟ ವೋ, ನಮ್ಮ ಮೇಲೆ ಅವರಿಗಿರುವ ಆಸೆ, ಆಕಾಂಕ್ಷೆಯೋ ಅವರನ್ನು ನಮಗೆ ಮತ್ತೆ ಮರುಕಳಿಸಿತು. ಇದಕ್ಕೆ ನಾನು ಆ ಕಣ್ಣಿಗೆ ಕಾಣದ ಭಗವಂತನಿಗೆ ಎಂದೂ ಋುಣಿಯಾಗಿರುವೆ. 'ತಾಯಿಯೇ ಸರ್ವಸ್ವ, ಶಕ್ತಿ, ಎಲ್ಲಾ ಅವಳು ನೀಡಿದ ವರ ಈ ಪವಿತ್ರವಾದ ಸಂಬಂಧವನ್ನು ಎಂದೂ, ಇಂದೂ ಎಂದೆಂದೂ ಜೊತೆಗೂಡಿ ಆನಂದ, ಅನುಭವ, ಸಂಸ್ಕಾರ, ನೀಡಲಿ. 'ತಾಯಿಯ ಮಡಿಲು ಎಂದೂ ಮುಗಿಯದ ಕಡಲು'. ನಿನಗೆ ಆ ದೇವರು ಸುಖ- ಸಂತೋಷ, ನಗು- ಅಳು, ಎಲ್ಲಾ ಸಮನ್ವಯ ಮನಸ್ಸಿಂದ ಸ್ವೀಕರಿಸುವ ಹಾಗೇ ದೇವರು ಆಶೀರ್ವದಿಸಲಿ ಎಂದೂ ನಾನು ಮನಸಾರೆ ಬೇಡಿಕೊಳ್ಳುವೆ..........
- ಸೌಮ್ಯ ಗಣಪತಿ ನಾಯ್ಕ
ಕಾನಸೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ