ಮಂಗಳವಾರ, ಅಕ್ಟೋಬರ್ 12, 2021

ಅಪ್ಪಟ ಅಡಿಕೆಯ ಕಂಪು (ಕವಿತೆ) - ಶಾಂತಾರಾಮ ಶಿರಸಿ, ಉತ್ತರ ಕನ್ನಡ.

ಅಪ್ಪಟ ಅಡಿಕೆಯ ಕಂಪು, 

ಹಳ್ಳಿಯ ಗದ್ದೆ ಬಯಲಿನ ತೋಟದ ಕಟ್ಟೆಯಿಂದ-ಅಂತರಾಷ್ಟ್ರೀಯ ಮಾರುಕಟ್ಟೆಯತನಕ ಹಬ್ಬಿಸಿಕೊಂಡಿದೆ ತನ್ನ ಛಾಪು...

ಅಡಿಕೆಯು ಮೊಳಕೆಯೊಡೆದು ಸಸಿಯಾಗಿ ಆಕಾಶದೆತ್ತರಕ್ಕೆ ಹೆಮ್ಮರವಾಗಿ ಬೆಳೆದ ಮೇಲೆ ತಲೆ ಎತ್ತಿ ನೋಡಬೇಕು ಎತ್ತರ ಎತ್ತರ,
ಅಡಿಕೆ ಸಸಿಯ ಬೆಳೆಸುವಲ್ಲಿ ರೈತನ ಬೆವರಿನ ಶ್ರಮ ಅಪಾರ, 
೫-೬ ವರ್ಷಗಳಲ್ಲಿ ಅಡಿಕೆ ಎಂಬ ಫಲ ನೀಡಿ ಹಲವರ ಬದುಕಿಗೆ ಬೆಳಕ  ನೀಡುವ ವಿಚಾರ-ನಿರಂತರ,
ನಮ್ಕಡೆ ಅಡಿಕೆ ತೋಟವೆಂದು ಎಲ್ಲೆಲ್ಲೂ ಪ್ರಚಾರ.. 

ಅಡಿಕೆ ಹಾಳೆಯಿಂದ ಮನೆಯ ಸಾರಿಸುವುದು ಮರೆಯಾಗಿದೆ ಎಂದರೆ ನೀವು ನಂಬುವವರೇ, 
ವಾವ್ಹ್ ಅದ್ಭುತ! 
ತಲೆಗೆ ತಂಪು ನೀಡುವ ಅಡಿಕೆ ಹಾಳೆ ಟೊಪ್ಪಿ ಮಾಡುವವರೂ ಕ್ರಮೇಣ ಮರೆ-ಹಾಕಿಕೊಳ್ಳುವವರೂ ಕಣ್ಮರೆ, 
ಅಡಿಕೆ ಹಾಳೆಗಳು ಹಲವರಿಗೆ ಊಟದ ತಟ್ಚೆ-ಲೋಟ,ಹಾಳೆಯ ಕ್ರಾಪ್ಟ್ ಮಾಡುವಲ್ಲಿ ಉದ್ಯೋಗ ಸೃಷ್ಟಿಸಿ ದುಡಿಯುವ ಕೈಗಳಿಗೆ ನೀಡಿವೆ ಆಸರೆ.. 

ಬೀಸುವ ತಂಗಾಳಿಗೆ ತಲೆದೂಗಿ ಓಲಾಡುತಿರು ಅಡಿಕೆಯ ಹಚ್ಚ-ಹಸಿರ ಹೆಡೆಗಳೇ ಸುಂದರ, 
ಅಡಿಕೆ ಮರದ ಸಿಂಗಾರವೇ ದೇವರಿಗೆ ಮುಡಿಯುವ ಬಂಗಾರ,
ಅವೆಷ್ಟೋ ಜನರಿಗೆ ಉದ್ಯೋಗ ನೀಡಿ ಜೀವನಕ್ಕೆ ದಾರಿದೀಪವಾಗಿರುವುದೇ ಅದ್ಭುತ ವಿಚಾರ.... 
 ಅಡಿಕೆಯ ಮರಕೆ ಸ್ಪರ್ಷದ ಅಪ್ಪುಗೆಯ ನೀಡುವ ಅಂಬಾಡಿ-ತಾಂಬೂಲದೆಲೆ, 
ಕಪ್ಪುಬಂಗಾರವೆಂದು ಖ್ಯಾತಿ ಪಡೆದ ಕಾಳುಮೆಣಸಿನ ಆಲಿಂಗನದ ಪ್ರೀತಿಯ ಸೆಲೆ, 
ಕಣ್ತುಂಬಿಕೊಳ್ಳುವ ನಾವೇ ಭಲೇ-ಭಲೇ.... 

ಅಡಿಕೆ ಕೊಯ್ಲಿನ ಕೊನೆಗೌಡ್ರು ಬಲು ಧೈರ್ಯವಂತ, 
ಎಲ್ಲರಿಗೂ ನೀಡುವನು ಸಾಥ್, 
ಹಳ್ಳಿ ಸೊಗಡಿನ ಪ್ರದೇಶದಲ್ಲಿ 
ಅವನೇ ಡಿಮ್ಯಾಂಡ್ನಲ್ಲಿರೋ ಈ ಭುವಿಯ ಸಂಜಾತ-ಹಲವರಿಗೆ ಉದ್ಯೋಗದಾತ, 


ಅಡಿಕೆ ಗೊನೆಗಳಿಗೆ ಔಷಧಿ ಸಿಂಪಡಿಸುವಿಕೆ/ಕೊಟ್ಟೆ ಕಟ್ಟುವಿಕೆ-ಅಡಿಕೆಯ ಕೊಯ್ಯುವಿಕೆ ಸುಲಿಯುವಿಕೆ ಒಣಗಿಸುವಿಕೆ,
ಬೇರೆ-ಬೇರೆ ಪಡಿಯಾಗಿ 
(ಅಡಿಕೆಯ ವರ್ಗೀಕರಣ) ಬೇರ್ಪಡಿಸುವಲ್ಲಿ ಬಹಳ ಉತ್ಸುಕತೆ.. 

ಹಳ್ಳಿ ಕಟ್ಟೆಯಲ್ಲಿನ ಅಡಿಕೆಯ ಚೀಲಗಳು ಹತ್ತಿರದ ಮಾರುಕಟ್ಟೆಯಿಂದ ಅಂತರಾಷ್ಟೀಯ ಮಾರುಕಟ್ಟೆಯವರೆಗೆ ಸಾಗಾಟ, 
ಉತ್ತಮವಾದ ಬೆಂಬಲ ಬೆಲೆಗೆ (ರೇಟಿಗೆ)ಅಡಿಕೆಯ ಮಾರಾಟ, 
ಗುಟ್ಕಾ & ಪಾನ್ ಸುಪಾರಿ,ಪಾನ್ಮಸಾಲಾ ಚಾಕೋಲೇಟ್ ಇತ್ಯಾದಿಯಾಗಿ ಪರಿವರ್ತನೆ ಪಡೆದು ದೇಶಿ-ವಿದೇಶಿ ವ್ಯಾಪಾರಿ  ಮಾರ್ಕೇಟ್ ಗಳಲ್ಲಿ ತುಂಬಾ ಶ್ರೇಷ್ಠ, 
ಜನರು ಅವುಗಳ ಖರೀದಿಗೆ ಆಡುವರು ಆಟ-ಕಾದಾಟ-ಏನೋ ಹುಡುಗಾಟ... 

ಹಣದ ಆಗಮನ,
ಎಲ್ಲದರ ಹಿಂದೆ ರೈತನ ಬೆವರಿನ ಹನಿಯ ದಾನ, 
ಬದುಕಿಗೆ ಭರವಸೆಯು- ನೆಮ್ಮದಿಯ ಸುಖ ಜೀವನ, 
ಇದು ನಮ್ಮ ಹಳ್ಳಿಯ ಬದುಕಿನ ನಿರಂತರ ಯಾನ... 
ಇಂತಹ ಭುವಿಯ ಸೃಷ್ಟಿಯ ಸೃಷ್ಟಿಕರ್ತನಿಗೆ ನಿತ್ಯವೂ ಸಲ್ಲಿಸುತ್ತಿರುವೆವು ನಮನ... 
- ಶಾಂತಾರಾಮ ಶಿರಸಿ, ಉತ್ತರ ಕನ್ನಡ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...