ಕನಸಿನ ಹುಡುಗಿ
ಕನಸಲಿ ಬರುವ ಹುಡುಗಿ
ನನ್ನ ಮನವು ಕಾತರಿಸುತಿದೆ ನಿನಗಾಗಿ
ಹಂಬಲಿಸುತ್ತಿರುವೆ ನಿನ್ನ ಆಲಿಂಗನಕ್ಕಾಗಿ
ಒಂದಾಗಿ ಪ್ರೀತಿಸುವ ಬಾರೆ ಓ ಬೆಡಗಿ
ಪ್ರತಿ ಹೆಜ್ಜೆಯಲ್ಲೂ ನಾನಿರುವೆ ನಿನ್ನೊಂದಿಗೆ
ನೀನೇ ಆಸರೆ ನನ್ನೀ ಬದುಕಿಗೆ
ಕಾವಲಾಗುವೆ ನಿನ್ನ ಆಕರ್ಷಕ ಕಂಗಳಿಗೆ
ಜೊತೆಗಿರುವೆ ನಾ ಮಣ್ಣಲಿ ಮಣ್ಣಾಗುವವರೆಗೆ
ನಿನ ಸ್ಪರ್ಶ ಸಿಗಲು ನಾ ರೋಮಾಂಚಿತ
ಜೋರಾಗುತಿದೆ ನನ್ನೆದೆ ಬಡಿತ
ನಿನ್ನೊಂದಿಗೆ ಪ್ರೀತಿ ಹೇಳಲು ನಾ ಮೂಕವಿಸ್ಮಿತ
ನಿನ್ನ ಪ್ರೀತಿಯು ಕಲ್ಪನೆಗಷ್ಟೇ ಸೀಮಿತ
ನಿನ್ನಾಗಮನದ ನಿರೀಕ್ಷೆಯಲ್ಲಿ ನಾನಿರುವೆ
ಹೃದಯವ ನಿನಗೊಪ್ಪಿಸಲು ಕಾದಿರುವೆ
ನೀ ಆಗಸದ ಚಂದಿರನಂತಿರುವೆ
ಎಟುಕದ ಆಗಸಕೆ ನಾ ಏಣಿ ಹಾಕುತಿರುವೆ
✍️ಮೇಘನಾ ಶಿವಾನಂದ್
ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿನಿ
ಬೇಡ್ಕಣಿ, ಸಿದ್ದಾಪುರ (ಉ.ಕ).
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ